3:15 AM Tuesday27 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ಅರಮನೆ ವಿಚಾರವಾಗಿ ಸಚಿವ ಯತೀಂದ್ರ ಹೇಳಿಕೆಗೆ ವಿರೋಧ: ಪ್ರಮೋದಾದೇವಿ ಒಡೆಯರ್ ಬೆಂಬಲಕ್ಕೆ… Chikkamagaluru | ಆಟೋ‌- ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ: ಬೈಕ್ ಸವಾರರ ಸ್ಥಳದಲ್ಲೇ… ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ

ಇತ್ತೀಚಿನ ಸುದ್ದಿ

ಮನೆ ಬಿಟ್ಟು ಬಂದ ಕೋಲಾರದ ಯುವತಿಯ ಮೇಲೆ ಅತ್ಯಾಚಾರ: ವೇಶ್ಯಾವಾಟಿಕೆ ಮಾರಲು ಯತ್ನ: ಆರೋಪಿ ಬಂಧನ

12/02/2022, 18:15

ಬೆಂಗಳೂರು(reporterkarnataka.com): ಮನೆ ಬಿಟ್ಟು ಬಂದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿ, ನಂತರ ವೇಶ್ಯಾವಾಟಿಕೆ ಮಾರಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮನೆಯವರೊಂದಿಗೆ ಜಗಳ ಮಾಡಿಕೊಂಡು ಕೋಲಾರದಿಂದ ಯುವತಿ ಬೆಂಗಳೂರಿಗೆ ಬಂದಿದ್ದಳು. ಮೆಜೆಸ್ಟಿಕ್ ಗೆ ತಲುಪಿದ ಯುವತಿ ಕಂಗಾಲಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೂತಿದ್ದಳು. ಈಕೆಯನ್ನು ಗಮನಿಸಿದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ನಾಗೇಶ್ ಎಂಬಾತ ಆಕೆಗೆ ಸಹಾಯ ಮಾಡುವುದಾಗಿ ನಂಬಿಸಿದ್ದಾನೆ.

ಯುವತಿ ಆತನ ಮಾತು ನಂಬಿ ದೇವನಹಳ್ಳಿಯ ಆತನ ಮನೆಗೆ ಹೋಗಿದ್ದಳು. ಈ ವೇಳೆ ಅಲ್ಲಿ ಆಕೆಯ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಆಕೆಯನ್ನು ಹೆದರಿಸಿ, 10 ಸಾವಿರ ರೂಪಾಯಿಗಳಿಗೆ ವೇಶ್ಯಾವಾಟಿಕೆ ಜಾಲದೊಂದಿಗೆ ಡೀಲ್ ಕುದುರಿಸಿಕೊಂಡ ಆರೋಪಿ, ಆಕೆಯನ್ನು ಮಾರುವ ಉದ್ದೆಶದಿಂದ ದೆಹಲಿಗೆ ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ.

ಇವರಿಬ್ಬರನ್ನು ನೋಡಿ ಅನುಮಾನಗೊಂಡ ವಿಮಾನ ನಿಲ್ದಾಣ ಪೊಲೀಸರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಈ ಹಿಂದೆಯೂ ಯುವತಿಯರನ್ನು ದೆಹಲಿಯಲ್ಲಿ ಮಾರಾಟ ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು