ಇತ್ತೀಚಿನ ಸುದ್ದಿ
ಹಾವು ಕೊಂದ ಸ್ಮಾರ್ಟ್ ಸಿಟಿ ಎಂಜಿನಿಯರ್ : ಅರಣ್ಯ ಇಲಾಖೆಯಿಂದ ಎಫ್ ಐಆರ್ ದಾಖಲೆ
09/12/2021, 09:06
ಶಿವಮೊಗ್ಗ(reporterkarnataka.con):
ಶಿವಮೊಗ್ಗ ಸ್ಮಾರ್ಟ್ ಸಿಟಿಯ ಎಂಜಿನಿಯರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಅದು ಅಂತಿತ ಪ್ರಕರಣವಲ್ಲ. ನಾಗರ ಹಾವು ಕೊಂದ ಪ್ರಕರಣದಲ್ಲಿ ಸ್ಮಾರ್ಟ್ ಸಿಟಿ ಎಂಜಿನಿಯರ್ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಇಲ್ಲಿನ ಎಪಿಎಂಸಿ ಸಮೀಪದ ಆಂಜನೇಯ ಸ್ವಾಮಿ ದೇವಸ್ಥಾನದ ತೆರವಿನ ವೇಳೆಯಲ್ಲಿ ನಾಗರ ಹಾವನ್ನು ಹೊಡೆದು ಸಾಯಿಸಿದ ಶಿವಮೊಗ್ಗ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಜಯಕುಮಾರ್ ಹಾಗೂ ರಾಜ್‌ಕುಮಾರ್ ಮತ್ತು ಕೆಲಸ ಮಾಡುತ್ತಿದ್ದ ನಾಗಪ್ಪ ಅವರ ವಿರುದ್ಧ ಅರಣ್ಯ ಇಲಾಖೆಯ ಶಂಕರ ವಲಯ ವಿಭಾಗದ ಅಧಿಕಾರಿ ದೂರು ದಾಖಲಿಸಿದ್ದಾರೆ.

ಹಾವನ್ನು ಹೊಡೆದು ಸಾಯಿಸಿದ ಕುರಿತು ನಗರಪಾಲಿಕೆ ಸದಸ್ಯ ರಾಹುಲ್
ಬಿದರೆ ಸೇರಿದಂತೆ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ವಿಜಯ್‌ಕುಮಾರ್ ಸೇರಿದಂತೆ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ ನಂ.9, 31 ಮತ್ತು 51ರ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.














