6:48 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

Puttur | ಮುಳಿಯ 90 ದಿನಗಳ ‘ಸಿಲ್ವರ್ ಮ್ಯಾರಥಾನ್ 2026’ ಚಾಲನೆ

19/06/2026, 18:47

ಪುತ್ತೂರು/ಕೊಡಗು(reporterkarnataka.com): ಮುಳಿಯ ಗೋಲ್ಡ್ & ಡೈಮಂಡ್ಸ್‌ನ ವಿಶೇಷ ಎಕ್ಸ್‌ಕ್ಲೂಸಿವ್ ಬೆಳ್ಳಿ ಆಭರಣಗಳ ಬ್ರ್ಯಾಂಡ್ “ಸಿಲ್ವೆರಿಯಾ” ವತಿಯಿಂದ “ಸಿಲ್ವರ್ ಮ್ಯಾರಥಾನ್ 2026” ಯೋಜನೆಗೆ ಇಂದು ಚಾಲನೆ ನೀಡಲಾಯಿತು.
ಈ 90 ದಿನಗಳ ವಿಶೇಷ ಯೋಜನೆಯು ಸೆಪ್ಟೆಂಬರ್ 14, 2026ರವರೆಗೆ ನಡೆಯಲಿದ್ದು, ಗ್ರಾಹಕರಿಗೆ ವೈವಿಧ್ಯಮಯ 92.5 ಶುದ್ಧತೆಯ ಸ್ಟರ್ಲಿಂಗ್ ಸಿಲ್ವರ್ ಆಭರಣಗಳನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.
92.5 ಶುದ್ಧತೆಯ ಬೆಳ್ಳಿ ಸರಗಳು , ನೆಕ್ಲೇಸ್‌ಗಳು, ಕಾಲ್ಗೆಜ್ಜೆ , ಮಕ್ಕಳ ಜ್ಯುವೆಲ್ಲರಿ, ಉಂಗುರಗಳು, ಬಳೆಗಳು, ಕಿವಿಯೋಲೆಗಳು ಹಾಗೂ ವಾಚ್‌ಗಳ ವಿಶೇಷ ಸಂಗ್ರಹವನ್ನು ಈ ಅವಧಿಯಲ್ಲಿ ಗ್ರಾಹಕರು ವೀಕ್ಷಿಸಿ ಖರೀದಿಸಬಹುದಾಗಿದೆ. ಚಿನ್ನಾಭರಣಗಳಲ್ಲಿ ಲಭ್ಯವಿರುವ ಬಹುತೇಕ ಎಲ್ಲಾ ವಿನ್ಯಾಸಗಳು ಮತ್ತು ವೈವಿಧ್ಯತೆಗಳು ಈಗ ಬೆಳ್ಳಿ ಆಭರಣಗಳಲ್ಲಿಯೂ ಲಭ್ಯವಿವೆ.
ಈ 90 ದಿನಗಳ ಅವಧಿಯಲ್ಲಿ ಪ್ರತಿ ಖರೀದಿಯಲ್ಲಿ ₹5,000 ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಸಿಲ್ವರ್ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟರ್, ಫ್ರಿಜ್, ಏರ್ ಫ್ರೈಯರ್ ಸೇರಿದಂತೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಹಳೆಯ ಬೆಳ್ಳಿ ಆಭರಣಗಳನ್ನು ಹೊಸ ಸಿಲ್ವೆರಿಯಾ ಆಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ವಿಶೇಷ ಸೌಲಭ್ಯವೂ ಲಭ್ಯವಿದೆ.
ಈ ಉತ್ಸವದ ಅಂಗವಾಗಿ ಪ್ರತಿ ಶಾಖೆಯಲ್ಲೂ ಬೆಳ್ಳಿ ಆಭರಣಗಳ ಕುರಿತ ವಿಚಾರ ಸಂಕಿರಣ, ಫ್ಯಾಷನ್ ಶೋ, ನಿತ್ಯೋಪಯೋಗಿ ಬೆಳ್ಳಿ ಪಾತ್ರೆ ಪಗಡಿಗಳ ಪ್ರದರ್ಶನ ಮಾರಾಟ, ಸೆಲ್ಫಿ ಸ್ಪರ್ಧೆ ಹಾಗೂ ಶಾಲಾ-ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ ಬ್ಯೂಟಿಷಿಯನ್‌ಗಳು ಮತ್ತು ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳೂ ನಡೆಯಲಿವೆ.

*ವಿಶೇಷ ಅಭಿಪ್ರಾಯ:*
“ಈಗ ಮದುವೆ ಇನ್ನಿತರ ಸಮಾರಂಭಗಳಲ್ಲಿ ಮ್ಯಾಚಿಂಗ್ ಜ್ಯುವೆಲ್ಲರಿಗಳ ಟ್ರೆಂಡ್ ಹೆಚ್ಚಾಗುತ್ತಿದೆ. ಮದುವೆಯ ದಿನ ವಧು ಮತ್ತು ಕುಟುಂಬದವರು ಚಿನ್ನಾಭರಣಗಳನ್ನು ಧರಿಸುತ್ತಾರೆ.
ಹಾಗೆಯೇ ವಿದೇಶಿ ವಿನಿಮಯ ಉಳಿಸುವ ನಿಟ್ಟಿನಲ್ಲಿ ಮೆಹಂದಿ, ಸಂಗೀತ ಅಥವಾ ರಿಸೆಪ್ಷನ್ ಕಾರ್ಯಕ್ರಮಗಳಲ್ಲಿ ಬೆಳ್ಳಿ ಆಭರಣಗಳನ್ನು ಧರಿಸುವ ಹೊಸ ಫ್ಯಾಷನ್ ಆರಂಭ ಯಾಕೆ ಮಾಡಬಾರದು ?” ಎಂದು ಕೇಶವಪ್ರಸಾದ್ ಮುಳಿಯ ಪ್ರಶ್ನಿಸುತ್ತಾರೆ.
“ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ 4 ಪಟ್ಟು ಗಣನೀಯವಾಗಿ ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿಯೂ ಉತ್ತಮ ಬೆಳವಣಿಗೆ ಕಂಡುಬಂದಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಇರುವ ಬೆಳ್ಳಿ ವಸ್ತು ಗಳ ಆಭರಣಗಳ ಮೌಲ್ಯ ಮಾಪನ ಮಾಡಿ ಹಳೆಯದಾಗಿರುವ ಅಥವಾ ಕಪ್ಪಾಗಿರುವ ಆಭರಣಗಳನ್ನು ವಿನಿಮಯದ ಮೂಲಕ ಹೊಸ ವಿನ್ಯಾಸದ ಆಭರಣಗಳಾಗಿ ಬದಲಿಸಿಕೊಳ್ಳಬಹುದು,” ಎಂದು ಕೃಷ್ಣನಾರಾಯಣ ಮುಳಿಯ ತಿಳಿಸಿದರು.
ಮುಳಿಯ ಸಿಲ್ವೆರಿಯಾದಲ್ಲಿ ವಿವಿಧ ವಿನ್ಯಾಸಗಳ ನೆಕ್ಲೇಸ್‌ಗಳು, ಕಾಲ್ಗೆಜ್ಜೆಗಳು, ಉಂಗುರಗಳು ಹಾಗೂ ವೈವಿಧ್ಯಮಯ ಬೆಳ್ಳಿ ಆಭರಣಗಳ ವಿಶೇಷ ಸಂಗ್ರಹ ಲಭ್ಯವಿದೆ. “ಒಮ್ಮೆ ನಮ್ಮ ಶೋರೂಮ್‌ಗೆ ಭೇಟಿ ನೀಡಿ ಸಿಲ್ವರ್ ಕೌಂಟರ್ ವೀಕ್ಷಿಸಿದರೆ ಅದರ ವೈವಿಧ್ಯತೆ ಮತ್ತು ವಿನ್ಯಾಸಗಳು ನಿಮ್ಮನ್ನು ಖಂಡಿತವಾಗಿಯೂ ಆಶ್ಚರ್ಯಗೊಳಿಸುತ್ತವೆ” ಎಂದು ಸಿಲ್ವೆರಿಯಾ ಬ್ರ್ಯಾಂಡ್‌ನ ನೇತೃತ್ವ ವಹಿಸಿರುವ ಕೇಶವಪ್ರಸಾದ್ ಮುಳಿಯ ಹೇಳಿದರು.
ಈ ಸಿಲ್ವರ್ ಮ್ಯಾರಥಾನ್ ಸಂಭ್ರಮಾಚರಣೆ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪ ಮತ್ತು ಬೆಂಗಳೂರು ಸೇರಿದಂತೆ ಎಲ್ಲಾ ಮುಳಿಯ ಶಾಖೆಗಳಲ್ಲಿ ನಡೆಯಲಿದ್ದು,ನೆಲ್ಯಾಡಿ ಹಾಗೂ ಕೊಡಗಿನ ಸೋಮವಾರಪೇಟೆಯಲ್ಲಿರುವ ವಿಶೇಷ “ಸಿಲ್ವೆರಿಯಾ” ಶಾಖೆಗಳಲ್ಲಿಯೂ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು