ಇತ್ತೀಚಿನ ಸುದ್ದಿ
ಪತ್ನಿಯ ಕೊಲೆ: ಆರೋಪಿ ಬಸವನ ಬಾಗೇವಾಡಿ ನಿವಾಸಿಯ ಬಂಧನ
12/10/2026, 21:37
ಮಂಗಳೂರು(reporterkarnataka.com):ಪತ್ನಿಯ ಕೊಲೆ ಮಾಡಿದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ ಶಿವಲಿಂಗಪ್ಪ ಎಂಬಾತನು ಆತನ ಹೆಂಡತಿಯಾದ ಸೋನಾಲಿ ಎಂಬಾಕೆಯನ್ನು ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ
ವಿಜಯಪುರದ ಬಸವನ ಬಾಗೇವಾಡಿಯ ನಿವಾಸಿ ಶಿವಲಿಂಗಪ್ಪ (40) ಎಂಬಾತನನ್ನು ಇಂದು ಕಾವೂರು ಪೊಲೀಸರು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.













