2:01 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ

18/06/2026, 15:51

ಮನೋಜ್ ಕೆ. ಬೆಂಗ್ರೆ, ಮಂಗಳೂರು

info.reporterkarnataka@gmail.com

“ನಾವು ಮಾಡುವ ಪ್ರಾಮಾಣಿಕ ಕೆಲಸ ಯಾವುದೂ ಚಿಕ್ಕದಲ್ಲ” – ಈ ಮಾತನ್ನು ಹೈದರಾಬಾದ್‌ನ ಬಿಬಿಎ ವಿದ್ಯಾರ್ಥಿನಿ ಎಂ. ಬಿಂದುಪ್ರಿಯಾ ಕ್ರಿಯೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಸಮಾಜದ ಹಳೆ ಕಟ್ಟುಪಾಡುಗಳನ್ನು ಕತ್ತರಿಸಿ, ತಂದೆಯ ಕ್ಷೌರಿಕ ವೃತ್ತಿಯನ್ನು ಹೆಮ್ಮೆಯಿಂದ ಮುನ್ನಡೆಸುತ್ತಿರುವ ಈ 20ರ ಹರೆಯದ ಹುಡುಗಿಯ ಸಾಹಸಗಾಥೆ ಈಗ ರಾಷ್ಟ್ರಮಟ್ಟದಲ್ಲಿ ಸ್ಫೂರ್ತಿಯಾಗಿದೆ.

*ಕ್ಲಾಸ್ ಬಳಿಕ ‘ಕೈ ಚಳಕ’ದ ಕಾಯಕ:*
ಹೈದರಾಬಾದ್ ಹೊರವಲಯದ ಹಳ್ಳಿಯ ಪ್ರತಿಭೆ ಬಿಂದುಪ್ರಿಯಾ. ಹಗಲು ಕಾಲೇಜಿನಲ್ಲಿ ಬಿಬಿಎ ಪಾಠ ಕೇಳಿದ ಬಳಿಕ ಸಂಜೆ ಹೊತ್ತಿಗೆ ತಂದೆಯ ಸೆಲೂನ್‌ನಲ್ಲಿ ಹಾಜರ್. ಕ್ಲಾಸ್ ಮುಗಿಸಿ ಬಂದವಳೇ ಏಪ್ರನ್ ಕಟ್ಟಿಕೊಂಡು ಗ್ರಾಹಕರಿಗೆ ನೀಟಾಗಿ ಹೇರ್‌ಕಟ್, ಶೇವಿಂಗ್ ಮಾಡುತ್ತಾಳೆ. “ಅಪ್ಪನಿಗೆ ವಯಸ್ಸಾಯ್ತು. ಕುಲಕಸುಬು ನಿಲ್ಲಿಸಬಾರದು ಅಂತ ನಾನೇ ನಿಂತೆ” ಎನ್ನುತ್ತಾರೆ ಬಿಂದುಪ್ರಿಯಾ.

*ಟೀಕೆ ಮೆಟ್ಟಿ ನಿಂತ ಜಾಣೆ:*
“ಹೆಣ್ಣುಮಗಳು ಸೆಲೂನ್‌ನಲ್ಲಿ ಏನ್ ಮಾಡ್ತಾಳೆ?” ಅನ್ನೋ ಮಾತುಗಳು ಆರಂಭದಲ್ಲಿ ಸಿಕ್ಕಾಪಟ್ಟೆ ಕೇಳಿಬಂದವು. ‘ಕ್ಷೌರಿಕ ಕೆಲಸ ಗಂಡಸರದ್ದು’ ಅನ್ನೋ ಪಟ್ಟು ಹಿಡಿದ ಸಮಾಜ ಅಪಹಾಸ್ಯ ಮಾಡಿತು. ಆದರೆ ಬಿಂದುಪ್ರಿಯಾ ಕುಗ್ಗಲಿಲ್ಲ. “ನೆಗೆಟಿವ್ ಮಾತುಗಳಿಗೆ ನನ್ನ ಕಿವಿ ಕಿವುಡು. ನನ್ನ ಕುಟುಂಬದ ಹೊಟ್ಟೆ ತುಂಬೋದು, ಅಪ್ಪನ ಕನಸು ಉಳಿಸೋದು ನನಗೆ ಮುಖ್ಯ” ಎನ್ನುವ ಆಕೆಯ ದಿಟ್ಟತನಕ್ಕೆ ಈಗ ಅದೇ ಜನ ಸಲಾಂ ಹೊಡೆಯುತ್ತಿದ್ದಾರೆ.

*ಯಾವುದೇ ಕೆಲಸಕ್ಕೆ ಮೇಲು-ಕೀಳು ಇಲ್ಲ:*
“ಪ್ರಾಮಾಣಿಕ ದುಡಿಮೆಗೆ ಅವಮಾನ ಮಾಡಬಾರದು. ಕಷ್ಟಪಟ್ಟರೆ ಗೌರವ ತಾನಾಗೇ ಬರುತ್ತೆ” ಎನ್ನುತಾಳೆ. ಬಿಬಿಎ ಮುಗಿಸಿ ಸ್ವಂತ ಸೆಲೂನ್ ಚೈನ್ ಶುರು ಮಾಡೋ ಕನಸು ಆಕೆಗಿದೆ. ಮ್ಯಾನೇಜ್‌ಮೆಂಟ್ ಓದುತ್ತಾ, ಬ್ಯುಸಿನೆಸ್‌ನೂ ರನ್ ಮಾಡುತ್ತಿರುವ ಈಕೆಯ ಮಲ್ಟಿ ಟಾಸ್ಕಿಂಗ್‌ಗೆ ಫಿದಾ ಆಗದವರಿಲ್ಲ.

*ಹೆಣ್ಣುಮಕ್ಕಳಿಗೆ ರೋಲ್ ಮಾಡೆಲ್:*
ಇವತ್ತು ಬಿಂದುಪ್ರಿಯಾ ಕೇವಲ ತಂದೆಗೆ ಆಸರೆ ಅಲ್ಲ. ‘ಹೆಣ್ಣು ಮಕ್ಕಳು ಏನು ಬೇಕಾದ್ರೂ ಮಾಡಬಹುದು’ ಅನ್ನೋದಕ್ಕೆ ಜೀವಂತ ಸಾಕ್ಷಿ. ಸಮಾಜದ ಸ್ಟೀರಿಯೋಟೈಪ್ ಕತ್ತರಿಸಿ ಹಾಕಿ, ಸ್ವಾವಲಂಬನೆಯ ಹಾದಿಯಲ್ಲಿ ನಡೆಯುತ್ತಿರುವ ಈಕೆ ದೇಶದ ಯುವತಿಯರಿಗೆ ದಾರಿದೀಪ.

ಇತ್ತೀಚಿನ ಸುದ್ದಿ

ಜಾಹೀರಾತು