2:02 AM Saturday24 - October 2026
ಬ್ರೇಕಿಂಗ್ ನ್ಯೂಸ್
ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.…

ಇತ್ತೀಚಿನ ಸುದ್ದಿ

ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ

19/06/2026, 22:22

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೊಡಗಿನ ಕುಶಾಲನಗರದಲ್ಲಿ ಏನೂ ಅರಿಯದ 9 ವರ್ಷದ ಮುಗ್ಧ ಮಗನನ್ನು ತಾಯಿಯೇ ದುಷ್ಕರ್ಮಿಗಳ ಜೊತೆ ಸೇರಿ ಸುನ್ನತ್ ಹೆಸರಿನಲ್ಲಿ ಮತಾಂತರ ಮಾಡಿದ ಆರೋಪ ಕೇಳಿಬಂದಿದೆ. ಕುಶಾಲನಗರ ಪಟ್ಟಣದಲ್ಲಿ ವಾಸವಿರುವ ರಾಜೀವ್ ಮತ್ತು ಸಾಜಿದಾ ದಂಪತಿಗೆ 9 ವರ್ಷದ ಮಗನಿದ್ದಾನೆ. ಸಾಜಿದ ಕಳೆದ ಕೆಲ ವರ್ಷಗಳಿಂದ ಇಲ್ಲಿನ ನಿಸರ್ಗಧಾಮ ಟೂರಿಸ್ಟ್​ ಸೆಂಟರ್​​ ಮಳಿಗೆಯೊಂದಕ್ಕೆ ಸೇಲ್ಸ್​ ಗರ್ಲ್​ ಆಗಿ ಕೆಲಸ ಮಾಡುತ್ತಿದ್ದರು.
ಮಳಿಗೆ ಮಾಲೀಕರಾದ ಸಲೀಂ ಮತ್ತು ಜಲೀಲ್ ಪರಿಚಯವಾಗಿದೆ. ಅವರು ಸಾಜಿದಾ ಮೇಲೆ ಅದೇನು ಪ್ರಭಾವ ಬಿರಿದ್ದಾರೆ ಗೊತ್ತಿಲ್ಲ. ಕಳೆದ ಒಂದು ತಿಂಗಳ ಹಿಂದೆ ಸಾಜಿದಾ ಮತ್ತು ಆಕೆಯ 9 ವರ್ಷದ ಮಗನನ್ನು ರಹಸ್ಯವಾಗಿ ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೆರಿ ಗ್ರಾಮದ ಮಸೀದಿಗೆ ಕರೆದುಕೊಂಡು ಹೋಗಿ ಒಂದು ತಿಂಗಳು ಅಲ್ಲೇ ಉಳಿದುಕೊಂಡಿದ್ದಾರೆ. ಈ ವೇಳೆ ಬಾಲಕನಿಗೆ ಬಲವಂತದಿಂದ ಸುನ್ನತ್ ಮಾಡಿಸಿ ಮತಾಂತರ ಮಾಡಿದ್ದಾರೆ. ಅಲ್ಲದೆ ಸಾಜಿದಾಳನ್ನ ಕೂಡ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕುಶಾಲನಗರದಲ್ಲಿ ಗುಸುಗುಸು ಶುರುವಾದಾಗ ಪತಿ ರಾಜೀವ್ ಕೆಲವು ಹಿಂದೂ ಪರ ಸಂಘಟನೆಗಳ ನೆರವು ಪಡೆದು ಕುಶಾಲನಗರಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

*ಇಷ್ಟಪಟ್ಟು ಮತಾಂತರವಾಗಿರುವುದಾಗಿ ಸಾಜಿದಾ ಹೇಳಿಕೆ:*
ಮುಗ್ಧ ಬಾಲಕನನ್ನ ಕಾನೂನಿಗೆ ವಿರುದ್ಧವಾಗಿ ಮತಾಂತರ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಕುಶಾಲನಗರದ ಕೆಲವರು ತಂದೆ ರಾಜೀವ್ ಬೆಂಬಲಕ್ಕೆ ನಿಂತು ಕಾನೂನು ನೆರವು ನೀಡಿದ್ದಾರೆ. ಬಾಲಕನನ್ನ ಕೇರಳದ ಮಸೀದಿಯಿಂದ ರಕ್ಷಿಸಿ ಕರೆತಂದು ಸದ್ಯ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ. ಕುರಾನ್​ನಿಂದ ಪ್ರೇರೇಪಿತಳಾಗಿ, ಇಷ್ಟಪಟ್ಟು ಮತಾಂತರವಾಗಿರುವುದಾಗಿ ಸಾಜಿದಾ ಹೇಳಿದ್ದಾರೆ ಎನ್ನಲಾಗುತ್ತಿದೆ.

*ಸಲೀಂ ಮತ್ತು ಜಲೀಲ್ ಬಂಧನ:*
ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್​ ಸೆಂಟರ್​ನಲ್ಲಿ ಇಂತಹ ಬಹಳಷ್ಟು ಪ್ರಕರಣಗಳು ರಹಸ್ಯವಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಸದ್ಯ ಆರೋಪಿಗಳಾದ ಸಲೀಂ ಮತ್ತು ಜಲೀಲ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನಿಗೆ ಆಗಿರುವ ದೈಹಿಕ ಮತ್ತು ಮಾನಸಿಕ ಆಘಾತ ಊಹಿಸಲಾಗದು, ಹಾಗಾಗಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್​ಗಳನ್ನ ಹಾಕಿ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕನ ನೆರವಿಗೆ ನಿಂತ ಅಮೃತ್ ರಾಜ್​​ ಆಗ್ರಹಿಸಿದ್ದಾರೆ.
ಸದ್ಯ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಕೃತ್ಯಗಳು ಕೇವಲ ಮತಾಂತರಕ್ಕೆ ಮಾತ್ರ ಸೀಮಿತವೋ ಅಥವಾ ಮತಾಂತರದ ಬಳಿಕ ಕೇರಳದಲ್ಲಿ ಅಮಾಯಕ ಬಾಲಕರನ್ನ ಬೇರೆ ಕೃತ್ಯಗಳಿಗೆ ಬಳಸಿಕೊಳ್ಳುವ ಉದ್ದೇಶವಿತ್ತಾ, ಇಂತಹ ಇನ್ನೆಷ್ಟು ಪ್ರಕರಣಗಳು ನಡೆದಿವೆ ಎಂಬುದರ ಬಗ್ಗೆ ತನಿಖೆಯಲ್ಲಿ ಬಯಲಾಗಬೇಕಿದೆ. ಅಲ್ಲದೆ, ರಾಜ್ಯದ ಬೇರೆ ಬೇರೆ ಕಡೆ ಏಕಾಏಕಿ ನಾಪತ್ತೆಯಾಗುವ ಹಿಂದೂ ಹೆಣ್ಣು ಮಕ್ಕಳು ಮತ್ತು ವ್ಯಕ್ತಿಗಳು ಕೇರಳದ ಮಂಜೆರಿ ಗ್ರಾಮದ ಮಸೀದಿಯಲ್ಲಿ ಪತ್ತೆಯಾಗುತ್ತಿದ್ದಾರೆ ಎಂಬ ಆರೋಪವು ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು