ಇತ್ತೀಚಿನ ಸುದ್ದಿ
ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು
15/06/2026, 22:14
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ಸಮೀಪದ ಮಹೇಂದ್ರ ರೆಸಾರ್ಟ್ ನ ಈಜುಕೊಳದಲ್ಲಿ ಬಿದ್ದು ಗೋವಾದಿಂದ ಬಂದಿದ್ದ ಪ್ರವಾಸಿಗನೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ.ಗೋವಾದಿಂದ ಪತ್ನಿ ಮತ್ತು ಮಕ್ಕಳೊಂದಿಗೆ ರೆಸಾರ್ಟ್ಗೆ ಆಗಮಿಸಿದ್ದ ಮನೋಜ್ ಆನಂದ್ (57) ಮೃತ ವ್ಯಕ್ತಿ. ಇಂದು ಮದ್ಯಾಹ್ನ ರೆಸಾರ್ಟ್ ಗೆ ಆಗಮಿಸಿದ ಕುಟುಂಬ, ಈಜುಕೊಳಕ್ಕೆ ಇಳಿದಿದ್ದಾರೆ. ಈ ಸಂದರ್ಭ ತೀವ್ರ ಉಸಿರಾಟದ ತೊಂದರೆಯಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ರೆಸಾರ್ಟ್ ಸಿಬ್ಬಂಧಿಗಳ ಸಹಾಯದಿಂದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಿಲ್ಲ.ಘಟನೆ ಸಂಬಂಧ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












