7:05 PM Tuesday12 - May 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ… ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಶೇ. 1.50ರಷ್ಟು ಹೆಚ್ಚಳ: ಸರ್ಕಾರದ… ಸುವೇಂದು ಪಿಎ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್: ಸಿಐಡಿ ತನಿಖೆ ತೈಲ ಬಳಕೆಯಲ್ಲಿ ಮಿತಿಯಿರಲಿ, ವರ್ಷದ ಮಟ್ಟಿಗೆ ಚಿನ್ನ ಖರೀದಿಸಬೇಡಿ::ಪ್ರಧಾನಿ ಮೋದಿ ಮಹತ್ವದ ಕರೆ ತಿರುಚಿ ಪೂರ್ವ ಕ್ಷೇತ್ರಕ್ಕೆ ತಮಿಳುನಾಡು ಸಿಎಂ ವಿಜಯ್ ರಾಜೀನಾಮೆ

ಇತ್ತೀಚಿನ ಸುದ್ದಿ

ಗಾಂಧಿ ಬದುಕೇ ಒಂದು ಸಂದೇಶ: ಮಸ್ಕಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಡಾ. ಕೊಡಗುಂಟಿ

12/04/2026, 13:50

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಒಮ್ಮೆ ಸಬರುಮತಿ ಆಶ್ರಮಕ್ಕೆ ಗಣ್ಯರು ಬಂದಾಗ, ಅವರನ್ನು ಐದು ನಿಮಿಷ ಕಾಯಿರಿ ಎಂದು ಗಾಂಧೀಜಿ ಹೇಳಿದರು. ಬಂದ ಗಣ್ಯರು ನಮಗಿಂತ ನಿಮ್ಮ ಕೆಲಸವೇ ಮುಖ್ಯ ಎಂದು ಕೇಳಿದಾಗ, ಕುರಿಮರಿಗೆ ಕಾಲು ಮುರಿದಿತ್ತು ಅದನ್ನು ಕಟ್ಟುತ್ತಿದ್ದೆ ನಾವು ಮುಖ್ಯವೋ, ಕುರಿ ಮುಖ್ಯವೂ ಎಂದು ಗಣ್ಯರು ಕೇಳಿದಾಗ ನನ್ನ ಪಕ್ಕದಲ್ಲಿರುವ ಜೀವಿ ಬಗ್ಗೆ ನಾನು ಅರ್ಥ ಮಾಡಿಕೊಳ್ಳದಿದ್ದರೆ ಎಲ್ಲೋ ಮೂಲೆಯಲ್ಲಿರುವವರನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಪ್ರತಿಯೊಂದು ಜೀವಿಯು ನನಗೆ ಮುಖ್ಯವಾಗುತ್ತದೆ ಎಂದು ಗಾಂಧೀಜಿಯವರ ಮಾನವೀಯತೆಯನ್ನು ನೆನೆದರು.
ಪಟ್ಟಣದ ದೇವಾನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಹಾಗೂ ಐಕ್ಯುಎಸಿ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧೀಜಿ: ವಿಚಾರಗಳು, ಪ್ರಭಾವ, ಮತ್ತು ಜಾಗತಿಕ ಪ್ರಸ್ತುತತೆ” ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಬಸವರಾಜ ಕೋಡಗುಂಟಿ ಹೇಳಿದರು. ದೇಶವನ್ನು ಎಡಬಲಗಳ ಸಿದ್ದಾಂತದಲ್ಲಿ ಕೊಲ್ಲುತ್ತಿದ್ದಾರೆ ಗಾಂಧೀಜಿಯವರ ವಿಚಾರಧಾರೆಯನ್ನು ಕೊಲ್ಲಲು ಸಾಧ್ಯವಿಲ್ಲ, ಭಾಷೆಗಳ ಇತಿಹಾಸ ಬಗ್ಗೆ ತಿಳಿಸುತ್ತಾ ಹಿಂದಿ ಹಿಂದುಗಳದ್ದು, ಉರ್ದು ಮುಸ್ಲಿಮರದೆಂದು ಇಂಗ್ಲೀಷರು ಬಿಂಬಿಸಿ ಭಾಷೆಗಳ ಹೆಸರಲ್ಲಿ ಧರ್ಮಗಳನ್ನು ಒಡೆದರು. ಒಂದೇ ಧರ್ಮ, ಒಂದೇ ಭಾಷೆ ಇರುವ ದೇಶವನ್ನು ಆಡಳಿತ ಮಾಡುವುದು ಸುಲಭ. ಆದರೆ ಬಹುತ್ವ ಇರುವ ದೇಶವನ್ನು ಆಳುವುದು ಸವಾಲಿನ ಕೆಲಸವಾಗಿದೆ. ಗಾಂಧೀಜಿಯವರು ಭಾರತ ಪಾಕಿಸ್ತಾನದ ವಿಭಜನೆ ಖಂಡಿಸಿದರು, ಪುನಾ ಒಪ್ಪಂದ ಮಾಡಿಕೊಂಡರು ಎಂಬ ಕೆಲವೇ ತಪ್ಪುಗಳನ್ನು ಇಟ್ಟು, ಅವರ ನೂರಾರು ಒಳ್ಳೆ ವಿಚಾರ ಧಾರೆಗಳನ್ನು ಬಿಸಾಕಬೇಕೇ? ಎಂದು ಪ್ರಶ್ನಿಸಿದರು. ಜೀವನದಲ್ಲಿ ಪ್ರತಿ ಮನುಷ್ಯನು ತಪ್ಪು ಮಾಡುತ್ತಾನೆ ಅದು ಆಯಾ ಕಾಲಮಾನಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಗತಕಾಲವನ್ನು ವರ್ತಮಾನದಲ್ಲಿ ಕುಳಿತು ವಿಶ್ಲೇಷಿಸಬಾರದು ಎಂದು ತಿಳಿಸಿದರು. ಆಗಿರುವ ಘಟನೆಗಿಂತ ಭವಿಷ್ಯ ರೂಪಿಸುವುದು ಮುಖ್ಯವಾಗುತ್ತದೆ. ಗಾಂಧೀಜಿಯವರನ್ನು ಬಿಟ್ಟು ದೇಶದಲ್ಲಿ ಮಾತನಾಡುವುದು ಕಷ್ಟ ಸೌಂದರ್ಯ ವಸ್ತುವಿನಲ್ಲಿ ಇಲ್ಲ, ನೋಡುವ ಕಣ್ಣುಗಳಲ್ಲಿದೆ ಬದಲಾವಣೆಯೇ ಬದುಕು, ಬದಲಾವಣೆಯಾಗದಿದ್ದರೆ ಬದುಕಿದ್ದರೂ ಸತ್ತಂತೆ ಎಂದು ತಿಳಿಸಿದರು.

ಇದೇ ವೇದಿಕೆಯಲ್ಲಿ ವಿವಿಧ ಗೋಷ್ಠಿಗಳು ನಡೆದವು. ಪ್ರಥಮ ಗೋಷ್ಠಿ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಧನ್ಯ ಕುಮಾರ್ ಜಿನಪಾಲ ಬಿರಾಜದಾರ ಮಾತನಾಡಿ ಗಾಂಧೀಜಿ ವ್ಯಕ್ತಿಯಲ್ಲ, ಅವರೊಬ್ಬ ವಿಚಾರಧಾರೆಯಾಗಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ಯುದ್ಧದಿಂದ ಜೀವ, ವಿತ್ತ ಹಾನಿಯಾಗುತ್ತಿದೆ, ನಮಗೆ ಯುದ್ಧ ಬೇಕಿಲ್ಲ,ಬುದ್ಧ ಬೇಕು, ಶಾಂತಿ ಬೇಕು, ಬಿಳಿ ಬಟ್ಟೆ ಶಾಂತಿಯ ಸಂಕೇತವಾಗಿದೆ. ಬಿರು ಬಿಸಿಲಲ್ಲೂ ಗಾಂಧೀಜಿ ಸಹಸ್ರಾರು ಸಂಖ್ಯೆಯ ಜನರನ್ನು ಒಂದುಗೂಡಿಸಿ ಬ್ರಿಟಿಷರ ವಿರುದ್ಧ ಸತ್ಯ, ಅಹಿಂಸೆ ಅಸ್ತ್ರಗಳನ್ನು ಪ್ರಯೋಗಿಸಿ ಯಶಸ್ವಿ ಕಂಡರು. ದೇಶದಲ್ಲಿ ಯಾರು ಬೇಕಾದರೂ ‘ರಾಷ್ಟ್ರಪತಿ’ಯಾಗಬಹುದು, ಆದರೆ ‘ರಾಷ್ಟ್ರಪಿತ’ ಆಗಲು ಯೋಗ್ಯತೆ ಇರುವುದು ಗಾಂಧೀಜಿಯವರಿಗೆ ಮಾತ್ರ ಸಾಧ್ಯ. ಯುದ್ಧಕ್ಕೆ ಕಾರಣಗಳೆಂದರೆ, ‘ಆಗ್ರಹ,ಸಂಗ್ರಹ, ಮತ್ತು ಪೂರ್ವಗ್ರಹ ‘ಇವುಗಳಿಂದ ಯುದ್ಧ ಸಂಭವಿಸುತ್ತದೆ ಎಂದು ಗಾಂಧೀಜಿಯವರು ಹೇಳಿದ್ದಾರೆಂದು ಇದೇ ಸಂದರ್ಭದಲ್ಲಿ ತಿಳಿಸಿದರು . ಅವರ ಅಹಿಂಸ ತತ್ವ ಪ್ರಾಯೋಗಿಕವಾಗಿದೆ. ಯಾರು ಸಾಯದಿರುವುದು, ಇದಕ್ಕೆ ತುಕ್ಕು ಹಿಡಿಯುವುದಿಲ್ಲ ಹಿಂಸೆ ಬಂದಾಗಲೆಲ್ಲ ಅಹಿಂಸೆ ಬರುತ್ತದೆ. ‘ಸರ್ವೇ ಜನ ಸುಖಿನೋ ಭವಂತು’, ಜಗದ ಎಲ್ಲಾ ಪ್ರಜೆಗಳು ವಿಕಾಸವಾಗಬೇಕು, ಸರ್ವೋದಯವಾಗಬೇಕೆಂದು ಹೇಳುತ್ತಿದ್ದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಡಾ. ಅಭಿದ್ ಬೇಗಂ ಅಕ್ಷರವಂತರಿಗೂ, ವಿದ್ಯಾವಂತರಿಗೂ ವ್ಯತ್ಯಾಸವಿದ್ದು ‘ಶಿಕ್ಷಣ ಕೇವಲ ಜ್ಞಾನಾರ್ಜನೆಗಾಗಿ ಅಲ್ಲ, ಜೀವನದ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಗಳನ್ನು ಬೆಳೆಸುವ ಸಾಧನವಾಗಿದೆ. ಸ್ವತಂತ್ರವಾಗಿ ಬದುಕುವುದು ಶಿಕ್ಷಣ ಕಲಿಸುತ್ತದೆ. ಕತ್ತಲು ನೋಡಿ ಎದುರುತ್ತಿದ್ದ ‘ಮೋಹನ’ (ಮಹಾತ್ಮ ಗಾಂಧಿ)ಮುಂದೆ ಮಹಾನ್ ಶಕ್ತಿಯಾದರು. ಸ್ವಂತಿಕೆ ಕಲಿಯಬೇಕು, ಅನ್ಯರ ಅವಲಂಬನೆ ಇರಬಾರದು. ಆಂತರಿಕ ಆಲೋಚನೆ ಮಾಡಬೇಕು. ನಮ್ಮ ಭಾಷೆ ಗೌರವಿಸದವ, ಅನ್ಯ ಭಾಷೆಯನ್ನು ಗೌರವಿಸಲಾರ ಎಂದು ಗಾಂಧೀಜಿಯವರು ಅಭಿಪ್ರಾಯಪಟ್ಟಿದ್ದರು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

2ನೇ ಗೋಷ್ಠಿ ಆನ್ಲೈನ್ ನಲ್ಲಿ ನಡೆದರೆ,3ನೇ ಗೋಷ್ಠಿ ಆಫ್ ಲೈನ್ ನಲ್ಲಿ ನಡೆದವು. ಈ ಗೋಷ್ಠಿಗಳಲ್ಲಿ ಹಲವಾರು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಭಾಗವಹಿಸಿ ಗಾಂಧೀಜಿ ಕುರಿತು ವಿವಿಧ ಪ್ರಬಂಧಗಳನ್ನು ಮಂಡಿಸಿದರು.

ಸಮಾರೋಪ ಭಾಷಣದಲ್ಲಿ ಮಹಾಂತೇಶ ಮಸ್ಕಿ ಅವರು ಮಾತಾಡಿ ಎಲ್ಲೋ ನಡೆಯುತ್ತಿರುವ ಯುದ್ಧದಲ್ಲಿ ಅಲ್ಲಿನ ಪ್ರಜೆಗಳು ಗಾಂಧೀಜಿಯವರ ಭಾವಚಿತ್ರವಿಟ್ಟು ಯುದ್ಧದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದರೆ, ಗಾಂಧೀಜಿಯವರು ಜಾಗತಿಕವಾಗಿ ಎಷ್ಟು ಪ್ರಭಾವಿತರು,ಪ್ರಸ್ತುತರು ಎಂಬುದು ತಿಳಿಯುತ್ತದೆ. ಆದರೆ ನಮ್ಮ ದೇಶದಲ್ಲಿ ಗಾಂಧಿಯವರ ವಿಚಾರಧಾರೆಗಳನ್ನು ಮರೆತಿದ್ದೇವೆ, ಇಂದಿನ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಮುಳುಗಿ ಅವರ ನೈಜ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.


ಈ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ. ಶಿವಶರಣಪ್ಪ ಇತ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಹಾಂತಗೌಡ ಪಾಟೀಲ್ ವಹಿಸಿದ್ದರು. ವಾಸ್ತವಿಕ ನುಡಿಗಳನ್ನು ಶ್ರೀಮತಿ ಆಶಾ. ಸಿ ವ್ಯಕ್ತಪಡಿಸಿದರೆ, ಡಾ. ಬಸವರಾಜ ತಡಕಲ್ಲ ರವರು ಸ್ವಾಗತವನ್ನು ಮಾಡಿದರು. ಕಾರ್ಯಕ್ರಮವನ್ನು ಯಾಳಗಿ ಶ್ರೀನಿವಾಸ್ ರವರು ನಿರೂಪಿಸಿದರೆ, ಸಮಾರೋಪ ಸಮಾರಂಭದ ನಿರೂಪಣೆಯನ್ನು ಇಮಾಮ್ ಸಾಬ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಡಾ. ರಾಮಣ್ಣ ಜುಮ್ಮ, ಶಿವಗ್ಯಾನಪ್ಪ, ಸಣ್ಣಪ್ಪ ನಾಯಕ, ಹಾಜಿ ಬಾಬಾ, ಡಾ. ರಜಿಯಾ, ಐ ಕ್ಯೂ ಎ ಸಿ ಸಂಯೋಜಕರಾದ ರೋಹಿಣಿ ಮೂರ್ತಿ, ಕನ್ಯಾಕುಮಾರಿ ಭಾಗವಹಿಸಿದ್ದರು. ಅತಿಥಿ ಉಪನ್ಯಾಸಕರ ಪರವಾಗಿ ಅಧ್ಯಕ್ಷರಾದ ಡಾ. ವಿರುಪನಗೌಡ ಭಾಗವಹಿಸಿದ್ದರು. ವಿವಿಧ ಕಾಲೇಜುಗಳ ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು