8:52 AM Saturday3 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ ತುಂಬಿ ಹಾರೈಕೆ

24/03/2026, 22:33

ದಾವಣಗೆರೆ(reporterkarnataka.com): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಕೀಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ಪರವಾಗಿ ಇಂದು ಅವರ ಪತ್ನಿ ಸಂಧ್ಯಾ ಶ್ರೀನಿವಾಸ್ ಅವರು ಇಮಾಂ ನಗರದಲ್ಲಿ ನಡೆಸಿದ ಮನೆ ಮನೆ ಪ್ರಚಾರವು ಗಮನ ಸೆಳೆಯಿತು. ಇಮಾಂ ನಗರದ ಮುಸ್ಲಿಂ ಮಹಿಳೆಯರು ಸಂಧ್ಯಾ ಶ್ರೀನಿವಾಸ್ ಅವರಿಗೆ ಅತ್ಯಂತ ಆತ್ಮೀಯವಾಗಿ ಸ್ವಾಗತ ಕೋರಿದರು. ಕೇವಲ ಪ್ರಚಾರಕ್ಕೆ ಸೀಮಿತವಾಗದ ಈ ಭೇಟಿಯಲ್ಲಿ, ಸ್ಥಳೀಯ ಮಹಿಳೆಯರು ಅವರನ್ನು ಮನೆಗೆ ಆಹ್ವಾನಿಸಿ, ಕುಡಿಯಲು ನೀರು ನೀಡಿ ಸತ್ಕರಿಸಿದ್ದಲ್ಲದೆ, ಹಿಂದೂ ಸಂಪ್ರದಾಯದಂತೆ ಉಡಿ ತುಂಬಿ ಆಶೀರ್ವದಿಸುವ ಮೂಲಕ ತಮ್ಮ ಬೆಂಬಲವನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಲ್ಪಸಂಖ್ಯಾತ ಮಹಿಳೆಯರು, ‘ಕಾಂಗ್ರೆಸ್ ಪಕ್ಷವು ಇಷ್ಟು ವರ್ಷ ನಮ್ಮ ಮತಗಳನ್ನು ಪಡೆದು ನಮಗೆ ದ್ರೋಹ ಮಾಡಿದೆ. ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ನಮಗೆ ಬಿಜೆಪಿ ವಿರೋಧಿಯಲ್ಲ, ಉತ್ತಮ ವ್ಯಕ್ತಿತ್ವದ ಶ್ರೀನಿವಾಸ್ ಅವರಿಗೆ ನಾವು 100% ಬೆಂಬಲ ನೀಡುತ್ತೇವೆ’ ಎಂದು ಘೋಷಿಸಿದರು.
ಅಭ್ಯರ್ಥಿ ಶ್ರೀನಿವಾಸ್ ಅವರ ತಂದೆ ಹಮಾಲಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದವರು. ಅಂತಹ ಕಡು ಬಡತನದ ಹಿನ್ನೆಲೆಯಿಂದ ಬಂದ ಮಗ ಇಂದು ಜನರ ಪರವಾಗಿ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಮತದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಚಾರದ ಈ ಸಂದರ್ಭದಲ್ಲಿ ಸಂಧ್ಯಾ ಶ್ರೀನಿವಾಸ್ ಅವರೊಂದಿಗೆ ಪದ್ಮಾವತಿ, ಲಲಿತಾ, ತೃಪ್ತಿ, ನಮಿತಾ ಸಿರಿ, ಅಂಬಿಕಾ ಹಾಗೂ ವಿಜಯ್ ಸಾವಂತ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು