3:02 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

Chikkamagaluru | ಬಣಕಲ್ ಶ್ರೀಕಲ್ಲನಾಥೇಶ್ವರ ರಥೋತ್ಸವ: ಜಾತ್ರೆಗೆ ಸಂಭ್ರಮದ ತೆರೆ

19/02/2026, 15:36

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕೊಟ್ಟಿಗೆಹಾರ ಸಮೀಪದ ಬಣಕಲ್ ಗ್ರಾಮದಲ್ಲಿರುವ ಶ್ರೀಕಲ್ಲಾನಾಥೇಶ್ವರ ಸ್ವಾಮಿಯ ದಿವ್ಯ ರಥೋತ್ಸವವು ಮಂಗಳವಾರ ಸಂಜೆ ಸಂಭ್ರಮದಿಂದ ನಡೆಯಿತು.


ಭಾನುವಾರ ಮಹಾಶಿವರಾತ್ರಿ ರುದ್ರಾಭಿಷೇಕ, ನಿತ್ಯ ಪೂಜೆ, ಪುಣ್ಯ ವಾಚನ,ಗಣಪತಿ ಪೂಜೆ, ನಡೆಯಿತು.ಅಂಕುರ ಪೂಜೆ,ದ್ವಜ ರೋಹಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸೋಮವಾರ ಗಿರಿಜಾ ಕಲ್ಯಾಣ,ದೇವರ ರಥರೋಹಣ ನಡೆಯಿತು. ಮಂಗಳವಾರ ಭಕ್ತರು ಮಡಿಯಾಗಿ ಶ್ರೀಕಲ್ಲನಾಥೇಶ್ವರ ಸ್ವಾಮಿಗೆ ಹಣ್ಣು ಕಾಯಿ,ದಾನ್ಯ ಅರ್ಪಿಸಿದರು. ಸಂಜೆ ಜಾತ್ರೆಯಲ್ಲಿ ಕಿಕ್ಕಿರಿದ ಜನ ಸಮೂಹದ ನಡುವೆ ಭಕ್ತರು ದೇವಸ್ಥಾನದ ಹೆಬ್ಬಾಗಿಲ ತನಕ ರಥ ಎಳೆದು ಸಂಭ್ರಮಿಸಿದರು. ಜಾತ್ರೆಯಲ್ಲಿ ಸುತ್ತಾಡಿ ಮಕ್ಕಳು ತಿಂಡಿ ತಿನಿಸು ಆಟಿಕೆಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ಸಂಜೆ ರಥೋತ್ಸವದಲ್ಲಿ ಬಣಕಲ್, ಕೂಡಹಳ್ಳಿ,ಕೊಟ್ಟಿಗೆಹಾರ,ತರುವೆ,ದೇವನಗೂಲ್, ಬಾಳೂರು,ಫಲ್ಗುಣಿ,ಚೇಗು,ಕೋಗಿಲೆ ಮತ್ತಿತರ ಗ್ರಾಮದ ಗ್ರಾಮಸ್ಥರು ಸೇರಿ ಸಂಭ್ರಮದ ರಥೋತ್ಸವ ಹಾಗೂ ಜಾತ್ರೋತ್ಸವದಲ್ಲಿ ಪಾಲ್ಗೂಂಡು ಸ್ವಾಮಿಯ ಕೃಪೆಗೆ ಪಾತ್ರರಾದರು. ತಾಲ್ಲೂಕಿನ ಗಣ್ಯರು ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು. ಬುಧವಾರದಂದು ಅವಭೃತ ಸ್ನಾನ(ನೀರೋಕಳಿ) ನಡೆದು ಸಂಭ್ರಮದ ಜಾತ್ರೆಗೆ ತೆರೆ ಎಳೆಯಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಬಿ.ಎಸ್.ದಿವ್ಯ ಪ್ರಸಾದ್, ಕಾರ್ಯದರ್ಶಿ ಬಿ.ಆರ್.ಅಭಿಲಾಷ್, ಗೌರವ ಕಾರ್ಯದರ್ಶಿ ಬಿ.ಸಿ.ಪ್ರವೀಣ್ ಹಾಗೂ ಸಮಿತಿಯ ಸದಸ್ಯರು,ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು