2:24 PM Wednesday23 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಬೆಳಗಾವಿ: ಅಥಣಿ ಹೊರವಲಯದ ಮನೆಯಲ್ಲಿ ದಂಪತಿ ಶವ ಪತ್ತೆ: ಕೊಲೆ ಶಂಕೆ; ಚುರುಕುಗೊಂಡ ಪೊಲೀಸ್ ತನಿಖೆ

08/11/2024, 10:22

ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚವ್ಹಾಣ ತೋಟದಲ್ಲಿ ದಂಪತಿಯ ಶವ ಪತ್ತೆಯಾಗಿದ್ದು, ಕೊಲೆಗೀಡಾಗಿರಬೇಕೆಂದು ಶಂಕಿಸಲಾಗಿದೆ.
ಚವ್ಹಾಣ ತೋಟದಲ್ಲಿನ ನಾನಾಸಾಹೇಬ ಚವ್ಹಾಣ (58) ಮತ್ತು ಜಯಶ್ರೀ ಚವ್ಹಾಣ (51) ದಂಪತಿ ನಿಗೂಢವಾಗಿ ಸಾವಿಗೀಡಾಗಿದವರು. ಈ ಮುನ್ನ ಇದನ್ನು‌ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು.
ಸುಮಾರು 6 -7 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಸಾವಿಗೀಡಾದ ದಂಪತಿಯ ಪುತ್ರ ದಿಲೀಪ್ ದರೋಡೆ ಪ್ರಕರಣವೊಂದರಲ್ಲಿ ಜಮಖಂಡಿಯಲ್ಲಿ ಬಂಧಿಸಲ್ಪಟ್ಟಿದ್ದ. ಆತನನ್ನು ಬಿಡಿಸಲು ದಂಪತಿ 7-8 ದಿನಗಳ ಹಿಂದೆ ಜಮಖಂಡಿಗೆ ತೆರಳಿ ವಕೀಲರನ್ನು ಭೇಟಿಯಾಗಿ ಬಂದಿದ್ದಾರೆ. ಮತ್ತೆ ಎಲ್ಲೂ ಹೊರಗೆ ಕಾಣಿಸಲಿಲ್ಲ. ಆದರೆ ಬುಧವಾರ ಮನೆಯಿಂದ ವಾಸನೆ ಬರುತ್ತಿರುವುದಾಗಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮೊದಲು ಇದು ಆತ್ಮಹತ್ಯೆ ಇರಬಹುದೆಂದು ಶಂಕಿಸಲಾಗಿತ್ತು.‌ ಆತ್ಮಹತ್ಯೆ ಇರಬಹುದು ಎನ್ನುವುದಕ್ಕೆ 2 ಕಾರಣಗಳಿವೆ. ಮೊದಲನೆಯದಾಗಿ, ಮಗ ದಿಲೀಪನನ್ನು ಪೊಲೀಸರು ಬಂಧಿಸಿರುವುದು, ಎರಡನೆಯದು ದಿಲೀಪನಿಗೆ ಮದುವೆ ಗೊತ್ತು ಮಾಡಿದ ಹಿನ್ನೆಲೆಯಲ್ಲಿ ಹೆಣ್ಣಿನ ಕಡೆಯವರ ಮನೆ ನೋಡಲು ಬರುವವರಿದ್ದರು. ಅವರಿಗೆ ಮುಖ ತೋರಿಸಲಾಗದೆ ಆತ್ಮಹತ್ಯೆ ಮಾಡಕೊಂಡಿರಬಹುದು ಎನ್ನಲಾಗಿತ್ತು. ಆದರೆ, ಮನೆಯ ಒಳಗೆ ಪ್ರವೇಶಿಸಿದ ಪೊಲೀಸರಿಗೆ ಸಂಶಯ ಹುಟ್ಟಿದೆ. ಮನೆಯೊಳಗಿನ‌ ವಾತಾವರಣವನ್ನು ನೋಡಿ ಇದು ಕೊಲೆಯಾಗಿರಬಹುದು ಎಂದು ಶಂಕಿಸಿ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲಿಸುತ್ತಾರೆ. ಅವರು ಕೂಡ ಇದು ಕೊಲೆ ಎನ್ನುವುದಕ್ಕೆ ಸಾಕ್ಷಿಗಳನ್ನು ಪತ್ತೆ ಮಾಡುತ್ತಾರೆ. ನಂತರ ಪೊಸ್ಟ್ ಮಾರ್ಟಮ್ ನಡೆಸಿದಾಗ ಅದರ ವರದಿಯಲ್ಲಿ ಕೂಡ ಕೊಲೆಯ ಸಾಧ್ಯತೆ ಕಂಡು ಬಂದಿದೆ.ವಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಬುಧವಾರ ಮತ್ತು ಗುರುವಾರ ಅಥಣಿಗೆ ಭೇಟಿ ನೀಡಿ ತೀವ್ರ ತನಿಖೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು