9:54 PM Thursday13 - August 2026
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ

ಇತ್ತೀಚಿನ ಸುದ್ದಿ

ಅಯೋಧ್ಯೆಯಲ್ಲಿ ರಾಮಲಲ್ಲಾನಾಗಿ ಬೆಳಗಿದ ಕರ್ನಾಟಕದ ಶಿಲೆ: ಮೈಸೂರು ಹಾರೋಹಳ್ಳಿಯಲ್ಲಿ ಭೂಮಿಪೂಜೆ; ಮಂದಿರ ನಿರ್ಮಾಣದ ಸಂಕಲ್ಪ

22/01/2024, 13:46

ಭೀಮಣ್ಣ ಪೂಜಾರಿ ಶಿರನಾಳ ಮೈಸೂರು

info.reporterkarnataka@gmail.com

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿದ ಭವ್ಯ ಮಂದಿರದಲ್ಲಿ ಇಂದು ಪ್ರಾಣ ಪ್ರತಿಷ್ಠೆ ಮಾಡಲಾದ ಶ್ರೀರಾಮಲಲ್ಲಾ ವಿಗ್ರಹಕ್ಕೆ ಶಿಲೆಯನ್ನು ಒದಗಿಸಿದ ಮೈಸೂರಿನ ಹಾರೋಹಳ್ಳಿಯಲ್ಲಿ ಇಂದು ಭೂಮಿ ಪೂಜೆ ನಡೆಸಲಾಯಿತು.


ಮೈಸೂರಿನ‌ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಗುಜ್ಜೇಗೌಡನಪುರ ಗ್ರಾಮದ ವ್ಯಾಪ್ತಿಯಲ್ಲಿ ಹಾರೋಹಳ್ಳಿ ಪ್ರದೇಶವಿದೆ. ಈ ಹಾರೋಹಳ್ಳಿ ಪ್ರದೇಶದ ಎಚ್. ರಾಮದಾಸ ಎಂಬ ಸಾಮಾನ್ಯ ರೈತನ ಜಮೀನಿನಲ್ಲಿ ದೊರೆತ ಶಿಲೆಯಿಂದ ರಾಮಲಲ್ಲಾನ ವಿಗ್ರಹ ಮೂಡಿ ಬಂದಿದೆ. ವ್ಯವಸಾಯಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ರಾಮದಾಸ ಅವರು ತನ್ನ ಜಮೀನಿನಿಂದ ಈ‌ ಶಿಲೆಯನ್ನು ತೆಗೆಸಿದ್ದರು. ಇಂದು ಆ ಶಿಲೆ ಇಡೀ ಜಗತ್ತೇ ನೋಡಬಲ್ಲ ರಾಮಲಲ್ಲಾನಾಗಿ ಎದ್ದು ನಿಂತಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ವೇಳೆಯಲ್ಲಿ ಇಲ್ಲಿ ಭೂಮಿ ಪೂಜೆ ನಡೆಸಲಾಗಿದೆ. ಇಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಸಂಕಲ್ಪವನ್ನು ರಾಮದಾಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು