2:17 AM Tuesday22 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

Indo- Pak | ಪಾಕ್ ವಶದಲ್ಲಿದ್ದ ಭಾರತೀಯ ಯೋಧ ಪಿ.ಕೆ. ಶಾ ಬಿಡುಗಡೆ: 21 ದಿನಗಳ ಬಳಿಕ ಸ್ವದೇಶಕ್ಕೆ ವಾಪಾಸ್ !

14/05/2025, 20:56

ವಾಘಾ(reporterkarnataka.com): ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸಿದ ಬಳಿಕ ಮಹತ್ವದ ಬೆಳವಣಿಗೆ ನಡೆದಿದ್ದು, ಪಾಕಿಸ್ತಾನದ ತನ್ನ ವಶದಲ್ಲಿರುವ ಬಿಎಸ್ ಎಫ್ ಗೆ ಸೇರಿದ ಭಾರತೀಯ ಯೋಧ ಪಿ.ಕೆ. ಶಾ ಅವರನ್ನು ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದೆ.
ಯೋಧ ಪಿ.ಕೆ ಶಾ ಅವರನ್ನು ಇಂದು ಬೆಳಗ್ಗೆ 10.30ಕ್ಕೆ ಭಾರತಕ್ಕೆ ಹಸ್ತಾಂತರ ಮಾಡಲಾಯಿತು. 21 ದಿನಗಳ ಹಿಂದೆ ಪಂಜಾಬ್​ನ ಫಿರೋಜ್​ಪುರ ಗಡಿಯಲ್ಲಿ ಪಾಕಿಸ್ತಾನ, ಭಾರತೀಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ವಶಕ್ಕೆ ಪಡೆದಿತ್ತು. ಕಳೆದ ಏಪ್ರಿಲ್ 23ರಂದು ಭೂ ಸೇನೆಯ 182ನೇ ಬೆಟಾಲಿಯನ್‌ ಯೋಧ ಪಿ.ಕೆ. ಶಾ ಅವರು ಆಕಸ್ಮಿಕವಾಗಿ ಭಾರತದ ಗಡಿಯನ್ನು ದಾಟಿ, ಪಾಕಿಸ್ತಾನದ ಗಡಿ ರೇಖೆಯನ್ನು ಪ್ರವೇಶ ಮಾಡಿದ್ದರು. ಗಡಿ ದಾಟಿದ್ದ ತಪ್ಪಿಗೆ ಪಿ.ಕೆ. ಶಾ ಅವರನ್ನು ಪಾಕಿಸ್ತಾನದ ರೇಂಜರ್ಸ್ ಬಂಧಿಸಿದ್ದರು. ಭಾರತ- ಪಾಕ್ ಸಂಘರ್ಷ ನಡೆದು ಕದನ ವಿರಾಮದ ಬಳಿಕ ಪಾಕಿಸ್ತಾನ ಭಾರತದ ಷರತ್ತುಗಳಿಗೆ ಒಪ್ಪಿಕೊಂಡಿದೆ. ಹೀಗಾಗಿ ಅಟ್ಟಾರಿ ವಾಘಾ ಗಡಿ ಮೂಲಕ ಯೋಧ ಪಿ.ಕೆ. ಶಾ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದೆ.
ಯೋಧ ಪಿ.ಕೆ. ಶಾ ಅವರನ್ನು ಪ್ರೋಟೋಕಾಲ್ ಪ್ರಕಾರ ಭಾರತೀಯ ಸೇನೆಗೆ ಹಸ್ತಾಂತರ ಮಾಡಲಾಗಿದೆ. 21 ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಪಿ.ಕೆ. ಶಾ ಅವರು ಸದ್ಯ ಸೇನಾ ಕಣ್ಗಾವಲಿನಲ್ಲಿದ್ದಾರೆ. ಭಾರತೀಯ ಯೋಧ ವೈರಿ ರಾಷ್ಟ್ರದಿಂದ ಸುರಕ್ಷಿತವಾಗಿ ಬಿಡುಗಡೆಯಾಗಿರೋದು ಹೆಮ್ಮೆಯ ವಿಚಾರವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು