7:40 PM Thursday13 - August 2026
ಬ್ರೇಕಿಂಗ್ ನ್ಯೂಸ್
ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ…

ಇತ್ತೀಚಿನ ಸುದ್ದಿ

ಆಡಳಿತವನ್ನು ಜನರ ಬಳಿ ಒಯ್ಯಲು ಅಥಣಿ ಜಿಲ್ಲೆ ರಚನೆಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಗ್ರಹ: ಸಿಎಂಗೆ ಮನವಿ ಸಲ್ಲಿಸಲು ನಿರ್ಧಾರ

11/12/2023, 18:54

ಶಿವರಾಯ ಲಕ್ಷ್ಮಣ ಕರ್ಕರಮುಂಡಿ

info.reporterkarnataka@gmail.com

ಬೆಳಗಾವಿ ದೊಡ್ಡ ಜಿಲ್ಲೆ. ಇಲ್ಲಿ 18 ವಿಧಾನಸಭೆ ಕ್ಷೇತ್ರಗಳಿವೆ.
ಅಥಣಿ ಇಲ್ಲಿನ ಕೊನೆಯ ತಾಲೂಕು. ಬೆಳಗಾವಿ ಜಿಲ್ಲಾ ಕೇಂದ್ರದಿಂದ ತುಂಬಾ ದೂರದಲ್ಲಿದ್ದು, ಆಡಳಿತವನ್ನು ಇನ್ನಷ್ಟು ಸಮೀಪಕ್ಕೆ ತರುವ ದೃಷ್ಟಿಯಿಂದ ಅಥಣಿ ಜಿಲ್ಲಾ ಕೇಂದ್ರ ಆಗಬೇಕಿದೆ ಎಂದು ಮಾಜಿ ಡಿಸಿಎಂ, ಹಾಲಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ಜಿಲ್ಲಾ ಹೋರಾಟ ಸಮಿತಿಯಿಂದ ಸೋಮವಾರ ನಡೆದ ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸದನದಲ್ಲಿ ಈ ಕುರಿತು ಸರ್ಕಾರ ಗಮನವನ್ನು ಸೆಳೆಯುತ್ತೇನೆ. ಅಥಣಿ ಸುತ್ತಮುತ್ತ ಶಾಸಕರು ಕೂಡ ಬೆಂಬಲ ಸೂಚಿಸಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸುಮಾರು 35- 40 ಕಿ‌ಮೀ. ವಿಸ್ತೀರ್ಣದ ಜಿಲ್ಲೆ ರಚಿಸಲು ಆಹ್ರಹಿಸಲಾಗುತ್ತದೆ. ಬಾಗಲಕೋಟೆ ಜಿಲ್ಲೆಗೆ ಸೇರಿದ ವಿಧಾನಸಭೆ ಕ್ಷೇತ್ರವನ್ನೂ ಅಥಣಿ ಜಿಲ್ಲೆಗೆ ಸೇರಿಸಬೇಕು. ಅಲ್ಲಿನ ಜನರಿಗೆ ಬಾಗಲಕೋಟೆಗೆ ತೆರಳುವುದಕ್ಕಿಂತ ಅಥಣಿ ಸಮೀಪವಾಗುತ್ತದೆ ಎಂದು ಸವದಿ ನುಡಿದರು.
ಅಥಣಿ ಜಿಲ್ಲಾ ಕೇಂದ್ರಕ್ಕೆ ನೆರೆಯು ಶಾಸಕರು ಕೂಡಾ ಸದನದಲ್ಲಿ ಧ್ವನಿ ಎತ್ತುತಾರೆ. ಈ ಭಾಗದ ಜನರ ಭಾವನೆಯನ್ನು ಮುಖ್ಯಮಂತ್ರಿ ಅವರನ್ನು ಖುದ್ದಾಗಿ ಭೇಟಿಯಾಗಿ ಪ್ರಸ್ತಾಪ ಸಲ್ಲಿಸುತ್ತೇನೆ ಎಂದು ಅವರು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು