12:20 AM Friday21 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಗುಬ್ಬಚ್ಚಿಗಿಂತಲೂ ಚಿಕ್ಕದಾದ ಹಕ್ಕಿ.. ಈ ದರ್ಜಿ ಹಕ್ಕಿ!: ಗೂಡು ಕಟ್ಟುವುದರಲ್ಲಿ ಅತೀ ಬುದ್ದಿವಂತ!!

22/08/2026, 00:19

ದರ್ಜಿ ಹಕ್ಕಿ ಪುಟ್ಟದಾದ, ದುಂಡಾಕಾರದ, ಬುದ್ದಿವಂತ ಹಕ್ಕಿ. ಗಾತ್ರದಲ್ಲಿ ಗುಬ್ಬಚ್ಚಿ ಗಿಂತಲೂ ಚಿಕ್ಕದಾದ ಹಕ್ಕಿ. ಶರೀರದ ಮೇಲ್ಬಾಗ ಪಾಚಿ ಹಸುರ ಬಣ್ಣ, ಎದೆ, ಹೊಟ್ಟೆ ಹಾಗೂ ಬಾಲದ ಕೆಳಗಿನ ಭಾಗ ಬಿಳಿ ಹಾಗೂ ಕಾಲುಗಳು ತೆಳುವಾದ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಹಗುರ ದೇಹ, ಚಿಕ್ಕ ವೃತ್ತಾಕಾರದ ರೆಕ್ಕೆ, ಚೂಪದ ಬಾಲವನ್ನು ಸದಾ ಎತ್ತಿಕೊಂಡಿರುತ್ತದೆ. ತೆಳುವಾದ ತುಸು ಉದ್ದನೆಯ ಕೊಕ್ಕು ಹಾಗೂ ತಲೆಯ ಮೇಲ್ಬಾಗದಲ್ಲಿ ತೇಪೆ ಹಚ್ಚಿದಂತಿರುವ ಬೂದು ಬಣ್ಣ ನೋಡಲು ಬಲು ಸೊಗಸು.

ದರ್ಜಿ ಹಕ್ಕಿಗಳು ಸಾದಾರಣವಾಗಿ ಪೊದೆಗಳಲ್ಲಿ, ತೋಟಗಳಲ್ಲಿ ಹಾರಾಡುತ್ತಿರುತ್ತದೆ. ದೇಹದ ಗಾತ್ರಕ್ಕಿಂತಲೂ ದೊಡ್ಡದಾದ ಸ್ವರ ದಿಂದಾಗಿ, ಕಾಣಸಿಗುವುದಕ್ಕಿಂತಲೂ ಜಾಸ್ತಿಯಾಗಿ ಇವುಗಳ ಟುವ್ವಿ ಟುವ್ವಿ ಎನ್ನುವ ಇಂಪಾದ ಕೂಗು ಕಿವಿಗಳಿಗೆ ಹಿತವಾಗಿ ಕೇಳುತ್ತಿರುತ್ತದೆ. ಇವುಗಳು ಜೇಡ, ಕೀಟಗಳನ್ನು ಹಿಡಿದು ತಿನ್ನುತ್ತದೆ.
ಇವುಗಳು ಕ್ರೀಯಾಶೀಲತೆಯಿಂದ ತಮ್ಮ ಗೂಡನ್ನು ಕಟ್ಟುವ ವಿಧಾನದಿಂದಾಗಿ ದರ್ಜಿ ಹಕ್ಕಿ ಎನ್ನುವ ಹೆಸರು ಪಡೆದುಕೊಂಡಿವೆ.
ಇವುಗಳು ಸಾಮಾನ್ಯವಾಗಿ ನೆಲದಿಂದ ತುಸು ಎತ್ತರದಲ್ಲಿರುವ ನೇತಾಡುವ 2 ಎಲೆಗಳನ್ನು ಬಳಸಿ ಗೂಡನ್ನು ನಿರ್ಮಿಸುತ್ತದೆ. ಎರಡು ದೊಡ್ಡ ಎಲೆಯ ಅಂಚುಗಳನ್ನು ಕೊಕ್ಕಿನಿಂದ ಚುಚ್ಚಿ ಸಸ್ಯದ ನಾರು ಅಥವಾ ಜೇಡರ ಬಲೆಯಿಂದ ಹೊಲಿಯುತ್ತದೆ. ಸರಿಯಾಗಿ ಗಮನಿಸಿದರೆ ಹೊಲಿಗೆ ಹಾಕಿದಂತೆ ಕಾಣುತ್ತದೆ. ತೊಟ್ಟಿಲಿನಂತೆ ತೂಗಾಡುವ ಈ ಗೂಡಿನ ಒಳ ಭಾಗವನ್ನು ಮೃದುವಾದ ನಾರು, ಹತ್ತಿ ಗಳಿಂದ ಮೆತ್ತನೆಗೊಳಿಸಿ 2 ರಿಂದ 5 ಮೊಟ್ಟೆಗಳನಿಟ್ಟು ಮರಿ ಮಾಡುತ್ತದೆ. ಮೊಟ್ಟೆಯಿಂದ ಮರಿ ಹೊರ ಬರಲು 12ರಿಂದ 15 ದಿನಗಳು ಬೇಕಾಗುತ್ತದೆ. ಮೊಟ್ಟೆಗಳಿಗೆ ಕಾವು ಕೊಡುವುದರಲ್ಲಿ, ಮರಿಗಳಿಗೆ ಆಹಾರ ಒದಗಿಸುವದರಲ್ಲಿ ಗಂಡು ಹೆಣ್ಣು ಎರಡೂ ಸಮಭಾಗಿಗಳು.


ಪರಿಸರಕ್ಕೆ ಸೌಂದರ್ಯದ ಬೊಟ್ಟಿನಂತಿರುವ ದರ್ಜಿ ಹಕ್ಕಿಗಳು ಜೀವಿತಾವಧಿ 3 ರಿಂದ 5 ವರ್ಷಗಳು ಪರಿಸರದ ಸಮತೋಲನತೆಗೆ ಇವುಗಳ ಇರುವಿಕೆ ಅತ್ಯಗತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು