1:53 PM Tuesday10 - February 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ

ಇತ್ತೀಚಿನ ಸುದ್ದಿ

ಯತ್ನಾಳ್ ಮತ್ತು ನಂದೂ ಒಂದೇ ಡಿಎನ್ ಎ, ಅದು ಬಿಜೆಪಿ ಡಿಎನ್ ಎ: ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ

26/06/2023, 19:04

ರಾಹುಲ್ ಅಥಣಿ ಬೆಳಗಾವಿ

info.reporterkarnataka@mail.com

ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ನಂದು ಒಂದೇ ಡಿಎನ್ ಎ. ಅದು ಬಿಜೆಪಿ ಡಿಎನ್ ಎ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯದ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕೋಡಿಯ ಯಕ್ಸಂಬಾ ಪಟ್ಟಣದಲ್ಲಿ ಬೊಮ್ಮಾಯಿ ಅವರು ಮಾಧ್ಯಮ ಜತೆ ಮಾತನಾಡಿದರು.
ನಾವು ಒಗ್ಗಟ್ಟಾಗಿ, ಒಂದಾಗಿ ಕಾಂಗ್ರೆಸ್ ಸೋಲಿಸುವ ಕುರಿತು ಮಾತನಾಡಿದ್ದೇವೆ ಹೊರತು ಮತ್ತೇನೂ ಅಲ್ಲ.ಬೆಳಗ್ಗೆಯಿಂದ ನಾವೆಲ್ಲರೂ ಒಟ್ಟಿಗೆ ಇದ್ದೇವೆ.

ಅವರ ಕಾರ್‌ಲ್ಲೇ ಬಂದಿದ್ದೇನೆ ಇಬ್ಬರೂ ಅಣ್ಣತಮ್ಮಂದಿರ ಹಾಗೆ ಇದ್ದೇವೆ. ಇಬ್ಬರದ್ದೂ ಮೂವತ್ತು ವರ್ಷಗಳ ದೋಸ್ತಿ.
ರಾಜಕಾರಣ ಮೀರಿ ನಮ್ಮಿಬ್ಬರ ಸ್ನೇಹವಿದೆ. ಯತ್ನಾಳ್ ಅವರದೇ ಆದ ಶೈಲಿಯಲ್ಲಿ ಆ ರೀತಿ ಹೇಳಿದ್ದಾರೆ.
ಅವರು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ನಾನು ಸಾರ್ವಜನಿಕವಾಗಿಯೇ ಸ್ಪಷ್ಟಿಕರಣ ಕೊಟ್ಟಿದ್ದೇನೆ.
ಈಗಲೂ ಹೇಳುತ್ತೇನೆ ನಮ್ಮಿಬ್ಬರದ್ದು ಒಂದೇ ಡಿಎನ್‌ಎ, ಅದು ಬಿಜೆಪಿ ಡಿಎನ್‌ಎ ಎಂದು ಮಾಜಿ ಮುಖ್ಯಮಂತ್ರಿ ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು