3:26 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಸ್ವಂತ ಗ್ಯಾರಂಟಿ ಇಲ್ಲದ ರಾಹುಲ್ ಗಾಂಧಿ ಕರ್ನಾಟಕ ಜನತೆಗೆ ಏನು ಗ್ಯಾರಂಟಿ ಕೊಡುತ್ತಾರೆ: ಅಸ್ಸಾಂ ಸಿಎಂ ಶರ್ಮಾ ಪ್ರಶ್ನೆ

07/05/2023, 19:32

ಮಂಗಳೂರು(reporterkarnataka.com): ಕರ್ನಾಟಕ ಚುನಾವಣೆ ಘೋಷಣೆಗೆ ಹಲವು ತಿಂಗಳ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದರು. ಆದರೆ ಚುನಾವಣೆ ಘೋಷಣೆಯಾದ ಬಳಿಕ ಅವರ ಪಕ್ಷವನ್ನು ಗೆಲುವಿನ ಕಡೆಗೆ ಮುನ್ನಡೆಸಬೇಕಾದ ವ್ಯಕ್ತಿ ಬಳಿಕ ಆ ನಾಪತ್ತೆಯಾಗಿದ್ದಾರೆ. ಸ್ವತಃ ತನ್ನ ಬಗ್ಗೆ ಗ್ಯಾರಂಟಿ ಇಲ್ಲದ ಒಬ್ಬ ನಾಯಕ ರಾಹುಲ್ ಗಾಂಧಿ. ಅಂತಹ ವ್ಯಕ್ತಿ ಕರ್ನಾಟಕದ ಜನತೆಗೆ ನೀಡುವ ಗ್ಯಾರಂಟಿಯನ್ನು ನೀವು ನಂಬುವಿರಾ? ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಪ್ರಶ್ನಿಸಿದರು.

ನಗರದ ಲಾಲ್ ಬಾಗ್ ನಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕದ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಆತ್ಮಘಾತುಕ. ಮುಸ್ಲಿಂ ತುಷ್ಟೀಕರಣದ ಎಲ್ಲ ಮೇರೆಗಳನ್ನೂ ಮೀರಿರುವ ಕಾಂಗ್ರೆಸ್‌ಗೆ ದೇಶದ ಬಹುಸಂಖ್ಯಾತ ಸಮುದಾಯದ ವಿರುದ್ಧ ಯುದ್ಧ ಸಾರುವುದೇ ಏಕಮಾತ್ರ ಧ್ಯೇಯವಾಗಿದೆ. ಆ ಪಕ್ಷ ಬಹುಸಂಖ್ಯಾತ ಸಮುದಾಯವನ್ನು ಗೌರವಿಸುವುದಿಲ್ಲ. ನಮ್ಮ ಸಂಸ್ಕೃತಿ, ಧರ್ಮವನ್ನು ವಿರೋಧಿಸುವುದೇ ಅವರ ಗುರಿ. ಮುಸ್ಲಿಮರಿಗೆ ಮೀಸಲಾತಿ ಎನ್ನುವ ಮೂಲಕ ಇತರ ಸಮುದಾಯಗಳನ್ನು ಕಡೆಗಣಿಸಿದೆ. ಈ ದೇಶದ ಹಿಂದೂಗಳಿಗೆ, ಕ್ರೈಸ್ತರಿಗೆ, ಜೈನರಿಗೆ, ಬೌದ್ಧರಿಗೆ ಮೀಸಲಾತಿ ಬೇಡವೆ? ಬರೀ ಮುಸ್ಲಿಮರಿಗೆ ಮೀಸಲಾತಿ ಎಂದರೆ ಸಾಕೆ? ಕಾಂಗ್ರೆಸ್ ಅನುಸರಿಸುವ ಮೀಸಲಾತಿಗೂ ಬಿಜೆಪಿ ಅನುಸರಿಸುವ ಮೀಸಲಾತಿಗೂ ಬಹಳ ಅಂತರವಿದೆ. ಎಲ್ಲ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದವರಿಗೆ ಸಮಾನವಾಗಿ ಮೀಸಲಾತಿಯ ಲಾಭ ದೊರಕಬೇಕು ಎನ್ನುವುದು ಬಿಜೆಪಿಯ ನೀತಿ. ಅದಕ್ಕನುಗುಣವಾಗಿಯೇ ಬಿಜೆಪಿ ಸರಕಾರಗಳು ಕೆಲಸ ಮಾಡುತ್ತಿವೆ ಎಂದು ಅಸ್ಸಾಂ ಮುಖ್ಯಮಂತ್ರಿ ನುಡಿದರು.
ದೇಶದ ಆರ್ಥಿಕ, ಸಾಂಸ್ಕೃತಿಕ ಪ್ರಗತಿಗೆ ಕರ್ನಾಟಕದ ಕೊಡುಗೆಗಳು ಅಪಾರ. ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಇಲ್ಲಿನ ಜನರ ಭಾವನೆಗಳು ಮತ್ತು ಸ್ಪಂದನೆಗಳನ್ನು ಗಮನಿಸಿದರೆ ಬಿಜೆಪಿಯ ಬಹುಮತದ ಸಂಖ್ಯೆ ದಾಖಲೆಯ ಮಟ್ಟ ತಲುಪುವುದರಲ್ಲಿ ಸಂದೇಹವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಮತ್ತು ಸಮಾವೇಶಗಳಿಗೆ ಕರ್ನಾಟಕದ ಜನತೆಯ ಭಾರೀ ಬೆಂಬಲವನ್ನು ಗಮನಿಸಿದರೆ ಪಕ್ಷದ ಗೆಲುವಿನ ಸಂಖ್ಯೆ 150 ಸೀಟುಗಳನ್ನೂ ದಾಟುವುದು ಖಚಿತ’ ಎಂದು ಶರ್ಮಾ ಹೇಳಿದರು.
ಕರ್ನಾಟಕದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿದ್ದ ಆರಂಭಿಕ ಚಿತ್ರಣಗಳು ಈಗ ಅತ್ಯಂತ ಗಮನಾರ್ಹವಾಗಿ ಬದಲಾಗಿದೆ. ಪ್ರಚಾರ ಹಂತದಲ್ಲೇ ಆರಂಭಿಕ ಲೆಕ್ಕಾಚಾರಗಳನ್ನು ಮೀರಿ ಬಿಜೆಪಿ ಮುನ್ನಡೆ ಸಾಧಿಸಿದೆ. ನಾನು ಒಂದು ವಾರದಿಂದ ಸುತ್ತಾಟ ನಡೆಸಿದ ಪ್ರದೇಶಗಳಲ್ಲೆಲ್ಲೂ ಒಂದೇ ಒಂದು ಕಾಂಗ್ರೆಸ್‌ ಪ್ರಚಾರ ಅಥವಾ ರ್ಯಾಲಿ ನಡೆಯುವುದನ್ನು ಕಂಡಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಈಗಾಗಲೇ ನಿಷೇಧಿಸಲಾಗಿರುವ ಪಿಎಫ್‌ಐ ಮತ್ತು ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳುವ ಮೂಲಕ ಭಿನ್ನ ರೀತಿಯಲ್ಲಿ ದೇಶದ್ರೋಹಿ ಸಂಘಟನೆ ಪಿಎಫ್‌ಐ ಜತೆಗಿನ ತನ್ನ ನಂಟನ್ನು ಹೇಳಿಕೊಂಡಿದೆ. ಪಿಎಫ್‌ಐ ದೇಶವ್ಯಾಪಿ ನೆಟ್‌ವರ್ಕ್‌ ಹೊಂದಿರುವ ಉಗ್ರ ಸಂಘಟನೆ. ಪಿಎಫ್‌ಐ ಅನ್ನು ಭಾರತ ಸರಕಾರ ನಿಷೇಧಿಸಿದಾಗ ಯಾವ ಕಾಂಗ್ರೆಸ್ ನಾಯಕನೂ ಅದನ್ನು ವಿರೋಧಿಸಲಿಲ್ಲ, ಖಂಡಿಸಿ ಪತ್ರಿಕಾಗೋಷ್ಠಿ ಮಾಡಿಲ್ಲ ಅಥವಾ ಪತ್ರಿಕಾ ಹೇಳಿಕೆಯನ್ನೂ ನೀಡಿಲ್ಲ. ಇಡೀ ದೇಶದ ಸರಕಾರದ ಕ್ರಮವನ್ನು ಸ್ವಾಗತಿಸಿತ್ತು. ಆದರೆ ಬಹುಸಂಖ್ಯಾತ ಹಿಂದೂ ವಿರೋಧಿ ಕಾಂಗ್ರೆಸ್‌ ಅಂತರಂಗದಲ್ಲಿ ವಿರೋಧಿಸಿತ್ತು. ಆ ಭಾವನೆಗಳೇ ಅದರ ಪ್ರಣಾಳಿಕೆಯಲ್ಲಿ ವ್ಯಕ್ತವಾಗಿದೆ ಎಂದು ಅವರು ಟೀಕಿಸಿದರು.
ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ, ವಿಧ್ವಂಸಕ ಅಪರಾಧ ಕೃತ್ಯಗಳಲ್ಲಿ ಜೈಲು ಸೇರಿದ್ದ ಪಿಎಫ್‌ಐನ 1,700ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ಕಾಂಗ್ರೆಸ್‌ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ದೇಶದ ಹಲವು ಭಾಗಗಳಿಂದ ಐಸಿಸ್‌ ಜತೆ ಸಂಪರ್ಕ ಹೊಂದಿರುವ ಪಿಎಫ್‌ಐ ಉಗ್ರರನ್ನು ಬಂದಿಸಿದೆ. ಹಲವಾರು ಸ್ಲೀಪರ್‌ ಸೆಲ್‌ಗಳನ್ನು ಧ್ವಂಸಗೊಳಿಸಿದೆ. ಅಂತಹ ಪಿಎಫ್‌ಐ ಅನ್ನು ನಿಷೇಧಿಸಿರುವುದನ್ನು ಅದೇ ಸಂಘಟನೆಯ ರಾಜಕೀಯ ಮುಖವಾದ ಎಸ್‌ಡಿಪಿಐ ವಿರೋಧಿಸುತ್ತಿದೆ. ಜಾತ್ಯತೀತತೆಯ ಮುಖವಾಡ ಹೊತ್ತ ಕಾಂಗ್ರೆಸ್ ನೇರವಾಗಿ ವಿರೋಧಿಸಲು ಆಗದ ಕಾರಣ ಬಜರಂಗದಳವನ್ನು ಪಿಎಫ್‌ಐ ಜತೆ ಸಮೀಕರಿಸುವ ಮೂಲಕ ಭಿನ್ನ ರೀತಿಯಲ್ಲಿ ತನ್ನ ನಿಲುವನ್ನು ತೋರಿಸಿಕೊಂಡಿದೆ ಎಂದು ಅವರು ವಿವರಿಸಿದರು.
ಬಜರಂಗ ದಳ ಯಾವತ್ತೂ ಉಗ್ರವಾದಿ ಸಂಘಟನೆಯಲ್ಲ. ಅದು ಯಾವುದೇ ವಿಧ್ವಂಸಕ ಕೃತ್ಯದಲ್ಲಿ ತೊಡಗಿಲ್ಲ, ರಾಷ್ಟ್ರೀಯತೆ, ಹಿಂದುತ್ವ ಪ್ರತಿಪಾದಿಸುವ ಅವರು ದೇಶದ್ರೋಹದ ಕೃತ್ಯ ಮಾಡಿಲ್ಲ. ಹಾಗಿರುವಾಗ ಬಜರಂಗ ದಳ ನಿಷೇಧ ಮಾಡುತ್ತೇವೆ ಎಂದಿರುವುದು ಪಿಎಫ್‌ ನಿಷೇಧಕ್ಕೆ ಕಾಂಗ್ರೆಸ್ ತೋರಿರುವ ಪ್ರತಿರೋಧ ಅಷ್ಟೆ ಎಂದು ಶರ್ಮಾ ನುಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಅಸ್ಸಾಂ ಮುಖ್ಯಮಂತ್ರಿಗಳು, ಬಜರಂಗ ದಳ ಕಾರ್ಯಕರ್ತರ ವಿರುದ್ಧ ಎಲ್ಲಾದರೂ ಪ್ರಕರಣಗಳು ದಾಖಲಾಗಿದ್ದರೆ ಅದು ಐಪಿಸಿ ಸೆಕ್ಷನ್ ಅಡಿಯಲ್ಲೇ ಹೊರತು, ಯುಎಪಿಎ ಅಡಿಯಲ್ಲಿ ಅಲ್ಲ. ಬಜರಂಗದಳ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದಾರೆ ಎಂಬ ಮಾಧ್ಯಮ ಮಂದಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೀವು ಯಾವ ಆಧಾರದಲ್ಲಿ ಬಜರಂಗದಳವನ್ನೂ ಪಿಎಫ್‌ಐ ಅನ್ನೂ ಹೋಲಿಕೆ ಮಾಡುತ್ತೀರಿ ಎಂದು ಮರುಪ್ರಶ್ನೆ ಹಾಕಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ1972 ರಲ್ಲಿ ‘ಗರೀಬಿ ಹಟಾವೋ’ ಘೋಷಣೆ ತಂದರು. ಈಗಲೂ ಕಾಂಗ್ರೆಸ್ ಅದನ್ನೇ ಹೇಳುತ್ತಿದೆ. ಹಾಗಾದರೆ ಸ್ವಾತಂತ್ರ್ಯಾನಂತರ ಐದು ದಶಕಗಳಿಗೂ ಹೆಚ್ಚು ಕಾಲ ದೇಶವಾಳಿದ ಕಾಂಗ್ರೆಸ್ ಮಾಡಿದ್ದಾದರೂ ಏನು? ಹಳ್ಳಿ ಹಳ್ಳಿಗಳಲ್ಲಿ ಜನಸಾಮಾನ್ಯರ ಮನೆಗಳಿಗೆ ಶೌಚಾಲಯ ಸೌಲಭ್ಯ ಸಿಗಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯ್ತು. ಸಾಮಾನ್ಯ ಜನತೆಗೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ವಸತಿ ಸೌಲಭ್ಯ ದೊರಕಲು ಮೋದಿ ಬರಬೇಕಾಯ್ತು. ಮನೆ ಮನೆಗೆ ನಳ್ಳಿ ನೀರು ಸೌಲಭ್ಯ ದೊರಕಲು ಮೋದಿ ಬರಬೇಕಾಯ್ತು. ಹಾಗಾದರೆ ಕಾಂಗ್ರೆಸ್ ಇಷ್ಟು ವರ್ಷ ಏನು ಮಾಡುತ್ತಿತ್ತು? ಈ ಬಗ್ಗೆ ಕಾಂಗ್ರೆಸ್ ವಿವರಣೆ ನೀಡಬೇಕು ಎಂದು ಹಿಮಂತ್ ಬಿಸ್ವ ಶರ್ಮಾ ವಾಗ್ದಾಳಿ ನಡೆಸಿದರು.
ಕರ್ನಾಟಕದ ಹಿರಿಮೆ, ಗರಿಮೆಗೆ ಮೆಚ್ಚುಗೆ:
ಮಾಹಿತಿ ತಂತ್ರಜ್ಞಾನ, ಬಯೋಟೆಕ್ನಾಲಜಿ, ಕೃಷಿ ಕ್ರಾಂತಿ, ಶಿಕ್ಷಣ- ಹೀಗೆ ಎಲ್ಲದರಲ್ಲೂ ಕರ್ನಾಟಕ ಅಗ್ರಗಣ್ಯ. ಅಂತಹ ಕನ್ನಡಿಗರಿಗೆ ಯಾವುದೇ ಗ್ಯಾರಂಟಿ ಬೇಕಿಲ್ಲ. ಕರ್ನಾಟಕದ ಹೆಮ್ಮೆ, ಘನತೆಯನ್ನು ಕಾಪಾಡಬೇಕಿದೆ.
ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ನಿರ್ಮಿಸಿಕೊಡಬೇಕೇ ಹೊರತು ಗ್ಯಾರಂಟಿ ಹೆಸರಿನಲ್ಲಿ ಈಡೇರಿಸಲಾಗದ ಸುಳ್ಳು ಭರವಸೆಗಳು ಬೇಕಾಗಿಲ್ಲ ಎಂದು ಶರ್ಮಾ ನುಡಿದರು.
ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪ್ರಾಸ್ತಾವಿಕ ಮಾತುಗಳ ಮೂಲಕ ಹಿಮಂತ್ ಬಿಸ್ವ ಶರ್ಮಾ ಅವರನ್ನು ಸ್ವಾಗತಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ, ಜಿಲ್ಲಾ ಮಾಧ್ಯಮ ಸಂಚಾಲಕ ರಣದೀಪ್ ಕಾಂಚನ್ ಮತ್ತು ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು