6:33 PM Saturday20 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಎಕ್ಸಾಂ ವಾರಿಯರ್ಸ್‌: ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಚಿತ್ರರಚನಾ ಸ್ಪರ್ಧೆ; ಪ್ರಧಾನಿ ಪ್ರೇರಣೆಯಿಂದ ಶಾಸಕ ವೇದವ್ಯಾಸ ಕಾಮತ್‌ ಆಯೋಜನೆ

27/01/2023, 22:14

ಮಂಗಳೂರು(reporterkarnataka.com): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಧ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬ ಪರಿಕಲ್ಪನೆಯಲ್ಲಿ ತರುಣ ಸಮುದಾಯಕ್ಕಾಗಿ ಬರೆದಿರುವ “ಎಕ್ಸಾಮ್ ವಾರಿಯರ್ಸ್” ಕೃತಿಯ ಅನುಸಾರ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪೂರಕವಾಗಿ ಮಂಗಳೂರು ನಗರ ದಕ್ಷಿಣದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ವಿನೂತನವಾಗಿ ಚಿತ್ರ ಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯು ಶಕ್ತಿನಗರ ಶಕ್ತಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. 9,10 ಹಾಗೂ ಪಿಯುಸಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಸ್ಪರ್ಧೆ ನಡೆಯಲಿದೆ‌. ಜಿಲ್ಲೆಯಿಂದ ಸರಿ ಸುಮಾರು 500ಕ್ಕೂ ಅಧಿಕ ವಿಧ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ‌ ನಿರೀಕ್ಷೆಯಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಊಟ ಉಪಹಾರದ ವ್ಯವಸ್ಥೆ ಹಾಗೂ ಪ್ರಧಾನಿ ಅವರು ರಚಿಸಿದ ಎಕ್ಸಾಮ್ ವಾರಿಯರ್ಸ್ ಕೃತಿಯನ್ನು ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ವಿಶೇಷವಾಗಿ ಟ್ರೋಫಿ ಹಾಗೂ 8 ಗ್ರಾಂ ಚಿನ್ನದ ಪದಕ, ದ್ವಿತೀಯ 6 ಗ್ರಾಂ ಚಿನ್ನದ ಪದಕ, ಹಾಗೂ ತೃತೀಯ 4 ಗ್ರಾಂ ಚಿನ್ನದ ಪದಕ ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಗುವುದು. ಮಾತ್ರವಲ್ಲದೆ ಸಮಾಧಾನಕರ ಬಹುಮಾನವಾಗಿ 25 ಜನರಿಗೆ ಬೆಳ್ಳಿಯ ಪದಕ ಹಾಗೂ ಎಕ್ಸಾಂ ವಾರಿಯರ್ಸ್ ಪುಸ್ತಕ ನೀಡಲಾಗುತ್ತದೆ.

ಚಿತ್ರಕಲೆಯ ಕುರಿತು ಆಸಕ್ತರಾಗಿರುವ ಸಾರ್ವಜನಿಕರಿಗೂ ಕೂಡ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.
ಸ್ಪರ್ಧೆಯ ಪ್ರಥಮ ಬಂಗಾರದ ಬಹುಮಾನವನ್ನು ಕೆ.ಎಸ್ ರಾವ್ ರೋಡ್ ಎಸ್.ಎಲ್ ಶೇಟ್ ಮಾಲಕರಾದ ಪ್ರಶಾಂತ್ ಶೇಟ್ ಹಾಗೂ ಸಹೋದರರು, ದ್ವಿತೀಯ ಬಹುಮಾನ ಬಂಗಾರದ ಪದಕ ಬಹುಮಾನವನ್ನು ಜೋಸ್ ಆಲುಕಾಸ್ ಬಂಗಾರದ ಮಳಿಗೆ, ತೃತೀಯ ಬಹುಮಾನದ ಚಿನ್ನದ ಪದಕವನ್ನು ಲೇಡಿಹಿಲ್ ಎಸ್.ಎಲ್ ಶೇಟ್ ಬಂಗಾರದ ಮಳಿಗೆಯ ರವೀಂದ್ರ ಪೈ ಹಾಗೂ ಮಕ್ಕಳು, 25 ಬೆಳ್ಳಿಯ ಪದಕವನ್ನು ಕದ್ರಿ‌ ಸ್ವರ್ಣ ಜ್ಯುವೆಲ್ಲರಿ ನೀಡುತ್ತಿದ್ದಾರೆ.

ಮಕ್ಕಳಲ್ಲಿ ಮನೋಬಲ ಹೆಚ್ಚಿಸುವ ಪ್ರಯತ್ನ:
ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಲ್ಲಿ ಮನೋಬಲ ಹೆಚ್ಚಿಸಿ, ಆತ್ಮಸ್ಥೈರ್ಯ ತುಂಬಲು ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ‘ಎಕ್ಸಾಂ ವಾರಿಯರ್ಸ್‌’ ಕೃತಿಯಲ್ಲಿ ನೀಡಿರುವವ ಸಲಹೆಗಳಂತೆ ನಾವೂ ಸಹ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವುದರ ಜತೆಗೆ ವಿನೂತನವಾದ ಯೋಚನೆಗಳನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಸೃಜನಶೀಲವಾದ ಚಿತ್ರಗಳ ರಚನೆಗೆ ಪ್ರೋತ್ಸಾಹಿಸುತ್ತಿದ್ದೇವೆ. ಈ ಸರಣಿಯಲ್ಲಿ ಮೊದಲ ಕಾರ್ಯಕ್ರಮವನ್ನು ಇಂದು ಯಶಸ್ವಿಯಾಗಿ ಆಯೋಜಿಸಿದ್ದೇವೆ ಎಂದು ಕಾಮತ್‌ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು