12:24 AM Friday30 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ಕಾಫಿ ಪಿಯೋ ಬಿಸ್ಕೆಟ್ ಕಾವೋ: ಬೆಂಗಳೂರಿನಲ್ಲಿ ಕಾಫಿ ಪ್ರಿಯರಿಗಾಗಿ ‘ಕಾಲ್ ಕಾಫಿ ವಾಲಾ’

09/10/2022, 23:58

ಬೆಂಗಳೂರು(reporterkarnataka.com): ಕಾಫಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಷ್ಟೇ ಚಾಹ ಕುಡಿಯುವವರು ಆದರೂ ತಲೆ ನೋವಾದಾಗ, ಬೇಜಾರಾದಾಗ, ಮಳೆ ಬಂದಾಗ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಕಾಫಿಯನ್ನು ಸವಿಯುತ್ತೇವೆ. ಇದಕ್ಕಾಗಿಯೇ
ಕಾಫಿ ಪ್ರಿಯರಿಗಾಗಿ ಕುಮಾರಸ್ವಾಮಿ ಲೇ ಔಟ್ ನಲ್ಲಿ ‘ಕಾಲ್ ಕಾಫಿ ವಾಲಾ’ ಕಾಫಿ ಪಿಯೋ ಬಿಸ್ಕೆಟ್ ಕಾವೋ ಎಂಬ ಟ್ಯಾಗ್ ಲೈನ್ ನೊಂದಿಗೆ ಅನೇಕ ಬಗೆಯ ಫ್ಲೇವರ್ಡ್ ಕಾಫಿ ಡಿಕಾಕ್ಷನ್ ಅನ್ನು ಬಿಡುಗಡೆ ಮಾಡಿದೆ.

ಈ ಸಂದರ್ಭದಲ್ಲಿ ಕಾಲ್ ಕಾಫಿ ವಾಲಾದ ವ್ಯವಸ್ಥಾಪಕ ನಿರ್ದೇಶಕ ಅರ್ಪಿತಾ ಪಿ.ಎ., ಎಸ್ ಬಿ ಐ ರಿಜನಲ್ ಮ್ಯಾನೇಜರ್ ಪ್ರದೀಪ್ ಆರ್., ಎಸ್ ಬಿ ಐ ಮ್ಯಾನೇಜರ್ ರುಪ್ನ ಚಕ್ರವರ್ತಿ ಮತ್ತೀತರ ಗಣ್ಯರು ಉಪಸ್ಥಿತರಿದ್ದರು.
ಕಾಫಿ ಪಿಯೋ ಬಿಸ್ಕೆಟ್ ಕಾವೋ ಎಂಬ ಟ್ಯಾಗ್ ಲೈನ್ ನೊಂದಿಗೆ ಫ್ಲೇವರ್ಡ್ ಡಿಕಾಕ್ಷನ್ ಗಳನ್ನು ಬಿಡುಗಡೆ ಮಾಡಿದ ಈ ಕಾಲ್ ಕಾಫಿ ವಾಲಾ ವಿಶೇಷತೆ ಏನೆಂದರೆ ಇಲ್ಲಿ ಕಾಫಿಯನ್ನು ಯಾವುದೇ ರೀತಿಯ ಪ್ಲಾಸ್ಟಿಕ್, ಪೇಪರ್ ಅಥವಾ ಸ್ಟಿಲ್ ಕಪ್ ನಲ್ಲಿ ಕೊಡುವುದಿಲ್ಲ. ಬದಲಿಗೆ ವೆಪರ್ಸ್ / ಬಿಸ್ಕೆಟ್ ರೀತಿಯ ಕಪ್ ನಲ್ಲಿ ಕಾಫಿಯನ್ನು ಕೊಡುತ್ತಾರೆ. ಕಾಫಿ ಕುಡಿದು ನಂತರ ಬಿಸ್ಕೆಟ್ ಅನ್ನು ತಿನ್ನಬಹುದು. ಹಾಗೇ ಈ ಬಿಸ್ಕೆಟ್ ಕಪ್ ನಲ್ಲಿ ಹತ್ತು ನಿಮಿಷಗಳ ಕಾಲ ಕಾಫಿ ತಣ್ಣಗಾಗುವುದಿಲ್ಲ ಹಾಗಾಗಿ ಬಿಸಿ ಬಿಸಿ ಕಾಫಿಯನ್ನು ಕುಡಿಯುತ್ತ ಕೊನೆಗೆ ಬಿಸ್ಕೆಟ್ ಸವಿಯಬಹುದು.
ಇಲ್ಲಿ ಕ್ಯಾರಮಲ್, ವೆನಿಲ್ಲಾ, ಚಾಕೊಲೆಟ್, ಹ್ಯಾಸಲ್ ನೆಟ್, ವಾಟರ್ ಮೆಲನ್, ಪ್ಲೇನ್ ಫ್ಲೇವರ್ ಗಳು ಲಭ್ಯವಿದ್ದು ಇದು ಕಾಫಿ ಪ್ರಿಯರ ನಾಲಿಗೆಯ ರುಚಿಯನ್ನು ತಣಿಸಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು