3:14 PM Saturday26 - September 2026
ಬ್ರೇಕಿಂಗ್ ನ್ಯೂಸ್
ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ*

ಇತ್ತೀಚಿನ ಸುದ್ದಿ

*ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು ಇಲಾಖೆಯ ಎಸ್ ಪಿಎಂಸಿಐಲ್ ನಿಗಮ*

24/09/2026, 21:24

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೊಡಗಿನಲ್ಲಿ ಕಾಡಾನೆಗಳ ಉಪಟಳದಿಂದ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ, ಕರ್ನಾಟಕ ಅರಣ್ಯ ಇಲಾಖೆ ವನ್ಯಜೀವಿ ಮಾನವ ಸಂಘರ್ಷ ತಪ್ಪಿಸಲು ಕೇಂದ್ರ ಹಣಕಾಸು ಇಲಾಖೆಯ ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ(SPMCIL) ಎರಡು ವಾಹನಗಳನ್ನು ನೀಡಿದೆ.
ಸಂಸ್ಥೆಯ ಸಾಮಾಜಿಕ ಕಾರ್ಪೊರೇಟ್ ಹೊಣೆಗಾರಿಕೆ ನಿಧಿಯಡಿ(CSR) ವಾಹನಗಳನ್ನು ಅರಣ್ಯ ಇಲಾಖೆಗೆ ಬುಧವಾರ ಹಸ್ತಾಂತರ ಮಾಡಲಾಗಿದೆ.
ಎಸ್ ಪಿಎಂಸಿಐಎಲ್ ನ ಮೈಸೂರು ಘಟಕದ ಮೂಲಕ ಎರಡು ವಾಹನಗಳನ್ನು ಮೇಟಗಳ್ಳಿಯಲ್ಲಿರುವ ಘಟಕದ ಆವರಣದಲ್ಲಿ ಹಸ್ತಾಂತರಿಸಲಾಯಿತು
ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕರ್ನಾಟಕ ಕೇಡರ್ ನ ಹಿರಿಯ ಐಎಫ್ ಎಸ್ ಅಧಿಕಾರಿ ವಿಜಯರಂಜನ ಸಿಂಗ್ ಹಾಗೂ ನಿಗಮದ ನಿರ್ದೇಶಕರಾದ ಎಸ್.ಕೆ.ಸಿನ್ಹಾ( ಮಾನವ ಸಂಪನ್ಮೂಲ), ಟಿ.ನಾಗರಾಜನ್( ಹಣಕಾಸು) ಉಪಸ್ಥಿತಿಯಲ್ಲಿ ವಾಹನಗಳನ್ಬು ಕೊಡಗು ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವ್ರಿಷ್ನಿ ಸ್ವೀಕರಿಸಿದರು.
ನಿಗಮದ ಮೂಲಕ ಪ್ರತಿ ವರ್ಷ ನಾನಾ ಚಟುವಟಿಕೆಗಳಿಗೆ ಸಿಎಸ್ ಆರ್ ನೆರವನ್ನು ನೀಡಲಾಗುತ್ತಿದೆ. ಶಿಕ್ಷಣ, ಸ್ವಚ್ಛತೆಗೆ ಒತ್ತು ನೀಡಲಾಗುತ್ತದೆ. ಕರ್ನಾಟಕದಲ್ಲಿ ಅರಣ್ಯ ಇಲಾಖೆ ತುರ್ತು ಚಟುವಟಿಕೆಗಳಿಗೆ ವಾಹನ ನೀಡಲಾಗಿದೆ ಎಂದು ವಿಜಯರಂಜನ್ ಸಿಂಗ್ ತಿಳಿಸಿದರು.
ಕೊಡಗಿನ ಸೋಮವಾರಪೇಟೆ ಹಾಗೂ ಶನಿವಾರ ಸಂತೆ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಇಲಾಖೆ ಚಟುವಟಿಕೆಗಳಿಗೆ ವಾಹನ ಬಳಸಲಾಗುವುದು ಎಂದು ಸೋಬಾಲ್ ವ್ರಿಷ್ನಿ ತಿಳಿಸಿದರು.
ನಿಗಮದ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು