ಇತ್ತೀಚಿನ ಸುದ್ದಿ
ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ ಹುಚ್ಚಾಟ!
28/08/2026, 20:41
ಚಾಮರಾಜನಗರ(reporterkarnataka.com): ಆನೆಗಳ ಜೊತೆ ಸಾಹಸ ಮಾಡಲು ಹೋಗಿ ಪ್ರಾಣಾಪಾಯ ತಂದುಕೊಳ್ಳುವ ಸಾರ್ವಜನಿಕರ ಹುಚ್ಚಾಟ ಮುಂದುವರಿದಿದೆ. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಒಂಟಿ ಸಲಗದ ಜೊತೆ ಬೈಕ್ ಸವಾರರು ಫೋಟೋ ಹಾಗೂ ಸೆಲ್ಫಿ ತೆಗೆಯಲು ಮುಂದಾದ ಆತಂಕಕಾರಿ ಘಟನೆ ನಡೆದಿದೆ. ಆಸನೂರು ಮಾರ್ಗದಲ್ಲಿ ಆಹಾರ, ಕಬ್ಬು ಹಾಗೂ ತರಕಾರಿ ಲಾರಿಗಳನ್ನು ಹುಡುಕಿಕೊಂಡು ಕಾಡಿನಿಂದ ರಸ್ತೆಗೆ ಆನೆಗಳು ಬರುತ್ತವೆ. ಈ ವೇಳೆ ಎದುರಾದ ಒಂಟಿ ಸಲಗವನ್ನು ಕಂಡು ಹೆದರುವ ಬದಲು, ಸವಾರರು ಆನೆಯ ಮುಂಭಾಗದಲ್ಲೇ ಬೈಕ್ ನಿಲ್ಲಿಸಿ ಫೋಟೋ ತೆಗೆಯಲು ಯತ್ನಿಸಿ ಅಪಾಯವನ್ನು ತಂದೊಡ್ಡಿಕೊಂಡಿದ್ದಾರೆ .












