6:41 PM Tuesday11 - August 2026
ಬ್ರೇಕಿಂಗ್ ನ್ಯೂಸ್
Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;…

ಇತ್ತೀಚಿನ ಸುದ್ದಿ

ಸಂತ ರವಿದಾಸರ 650ನೇ ಜನ್ಮ ಜಯಂತಿಯ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ; ಸಂತ ರವಿದಾಸರ ಚಿಂತನೆಗಳು ಮಕ್ಕಳಿಗೆ ಮಾದರಿ : ರವಿ ಅಲೆವೂರಾಯ

11/08/2026, 16:44

ಮಂಗಳೂರು(reporterkarnataka.com): ಸಂತ ರವಿದಾಸರ 650ನೇ ಜನ್ಮ ಜಯಂತಿಯ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (KRMSS), ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬೈಕಂಪಾಡಿ (ಮುಸ್ಲಿಂ), ಅಂಗರಗುಂಡಿ ಕ್ಲಸ್ಟರ್‌ನ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ‘ಸಂತ ರವಿದಾಸರ ಚಿಂತನೆ’ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ನವ ಭಾರತ ರಾತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವರ್ಕಾಡಿ ರವಿ ಅಲೆವೂರಾಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ಜ್ಞಾನ ಪರಂಪರೆಯಲ್ಲಿ ಸಂತರ ಮತ್ತು ಮಹಾಪುರುಷರ ಜೀವನ ಚರಿತ್ರೆಗಳಿಗೆ ವಿಶೇಷ ಸ್ಥಾನವಿದೆ. ಅವರ ಜೀವನ ಹಾಗೂ ಚಿಂತನೆಗಳು ಇಂದಿನ ಮಕ್ಕಳಿಗೆ ಮಾದರಿಯಾಗಿದ್ದು, ಸಮಾಜದಲ್ಲಿ ಎಲ್ಲರೊಂದಿಗೆ ಸಮಾನತೆ ಮತ್ತು ಮಾನವೀಯತೆಯಿಂದ ಬದುಕುವ ಮಾರ್ಗವನ್ನು ತೋರಿಸುತ್ತವೆ ಎಂದು ಹೇಳಿದರು.

ಪಾಂಡೇಶ್ವರ ಶ್ರೀನಿವಾಸ ವಿಶ್ವವಿದ್ಯಾಲಯ ಕಾಲೇಜ್‌ ಅಧ್ಯಾಪಕಿ ಸ್ವಾತಿ ಕಿರಣ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತೀಯ ಸಂತ ಪರಂಪರೆಯ ಪ್ರಮುಖರಾದ ಕಬೀರದಾಸರು ಮತ್ತು ಸಂತ ರವಿದಾಸರ ಜೀವನ ಹಾಗೂ ಸಂದೇಶಗಳ ಕುರಿತು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ನಾರಾಯಣ ಗುರು ಹಾಗೂ ಕರ್ನಾಟಕದ ಸಂತ ಬಸವಣ್ಣನವರ ಸಾಮಾಜಿಕ ಮತ್ತು ಮಾನವೀಯ ಚಿಂತನೆಗಳನ್ನು ಪರಿಚಯಿಸಿ, ಅವರ ಜೀವನ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೆ.ಆರ್.ಎಸ್.ಎಸ್.ನ ಉಪಾಧ್ಯಕ್ಷರು ಹಾಗೂ ವಿ.ವಿ. ಕಾಲೇಜಿನ ಪ್ರಾಧ್ಯಾಪಕಿ ನಾಗರತ್ನ ರಾವ್ ಮಾತನಾಡಿ, ಭಾರತೀಯ ಸಂತ ಪರಂಪರೆಯಲ್ಲಿ ಸಂತ ರವಿದಾಸರು, ಕಬೀರದಾಸರು ಸೇರಿದಂತೆ ಹಲವು ಸಂತರು ಸಾರಿದ ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಕಂಪಾಡಿ (ಮುಸ್ಲಿಂ) ಮುಖ್ಯೋಪಾಧ್ಯಾಯಿನಿ ಚಂದ್ರಕಲಾ, ಶಿಕ್ಷಕಿ ಕುಸುಮ ಕೆ.ಆರ್., ಹಿಂದಿ ಶಿಕ್ಷಕಿ ಯಶೋಧ ಬಿ., ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಜಯ ಬೇಕಲ್, ಹಿಂದಿ ಶಿಕ್ಷಕಿ ಸವಿತಾ ಕೆ.ಎಸ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸಂತ ರವಿದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜ್ಯೋತಿ ಕುಮಾರಿ ಅವರು ಸಂತ ರವಿದಾಸರ ದೋಹಾಗಳನ್ನು ಹಾಡಿ, ಅವುಗಳ ಭಾವಾರ್ಥವನ್ನು ವಿವರಿಸಿದರು. ವಿದ್ಯಾರ್ಥಿನಿ ಕುಮಾರಿ ಪರಮಾನಂದ ಪುಂಡಲೀಕ ಕುಲಗೋಡ ಸ್ವಾಗತಿಸಿದರು. ಪ್ರಕಾಶ ಕುಂಡಲಿಕ ಕುಲಗೋಡ ವಂದಿಸಿದರು. ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು