ಇತ್ತೀಚಿನ ಸುದ್ದಿ
ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!!
28/07/2026, 19:33
ತಿರುವನಂತಪುರಂ(reporterkarnataka.com): ಮಕ್ಕಳಿಗೆ ದಾರಿ ದೀಪವಾಗಬೇಕಿದ್ದ ಶಿಕ್ಷಕಿಯರಿಬ್ಬರು ಮಾದಕ ಜಾಲದಲ್ಲಿ ತೊಡಗಿದ ಆಘಾತಕಾರಿ ಘಟನೆ ದಾರಿ ಕೇರಳದಲ್ಲಿ ನಡೆದಿದೆ.
ಕೊರಿಯರ್ ಸೇವೆಗಳ ಮೂಲಕ ಗ್ರಾಹಕರಿಗೆ ಮಾದಕವಸ್ತುಗಳನ್ನು ತಲುಪಿಸುವ ಮೊದಲು, ಖರೀದಿದಾರರಿಂದ ತಮ್ಮ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಸ್ವೀಕರಿಸುವ ಪ್ರಮುಖ ಮಧ್ಯವರ್ತಿಗಳಾಗಿ ಕಾವ್ಯಾ ಮತ್ತು ಕೀರ್ತನಾ ಕಾರ್ಯನಿರ್ವಹಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೆರಾಂಬ್ರಾ ಬ್ಲಾಕ್ ರಿಸೋರ್ಸ್ ಸೆಂಟರ್ ಎಂಬುದು ‘ಸಮಗ್ರ ಶಿಕ್ಷಾ ಕೇರಳ’ (SSK) ಅಡಿಯಲ್ಲಿ ಬರುವ ಉಪ-ಜಿಲ್ಲಾ ಮಟ್ಟದ ಸಾಂಸ್ಥಿಕ ವ್ಯವಸ್ಥೆಯಾಗಿದೆ.
ಮೊದಲು ಕೀರ್ತನಾಳನ್ನು ಬಂಧಿಸಲಾಯಿತು. ಆಕೆಯ ವಿಚಾರಣೆಯ ವೇಳೆ ಪೊಲೀಸರಿಗೆ ಕಾವ್ಯಳ ಬಗ್ಗೆ ಸುಳಿವು ಸಿಕ್ಕಿತು. ಇಬ್ಬರೂ ಮಾದಕವಸ್ತು ಖರೀದಿದಾರರಿಂದ ಹಣವನ್ನು ಸಂಗ್ರಹಿಸುತ್ತಿದ್ದರು ಮತ್ತು ಆ ಹಣವು ಅವರ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆಯಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕೀರ್ತನಾಳನ್ನು ಕಳೆದ ವಾರ ಬಂಧಿಸಲಾಗಿದ್ದರೆ, ಕಾವ್ಯಳನ್ನು ಜುಲೈ 27 ರಂದು ಬಂಧಿಸಲಾಯಿತು.
ತನಿಖೆಯ ಪ್ರಕಾರ, ಶಿಕ್ಷಕಿಯರ ಬ್ಯಾಂಕ್ ಖಾತೆಗಳಿಗೆ ಹಣ ತಲುಪಿದುದು ಖಚಿತವಾದ ನಂತರ, ಕೊರಿಯರ್ ಮೂಲಕ ಮಾದಕವಸ್ತುಗಳನ್ನು ಖರೀದಿದಾರರಿಗೆ ತಲುಪಿಸಲಾಗುತ್ತಿತ್ತು.
ಶಿಕ್ಷಕಿಯರ ಬ್ಯಾಂಕ್ ಖಾತೆಗಳ ಮೂಲಕ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆದಿರುವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಈಗ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲು ಯೋಜಿಸುತ್ತಿದ್ದಾರೆ. ಇವರು ಅತ್ಯಾಧುನಿಕ MDMA ವಿತರಣಾ ಜಾಲದಲ್ಲಿ ಪ್ರಮುಖ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.














