7:30 PM Sunday13 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಕಾರವಾರದ ಸಾಧ್ವಿಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ: ಒಡಿಶಾದ ಭುವನೇಶ್ವರದಲ್ಲಿ ನಡೆದ ಸ್ಪರ್ಧೆ

19/04/2026, 23:14

ಭುವನೇಶ್ವರ(reporterkarnataka.com): ಒಡಿಶಾದ ಭುವನೇಶ್ವರದಲ್ಲಿ ಕಳೆದ ರಾತ್ರಿ ನಡೆದ 61ನೇ ಆವೃತ್ತಿಯ ಪ್ರತಿಷ್ಠಿತ ‘ಫೆಮಿನಾ ಮಿಸ್ ಇಂಡಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ ಕಾರವಾರದ ಸಾಧ್ವಿ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸ್ಪರ್ಧಿಗಳನ್ನು ಹಿಂದಿಕ್ಕಿ ಸಾಧ್ವಿ ಅವರು ‘ಮಿಸ್ ಇಂಡಿಯಾ ವರ್ಲ್ಡ್ 2026’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಉದ್ಯಮಿಯಾಗಿ, ಮಾಡೆಲ್ ಆಗಿ ಸಾಧ್ವಿ ಪಯಣ ಸೌಂದರ್ಯದ ಜೊತೆಗೆ ಉದ್ಯಮ ರಂಗದಲ್ಲೂ ಗುರುತಿಸಿಕೊಂಡಿರುವ ಕಾರವಾರ ಶಾಸಕ ಸತೀಶ್ ಪುತ್ರಿ ಸಾಧ್ವಿ ಸೈಲ್ ಅವರ ಸಾಧನೆ ನಿಜಕ್ಕೂ ಅದ್ಭುತ. ಸೌಂದರ್ಯ ಲೋಕಕ್ಕೆ ಕಾಲಿಡುವ ಮುನ್ನವೇ ಸಾಧ್ವಿ ಅವರು ನಿರ್ಮಾಣ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕಂಪನಿಯೊಂದನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ‘ಕ್ಯಾಲಿಫೋರ್ನಿಯಾ ಬುರ್ರಿಟೋ’ ಅಂತಹ ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಇವರು ಮಿಂಚಿದ್ದಾರೆ.


ಸೋಲಿಗೆ ಹೆದರದ ಸಂಕಲ್ಪ ಕಿರೀಟ ಧರಿಸಿದ ನಂತರ ಮಾತನಾಡಿದ ಸಾಧ್ವಿ, ಈ ಕ್ಷಣವನ್ನು “ಅವಿಸ್ಮರಣೀಯ” ಎಂದು ಬಣ್ಣಿಸಿದರು. “ಇದು ಕೇವಲ ಆರಂಭವಷ್ಟೇ, ಮುಂದೆ ಸುದೀರ್ಘ ಪಯಣ ಬಾಕಿಯಿದೆ. ವೇದಿಕೆಯ ಮೇಲಿದ್ದ ಎಲ್ಲಾ ಸ್ಪರ್ಧಿಗಳೂ ವಿಜೇತರೇ. ನಮ್ಮ ನಡುವಿನ ಸ್ನೇಹ ಮತ್ತು ಪರಸ್ಪರ ಕಲಿಕೆ ಈ ಪ್ರಯಾಣದ ಅತ್ಯುತ್ತಮ ಭಾಗ” ಎಂದು ಅವರು ಭಾವನಾತ್ಮಕವಾಗಿ ನುಡಿದರು.
ವಿಶ್ವ ಸುಂದರಿ ವೇದಿಕೆಗೆ ಸಜ್ಜು ಮಹಾರಾಷ್ಟ್ರದ ರಾಜನಂದಿನಿ ಪವಾರ್ ಅವರು ಮೊದಲ ರನ್ನರ್ ಅಪ್ ಸ್ಥಾನ ಗಳಿಸಿ ಕಠಿಣ ಪೈಪೋಟಿ ನೀಡಿದರು. ಕಳೆದ ಬಾರಿಯ ವಿಜೇತೆ ನಿಖಿತಾ ಪೋರ್ವಾಲ್ ಅವರು ಸಾಧ್ವಿ ಅವರಿಗೆ ಕಿರೀಟ ತೊಡಿಸಿ ಶುಭ ಹಾರೈಸಿದರು.
ಮಹಾರಾಷ್ಟ್ರದ ರಾಜನಂದಿನಿ ಪವಾರ್ ಮೊದಲ ರನ್ನರ್ ಅಪ್ ಆಗಿ ಮತ್ತು ಜಮ್ಮು ಕಾಶ್ಮೀರದ ಡಾ. ಶ್ರೀ ಅದ್ವೈತ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಮಿಸ್ ಇಂಡಿಯಾ ವರ್ಲ್ಡ್ ಪಟ್ಟ ಗೆದ್ದಿರುವ ಸಾಧ್ವಿ ಅವರು 2027 ರಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು