9:56 PM Friday16 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ದಿಢೀರ್ ಆಗಿ ಎದುರಾದ ಕಾಡಾನೆ: ಸ್ಕೂಟರ್ ಪಲ್ಟಿ ಸವಾರನಿಗೆ ಗಾಯ

11/04/2026, 21:12

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕುಟ್ಟ ಸಮೀಪ ಕಾಯಿಮಾನಿ ಬಳಿ ರಸ್ತೆ ದಾಟುತ್ತಿದ್ದ ಕಾಡಾನೆಯನ್ನು ಕಂಡು ಭಯ ಭೀತಗೊಂಡ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾರೆ.
ಕಾಯಿಮಾನಿ ಕಾಫಿ ಮಿಲ್ ಸಮೀಪ ಘಟನೆ ನಡೆದಿದೆ.
ಪೂಜೆಕಲ್ಲ್ ನಿವಾಸಿ ಅರ್ಮುಗಮ್(65) ಗಾಯಗೊಂಡ ಸ್ಕೂಟರ್ ಸವಾರ.

ಅಲ್ಲಿಯೇ ಶ್ರೀಮಂಗಲ ಅರಣ್ಯ ಇಲಾಖೆಯ ಸಿಬ್ಬಂದಿ ಬೀಟ್ ‘ನಲ್ಲಿದ್ದವರಿಗೆ ವಿಷಯ ತಿಳಿದು, ಕುಟ್ಟ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.
ಶಾಸಕ ಪೊನ್ನಣ್ಣ ಆದೇಶದಂತೆ ಮುಖ್ಯ ರಸ್ತೆ ಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಬೀಟ್ ನಲ್ಲಿರುವಂತೆ ಸೂಚನೆ. ಸಾರ್ವಜನಿಕರಿಂದ ಕಾಡಾನೆ ಇರುವಿಕೆ ಬಗ್ಗೆ ಮಾಹಿತಿ ಬಂದ ತಕ್ಷಣ ನಿಗಾ ಇಡುವಂತೆ ಸೂಚಿಸಿದ ಹಿನ್ನಲೆ, ಮುಖ್ಯ ರಸ್ತೆ, ಕಾಡಾನೆ ಇರುವಿಕೆಯ ಸುಳಿವು ಇರುವೆಡೆ ಬೀಟ್ ಕೈಗೊಳ್ಳುವಂತೆ ಸೂಚನೆ.
ಈ ಹಿನ್ನಲೆ ಶ್ರೀಮಂಗಲ ವಲಯ ಅರಣ್ಯಧಿಕಾರಿ ಅರವಿಂದ್ ನೇತೃತ್ವದಲ್ಲಿ ಕುಟ್ಟ -ಕಾಯಿಮಾನಿ ಸುತ್ತಮುತ್ತ ಬೆಳ್ಳಿಗ್ಗೆ 6 ರಿಂದ ಸಂಜೆ 8 ರವರೆಗೆ ಅರಣ್ಯ ಸಿಬ್ಬಂದಿ ಬೀಟ್ ನಿಯೋಜಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು