11:13 AM Wednesday1 - April 2026
ಬ್ರೇಕಿಂಗ್ ನ್ಯೂಸ್
ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್…

ಇತ್ತೀಚಿನ ಸುದ್ದಿ

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಬಳ ಶಚೀಂದ್ರ ಹೆಗ್ಡೆ ಪತ್ನಿ ಅಚಲಾ ಹೆಗ್ಡೆ ನಿಧನ

01/04/2026, 11:13

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ, ಹೊನ್ನೇತ್ತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಬಳ ಶಚೀಂದ್ರ ಹೆಗ್ಡೆ ಅವರ ಪತ್ನಿ ಅಚಲಾ ಹೆಗ್ಡೆ (52) ಮಂಗಳವಾರ ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಶಾಲಾ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕೋಕೋ ಆಟಗಾರ್ತಿಯಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಅಚಲಾ ಅವರು ಕೊಡಚಾದ್ರಿ ಮಹಿಳಾ ಪತ್ತಿನ ಸಹಕಾರ ಸಂಘ, ಅನಘ ಮಹಿಳಾ ಸಹಕಾರ ಸಂಘದ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತ ಕ್ರಿಯಾಶೀಲರಾಗಿದ್ದರು.
ಅವರು ಪತಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ಸೌಮ್ಯ ಸ್ವಭಾವದ ಮಾತುಗಳಿಂದ ತಾಲೂಕಿನಲ್ಲಿ ಎಲ್ಲರೊಟ್ಟಿಗೂ ಉತ್ತಮ ಬಾಂಧವ್ಯ ಹೊಂದಿದ ಶಚಿಂದ್ರ ಹೆಗ್ಡೆ ಯವರಿಗೆ ಅನಿರೀಕ್ಷಿತವಾಗಿ ಎರಗಿರುವ ಈ ಅಘಾತಕ್ಕೆ ಡಾ.ಮಂಜುನಾಥ್ ಗೌಡ, ಶಾಸಕ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕ ಗಣ್ಯರು ಅವರ ಆಪ್ತರು, ಹಿತೈಷಿಗಳು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು