ಇತ್ತೀಚಿನ ಸುದ್ದಿ
ಭಾರೀ ಗಾಳಿ ಮಳೆ: ಕುಸಿದು ಬಿದ್ದ ಬೆಳ್ತಂಗಡಿ ಸಂತೆಕಟ್ಟೆ ಆಟೋ ನಿಲ್ದಾಣ
28/03/2026, 23:18
ಬೆಳ್ತಂಗಡಿ(reporterkarnataka.com): ಭಾರಿ ಗಾಳಿ ಮಳೆಗೆ ಬೆಳ್ತಂಗಡಿ ಸಂತೆಕಟ್ಟೆಯ ಆಟೋರಿಕ್ಷಾ ನಿಲ್ದಾಣ ಕುಸಿದು ಬಿದ್ದು ರಿಕ್ಷಾಗಳು ಜಖಂಗೊಂಡ ಘಟನೆ ನಡೆದಿದೆ.

ಶನಿವಾರ ಮಧ್ಯಾಹ್ನ 3.30ರ ನಂತರ ಏಕಾಏಕಿ ಬಾರಿ ಗಾಳಿ ಬೀಸಿದೆ. ಗಾಳಿಯ ರಭಸಕ್ಕೆ ಸಂತೆಕಟ್ಟೆ ಆಟೋರಿಕ್ಷಾ ನಿಲ್ದಾಣ ಸಂಪೂರ್ಣ ಕುಸಿದು ಬಿದ್ದಿದೆ. ನಿಲ್ದಾಣದ ಅಡಿಯಲ್ಲಿ ಈ ಸಂದರ್ಭದಲ್ಲಿ 5-6 ಆಟೋ ರಿಕ್ಷಾಗಳು ಸಿಲುಕಿಕೊಂಡಿದ್ದು ಒಂದು ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ಉಳಿದ ಆಟೋಗಳಿಗೆ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ. ಚಾಲಕರು ಅಪಾಯದಿಂದ ಪಾರಾಗಿದ್ದಾರೆ.
ಶಾಸಕ ಹರೀಶ್ ಪೂಂಜ ಅವರ ಪ್ರದೇಶಾಭಿವೃದ್ಧಿ ಯೋಜನೆಯಡಿ ಈ ನಿಲ್ದಾಣ ನಿರ್ಮಿಸಲಾಗಿತ್ತು.












