4:23 PM Monday10 - August 2026
ಬ್ರೇಕಿಂಗ್ ನ್ಯೂಸ್
ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ…

ಇತ್ತೀಚಿನ ಸುದ್ದಿ

ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ ಸುರಕ್ಷಾ ವ್ಯವಸ್ಥೆ ಬಿಡುಗಡೆ

13/02/2026, 11:37

ಮಂಗಳೂರು(reporterkarnataka.com): ಸ್ಪ್ಯಾಮ್ ಹಾವಳಿಯನ್ನು ಎದುರಿಸುವ ತನ್ನ ನಿರಂತರ ಪ್ರಯತ್ನದ ಭಾಗವಾಗಿ, ಏರ್‌ ಟೆಲ್ ತನ್ನ ವಿನೂತನ ‘ಫ್ರಾಡ್ ಅಲರ್ಟ್’ ಸೇವೆಯನ್ನು ಅನಾವರಣಗೊಳಿಸಿದೆ.
ಈ ವ್ಯವಸ್ಥೆಯು ಎಐ ಚಾಲಿತ ಅತ್ಯಾಧುನಿಕ ಸೌಲಭ್ಯವಾಗಿದ್ದು, ವೇಗವಾಗಿ ಹೆಚ್ಚಾಗುತ್ತಿರುವ ಒನ್-ಟೈಮ್-ಪಾಸ್‌ ವರ್ಡ್ (ಓಟಿಪಿ) ಸಂಬಂಧಿತ ಬ್ಯಾಂಕ್ ವಂಚನೆಗಳ ವಿರುದ್ಧ ಗ್ರಾಹಕರಿಗೆ ತಕ್ಷಣವೇ ರಕ್ಷಣೆಯನ್ನು ನೀಡುತ್ತದೆ.
ವಿತರಣೆ ಅಥವಾ ಡೆಲಿವರಿ ಕೆಲಸಗಳ ನೆಪದಲ್ಲಿ ವಂಚಕರು ಓಟಿಪಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಗ್ರಾಹಕರನ್ನು ನಂಬಿಸಿ ಅವರಿಂದ ಬ್ಯಾಂಕಿಂಗ್ ವ್ಯವಹಾರದ ಓಟಿಪಿಗಳನ್ನು ಪಡೆದು, ಅವರ ಖಾತೆಯಲ್ಲಿ ಇರುವ ಉಳಿತಾಯದ ಹಣವನ್ನು ದೋಚುತ್ತಿದ್ದಾರೆ.
ಏರ್‌ ಟೆಲ್‌ ನ ಹೊಸ ಎಐ ಚಾಲಿತ ವ್ಯವಸ್ಥೆಯು ಇಂತಹ ಅಪಾಯಕಾರಿ ಸನ್ನಿವೇಶಗಳನ್ನು ಗುರುತಿಸಿ ಗ್ರಾಹಕರನ್ನು ಎಚ್ಚರಿಸುತ್ತದೆ. ಅಪಾಯಕಾರಿ ಎನಿಸುವ ಕರೆ ಬಂದಾಗ ಬ್ಯಾಂಕ್ ಓಟಿಪಿ ಪತ್ತೆಯಾದಲ್ಲಿ, ಏರ್‌ಟೆಲ್ ತಕ್ಷಣವೇ ಮಧ್ಯಪ್ರವೇಶಿಸಿ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತದೆ. ಕರೆಯಲ್ಲಿರುವಾಗಲೇ ಬ್ಯಾಂಕಿಂಗ್ ವ್ಯವಹಾರದ ಓಟಿಪಿ ನೀಡುವ ಅಪಾಯದ ಬಗ್ಗೆ ಇದು ತಿಳಿಸುತ್ತದೆ. ಎಐ ಬುದ್ಧಿವಂತಿಕೆ ಮತ್ತು ಮನುಷ್ಯನ ವಿವೇಚನಾ ಶಕ್ತಿಯ ಈ ಅದ್ಭುತ ಸಂಯೋಜನೆಯು ಗ್ರಾಹಕರಿಗೆ ಯೋಚಿಸಲು ಮತ್ತು ಪರಿಶೀಲಿಸಲು ಸಮಯವನ್ನು ನೀಡುತ್ತದೆ, ಇದರಿಂದ ಅವರು ತಮ್ಮ ಸುರಕ್ಷತೆಯ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ.
ಈ ವ್ಯವಸ್ಥೆಯ ಬಗ್ಗೆ ಮಾತನಾಡಿದ ಏರ್‌ಟೆಲ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಶಾಶ್ವತ್ ಶರ್ಮಾ ಅವರು, “ನಾವು ಏರ್‌ ಟೆಲ್ ಅನ್ನು ಸುರಕ್ಷಿತ ನೆಟ್‌ವರ್ಕ್ ಮಾಡುವ ಗುರಿಯನ್ನು ಹೊಂದಿದ್ದೇವೆ. ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತಗೊಳಿಸುವಲ್ಲಿ ಓಟಿಪಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಅಪರಾಧ ಚಟುವಟಿಕೆಗಳಿಂದಾಗಿ ಅವುಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ, ಬ್ಯಾಂಕಿಂಗ್ ವಂಚನೆಗಳ ವಿರುದ್ಧ ರಕ್ಷಣೆಯನ್ನು ಹೆಚ್ಚಿಸಲು ಏರ್‌ ಟೆಲ್‌ ನೆಟ್‌ ವರ್ಕ್ ನಲ್ಲಿ ಮಹತ್ವದ ಸುಧಾರಣೆಯನ್ನು ಪರಿಚಯಿಸಲು ನಾವು ಸಂತೋಷ ಪಡುತ್ತೇವೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ನಮ್ಮ ಹೊಸ ಎಐ ಚಾಲಿತ ವ್ಯವಸ್ಥೆಯು ನೆಟ್‌ ವರ್ಕ್ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೈಜ ಸಮಯದ ವಂಚನೆಗಳನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ. ಈ ಹಾವಳಿಯನ್ನು ತಡೆಗಟ್ಟುವಲ್ಲಿ ಇದು ನಿಖರ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆ ಮಾಡಲಿದೆ ಎಂಬುದು ಪ್ರಯೋಗಗಳಿಂದ ಸಾಬೀತಾಗಿದೆ” ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ, ಏರ್‌ ಟೆಲ್ ಸ್ಪ್ಯಾಮ್ ಕರೆಗಳ ಎಚ್ಚರಿಕೆ (ಸ್ಪ್ಯಾಮ್ ಕಾಲ್ ವಾರ್ನಿಂಗ್) ಮತ್ತು ಹಾನಿಕಾರಕ ಲಿಂಕ್‌ ಗಳನ್ನು ನಿರ್ಬಂಧಿಸುವಂತಹ ಎಐ ತಂತ್ರಜ್ಞಾನಗಳನ್ನು ಜಾರಿಗೆ ತಂದಿದೆ. ನೆಟ್‌ ವರ್ಕ್‌ ನಲ್ಲಿ ವಂಚನೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರೂ, ವಂಚಕರು ವ್ಯಕ್ತಿಗಳ ಸೋಗು ಹಾಕುವ ಮೂಲಕ ಜನರ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಲೇ ಇದ್ದಾರೆ. ಮೊಬೈಲ್ ಬಳಕೆದಾರರನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಈ ಹೊಸ ವೈಶಿಷ್ಟ್ಯವು ಡಿಜಿಟಲ್ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.
ಈ ಸೌಲಭ್ಯವು ಈಗಾಗಲೇ ಹರಿಯಾಣದಲ್ಲಿ ಚಾಲ್ತಿಯಲ್ಲಿದ್ದು, ಮುಂದಿನ ಎರಡು ವಾರಗಳಲ್ಲಿ ಏರ್‌ ಟೆಲ್ ಇದನ್ನು ತನ್ನ 100% ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು