1:35 AM Monday6 - July 2026
ಬ್ರೇಕಿಂಗ್ ನ್ಯೂಸ್
ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.…

ಇತ್ತೀಚಿನ ಸುದ್ದಿ

ಆರಗಗೆ ಭಾರಿ ಮುಖಭಂಗ: ಪಲ್ಟಿ ಹೊಡೆದ ಗುಡ್ಡೇಕೊಪ್ಪ ಗ್ರಾಪಂ ಅವಿಶ್ವಾಸ ನಿರ್ಣಯ; ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ..!

06/11/2025, 22:56

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಶಾಸಕ ಆರಗ ಜ್ಞಾನೇಂದ್ರ ಅವರ ಊರು ಆದ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅವಿಶ್ವಾಸ ನಿರ್ಣಯ ಪಲ್ಟಿ ಹೊಡೆದಿದೆ. ಹಾಲಿ ಅಧ್ಯಕ್ಷ ಅಗಸಾಡಿ‌ ಶಾಮಣ್ಣ ವಿರುದ್ಧ ಶಾಸಕ ಆರಗ ಜ್ಞಾನೇಂದ್ರರೇ ರೂಪಿಸಿದ್ದ ಅವಿಶ್ವಾಸ ನಿರ್ಣಯ ಗುರುವಾರ ಮಂಡನೆಯಾಗಿದೆ. ಅಗಸಾಡಿ‌ ಶಾಮಣ್ಣನ ವಿರುದ್ಧ 6 ಮತ ಚಲಾವಣೆಯಾಗಿದ್ದು 4 ಸದಸ್ಯರು ಗೈರಾಗಿದ್ದಾರೆ. ಇದರಿಂದಾಗಿ ಅವಿಶ್ವಾಸ ನಿರ್ಣಯ ಪಲ್ಟಿ ಹೊಡೆದಿದೆ..
ರಾಜ್ಯದ ಮಾಜಿ‌ ಗೃಹಸಚಿವ ಆರಗ ಜ್ಞಾನೇಂದ್ರರವರು ಸ್ವಕ್ಷೇತ್ರ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಮೇಲೆ ಹಲವು ವರ್ಷಗಳಿಂದ ನಿಯಂತ್ರಣ ಸಾಧಿಸಿದ್ದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರ್ ಹಿಡಿಯುವವರು ಕೂಡ ಇರಲಿಲ್ಲ. ಅವಿಶ್ವಾಸ ನಿರ್ಣಯ ಮಂಡನೆ ತಮ್ಮ ಪರವಾಗಿ ನಡೆದೆ ನಡೆಯುತ್ತದೆ ಎಂಬ ನಂಬಿಕೆಯಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಸೇರಿದಂತೆ ಶಾಸಕರಿಗೆ ಮುಖಭಂಗವಾಗಿದೆ.
ಕಟ್ಟ ಬಿಜೆಪಿ ಅಭಿಮಾನಿ, ಆರಗ ಜ್ಞಾನೇಂದ್ರ ಅವರ ಶಿಷ್ಯರಾಗಿರುವ ಅಗಸಾಡಿ ಶಾಮಣ್ಣ ಬಿಜೆಪಿ ತಂತ್ರಗಾರಿಕೆಗೆ ತಿರುಮಂತ್ರ ರೂಪಿಸಿ ನಾಲ್ವರು ಸದಸ್ಯರು ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಗುಡ್ಡೇಕೊಪ್ಪದಲ್ಲಿ ಹಲವು ವರ್ಷಗಳಿಂದ ಹಿಡಿತ ಸಾಧಿಸಿದ್ದ ಜ್ಞಾನೇಂದ್ರರ ಅಸ್ಥಿತ್ವ ಅಲುಗಾಡುವಂತೆ ಮಾಡಿದ್ದಾರೆ.
ಜಯಪೂಜಾರಿ ಹಿರೇಸರ (ಉಪಾಧ್ಯಕ್ಷರು), ರಾಘವೇಂದ್ರ ಪವರ್, ಸೂರ್ಯಕಲ ರವಿ, ಉಮಚಂದ್ರನಯ್ಕ್, ಗುರುಮೂರ್ತಿ ಗೌಡ್ರು, ಮಮತಾ ಗೋವಿಂದಪ್ಪ ಆವಿಶ್ವಾಸ ಸಭೆಗೆ ಹಾಜರಾಗಿ ಮತ ಚಲಾಯಿಸಿದರು. ಅಧ್ಯಕ್ಷ ಅಗಸಾಡಿ ಶಾಮಪ್ಪ, ಸಂದೇಶ ಶೆಟ್ಟಿ ಜಯಪುರ, ನಾಗರತ್ನ ಯಲ್ಲಪ್ಪ, ಜಯಂತಿ ರಮೇಶ್ ಸಭೆಗೆ ಗೈರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು