3:06 PM Sunday21 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ಅಡಿಕೆಯೊಳಗಿದ್ದ ಸ್ಫೋಟಕ ಸಿಡಿದು ಮಹಿಳೆಗೆ ಗಾಯ: ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ ಏನು?

04/04/2026, 22:08

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಹಂದಿ ಶಿಕಾರಿ ಮಾಡಲು ಇಟ್ಟಿದ್ದ ಸಿಡಿಯುವ ವಸ್ತುವೊಂದು ಸಿಡಿದು ಮಹಿಳೆಯೊಬ್ಬರ ಕೈಯ ಐದು ಬೆರಳುಗಳು ಸಂಪೂರ್ಣ ಹಾನಿಗೊಂಡ ಘಟನೆ ನೆಂಟೂರು ಬಳಿ ನಡೆದಿದೆ.
ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಂಟೂರಿನ ಕಮಲಮ್ಮ (72) ಗಾಯಗೊಂಡ ಮಹಿಳೆ. ತೋಟದಲ್ಲಿ ಹಂದಿ ಶಿಕಾರಿ ಮಾಡಲು ಗೋಟು ಅಡಿಕೆ ಒಳಗೆ ಕಚ್ಚಾ ಬಾಂಬ್ ಇಡಲಾಗಿತ್ತು. ಅದನ್ನು ನಾಯಿ ಕಚ್ಚಿಕೊಂಡು ಮನೆಯ ಅಂಗಳಕ್ಕೆ ತಂದಿದೆ. ಅದನ್ನು ಮುಟ್ಟಿದ ಕಮಲಮ್ಮ ಅವರಿಗೆ ಅಡಿಕೆ ಸಿಡಿದಿದ್ದು ಕೈ ಸಂಪೂರ್ಣ ಸುಟ್ಟು ಗಾಯವಾಗಿದೆ.
ಊರಿನ ಗ್ರಾಮಸ್ಥರು ಬಾಂಬ್ ಸಿಡಿದು ಎಂದು ತಿಳಿಸಿದ್ದು ಆದರೆ ಕುಟುಂಬಸ್ಥರು ಅಡಿಕೆ ಸಿಡಿದು ಗಾಯವಾಗಿದೆ ಎನ್ನುತ್ತಿದ್ದಾರೆ. ಅಡಿಕೆ ಸಿಡಿಯುತ್ತಾ? ಅಡಿಕೆಯೊಳಗೆ ಏನಿತ್ತು? ಎಂಬ ಪ್ರೆಶ್ನೆ ಉದ್ಭವಾಗಿತ್ತು. ಈಗ ಪೊಲೀಸ್ ಮಾಹಿತಿಯಂತೆ ಗೋಟು ಅಡಿಕೆ ಒಳಗೆ ಕಚ್ಚಾ ಬಾಂಬ್ ಇಟ್ಟು ಹಂದಿ ಶಿಕಾರಿ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಅದರಿಂದ ಇಂತಹ ಅವಘಡ ಆಗಿದೆ ಎಂಬುದಾಗಿ ತಿಳಿಸಿದ್ದಾರೆ.
ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು