8:38 PM Thursday4 - June 2026
ಬ್ರೇಕಿಂಗ್ ನ್ಯೂಸ್
ನಿಜವಾಯ್ತು ಮಿಥನ್ ರೈ ಭವಿಷ್ಯವಾಣಿ!: ಕೊನೆಗೂ ಡಿಕೆಶಿ ಆದ್ರು ಸಿಎಂ!!; ಇದೀಗ ವೀಡಿಯೊ… ಸಾಮೂಹಿಕ ನಾಯಕತ್ವದಲ್ಲೇ ಮುಂದುವರಿಯಿರಿ: ಸಿಎಂ ಡಿಕೆಶಿಗೆ ಹೈಕಮಾಂಡ್‌ ಕಟ್ಟುನಿಟ್ಟಿನ ಸೂಚನೆ ಲೈವ್‌ ಬಂದು ಅಭಿಮಾನಿಗಳಿಗೆ ಬಹುಮುಖ್ಯ ಮಾಹಿತಿ ನೀಡಿದ ನಟ ದರ್ಶನ್‌ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ: ಎಲ್ಲ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ನೇಮಕ ಕೊಡಗು ಜಿಲ್ಲೆಯಲ್ಲಿ ಜುಲೈ 30ರವರೆಗೆ ಮೀನುಗಾರಿಕೆ ನಿಷೇಧ ಯು.ಟಿ. ಖಾದರ್: ಸ್ಪೀಕರ್ ಸ್ಥಾನದಿಂದ ಮತ್ತೆ ಸಕ್ರೀಯ ರಾಜಕೀಯಕ್ಕೆ; ಡಿಕೆಶಿ ಸಂಪುಟದಲ್ಲಿ ಸಚಿವ… ಡಿ.ಕೆ. ಶಿವಕುಮಾರ್ ರಾಜ್ಯಭಾರ ಶುರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ರಾಜೀನಾಮೆ: ನೂತನ ಪಕ್ಷ ಸ್ಥಾಪನೆ? ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ನಡೆ; ಬಿಜೆಪಿಗೆ ಶುರುವಾಯ್ತು ಢವ ಢವ

ಇತ್ತೀಚಿನ ಸುದ್ದಿ

ವಿಜ್ಞಾನ ಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿ ವೖಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಸಲು ಸಾಧ್ಯ: ಎಸ್. ಎನ್. ಸುಬ್ರಮಣ್ಯಂ

24/11/2024, 21:40

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ವಿದ್ಯಾರ್ಥಿಗಳಲ್ಲಿ ವೖಜ್ಞಾನಿಕ ಮನೋಭಾವ, ಮಾನವೀಯತೆ, ವೖಚಾರಿಕ ಮನೋಧರ್ಮ ಮತ್ತು ಸುಧಾರಣೆಯನ್ನು ತರಲು ವಿಜ್ಞಾನ ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ನಿವೃತ್ತ ಕಂದಾಯ ಅಧಿಕಾರಿ ಎಸ್. ಎನ್. ಸುಬ್ರಮಣ್ಯಂ ಹೇಳಿದರು.
ಶ್ರೀನಿವಾಸಪುರ ತಾಲೂಕಿನ ಯಲ್ಡೂರುಗ್ರಾಮದ ನ್ಯಾಷನಲ್ ಹೖಸ್ಕೂಲಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿಜ್ಞಾನ ವಿಷಯಗಳ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಾ, ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ವಿಜ್ಞಾನದ ಬಳಕೆಯಾಗುತ್ತಿದೆ.

ಮಕ್ಕಳಿಗೆ ಈಗನಿಂದಲೇ ವಿಜ್ಞಾನದ ಮೇಲೆ ಆಸಕ್ತಿ ಮೂಡಿಸುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜ್ಙಾನಾದ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ. ವಿ. ಮಲ್ಲಿಕಾರ್ಜುನರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ವಿಜ್ಞಾನ ಮತ್ತು ಅದರ ಉಪಯೋಗವನ್ನು ಅರಿತು ಜೀವನ ನಡೆಸಿದರೆ ಅದು ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.
ಶಾಲಾ ನಿರ್ವಹಣಾ ಸಮಿತಿಯ ಸದಸ್ಯರಾದ ಕೆ. ಟಿ. ಜಯಣ್ಣ, ಎನ್. ಹರಿಕುಮಾರ್, ರಮೇಶ್ ಬಾಬು, ಶಾಲಾ ಮುಖ್ಯ ಶಿಕ್ಷಕ ಮಂಜುನಾಥ ದೇವೇಗೌಡ, ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಪ್ರಕಾಶಯ್ಯ, ಕೆ. ಪಿ. ಕೃಷ್ಣಪ್ಪ, ನಿವೃತ್ತ ಶಿಕ್ಷಕರಾದ ಎನ್. ಹರಿಕುಮಾರ್, ಡಿ. ವಿ. ಸಿದ್ದಾರೆಡ್ಡಿ, ಸಿ ಆರ್. ಪಿ ಸುಜಾತ, ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಲ್. ಸುಬ್ರಮಣಿ, ಯಲ್ದೂರು ಹೋಬಳಿ ಕರವೇ ಪ್ರಧಾನ ಕಾರ್ಯದರ್ಶಿ ಎಲ್. ಮುರಳಿಮೋಹನ್, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ. ಕೆ. ಮುರಳಿ, ಸಮಾಜ ಸೇವಕ ಅಂಬರೀಶ್, ಬ್ರಿಲಿಯಂಟ್ ಪಬ್ಲಿಕ್ ಶಾಲೆಯ ಅಪ್ಸರ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು