3:30 PM Tuesday3 - November 2026
ಬ್ರೇಕಿಂಗ್ ನ್ಯೂಸ್
ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy… ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ… ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಆಗುಂಬೆ ಬಳಿ ಭೀಕರ ಕಾರು ಅಪಘಾತ: ವೈದ್ಯ ವಿದ್ಯಾರ್ಥಿ ದುರ್ಮರಣ; 4 ಮಂದಿಗೆ… ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು |… ಬಿಜೆಪಿ ಮರುಸೇರ್ಪಡೆಗೆ ಯತ್ನಾಳ್‌ ಕಠಿಣ ಷರತ್ತು: ವಿಜಯೇಂದ್ರ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ… ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಎಸ್‌ಐಟಿ ನೂತನ ಮುಖ್ಯಸ್ಥರಾಗಿ ಚೇತನ್… ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟ: ಅಸ್ಸಾಂ, ಬಂಗಾಳದಲ್ಲಿ ಪ್ರವಾಹದ ಎಚ್ಚರಿಕೆ

ಇತ್ತೀಚಿನ ಸುದ್ದಿ

ವಿಜಯೇಂದ್ರ ದಂಡಯಾತ್ರೆ ಆರಂಭ: ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಸ್.ಎಂ. ಕೃಷ್ಣ, ಬೊಮ್ಮಾಯಿ ಸಹಿತ ಸಾಲು ಸಾಲು ನಾಯಕರ ಭೇಟಿ

13/11/2023, 22:25

ಮೃದುಲಾ ನಾಯರ್ ಬೆಂಗಳೂರು

info.reporterkarnataka@gmail.com

ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ತನ್ನ ದಂಡಯಾತ್ರೆಯನ್ನು ಶುರು ಮಾಡಿ ಬಿಟ್ಟಿದ್ದಾರೆ. ರಾಜ್ಯದ ಹಿರಿಯ ನಾಯಕರನ್ನು ಸಾಲು ಸಾಲಾಗಿ ಅವರು ಭೇಟಿಯಾಗಿದ್ದಾರೆ.


ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಮಾಜಿ ಪ್ರಧಾನಿಯ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡಿದ್ದಾರೆ.
ಈ ವೇಳೆ ದೇವೇಗೌಡ ಅವರು ಪ್ರೀತಿಯಿಂದ ಮೈ ಸವರಿದ್ದಾರೆ.
ಶಾಲು ಹೊದೆಸಿ ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಇದು ನನ್ನ ರಾಜಕೀಯ ಜೀವನದ ಅವಿಸ್ಮರಣಿಯ ಕ್ಷಣವಾಗಿಸಿತು. ಈ ಹೊತ್ತಿಗೂ ಸ್ಫೂರ್ತಿಯ ಚಿಲುಮೆ ಯಾಗಿರುವ ಅವರ ‘ಹೋರಾಟದ ಛಲ – ಆತ್ಮಸ್ಥೈರ್ಯದ ಬಲ’ ನನ್ನಂಥವರಿಗೆ ಸದಾ ಪ್ರೇರಣಾ ಶಕ್ತಿಯಾಗಿದೆ ಎಂದು ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದಾರೆ. ಶಾಸಕರಾದ ಎಂ.ಕೃಷ್ಣಪ್ಪ, ಸಿ.ಕೆ.ರಾಮಮೂರ್ತಿ, ಸಂಸದ ಪ್ರಜ್ವಲ್ ರೇವಣ್ಣ ಅವರು, ಉಪಸ್ಥಿತರಿದ್ದರು.
ವಿಜಯೇಂದ್ರ ಅವರು ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರನ್ನು ಕೂಡ ಭೇಟಿಯಾಗಿದ್ದಾರೆ. ಎಸ್.ಎಂ. ಕೃಷ್ಣ ಅವರ ಮನೆಗೆ ತೆರಳಿದ ವಿಜಯೇಂದ್ರ ಅವರು ಅಲ್ಲಿಯೂ ಕೃಷ್ಣ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಕೆಲವು ಸ್ವಪಕ್ಷೀಯ ನಾಯಕರ ಅಸಮಾಧಾನದ ನಡುವೆ ವಿಜಯೇಂದ್ರ ಅವರು ದಿಗ್ವಿಜಯ ಯಾತ್ರೆ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು