4:53 AM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಉಕ್ರೇನ್‌ನಿಂದ ವಾಪಸ್ಸಾದ ಕೋಲಾರದ ಮೋನಿಷಾ ಪ್ರಿಯಾ: ಕೇಂದ್ರ ಸರಕಾರ, ರಾಯಭಾರ ಕಚೇರಿ ಸಿಬ್ಬಂದಿಗೆ ಧನ್ಯವಾದ 

07/03/2022, 21:55

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೋಲಾರ ಎಪಿಎಂಸಿ ನೌಕರ ಮುನಿರಾಜು ಅವರ ಸಹೋದರ ರಾಜ್ ಕುಮಾರ್ , ಸುಕನ್ಯಾ ದಂಪತಿ ಪುತ್ರಿ ಮೋನಿಷಾಪ್ರಿಯ ಕಳೆದ ರಾತ್ರಿ ಯುದ್ಧಪೀಡಿತ ಉಕ್ರೇನ್‌ನಿಂದ ವಾಪಸ್ಸಾಗಿದ್ದು , ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ನೀಡಿದ ನೆರವಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು , ಬಂಕರ್‌ಗಳು , ಮೆಟ್ರೋ ನಿಲ್ದಾಣಗಳಲ್ಲಿ ನಾವು ತಂಗಿದ್ದೆವು , ಅತ್ಯಂತ ಕಷ್ಟದ ದಿನಗಳನ್ನು ನೋಡಬೇಕಾಯಿತು. ನಾವಿದ್ದ ಹಾಸ್ಟೆಲ್‌ಗೂ ಭಾರತದ ಧ್ವಜ ಕಟ್ಟಿದ್ದು , ಧ್ವಜ ಹಿಡಿದೇ ಗಡಿ ತಲುಪಿದ್ದು ನಮಗೆ ನೆರವಾಯಿತು ಎಂದರು . ಉಕ್ರೇನ್‌ನೊಳಗೆ ನಮ್ಮ ಭಾರತದ ವಿಮಾನಗಳು ಬರುವ ಹಾಗಿರಲಿಲ್ಲ. ಯುದ್ಧ ಭೀತಿ ಹಾಗೂ ವಿಮಾನ ನಿಲ್ದಾಣಗಳು ಧ್ವಂಸಗೊಂಡಿದ್ದವು.

ಕಷ್ಟಪಟ್ಟು ಗಡಿ ತಲುಪುವಂತೆ ನಮ್ಮ ರಾಯಭಾರ ಕಚೇರಿ ನಿರ್ದೇಶನ ನೀಡಿತ್ತು . ರೈಲುಗಳಲ್ಲಿ ಬರುವಾಗಲೂ ಅಲ್ಲಲ್ಲಿ ಬಾಂಬ್ ಸದ್ದು ಕೇಳಿಸುತ್ತಿದ್ದರಿಂದ ಪ್ರಾರ್ಥನೆ ಮಾಡಿಕೊಂಡು ಬಂದು ಗಡಿ ತಲುಪಿದೆವು ಎಂದರು .

ಗಡಿಯಿಂದ ನಮ್ಮ ಭಾರತೀಯ ರಾಯಭಾರ ಸಿಬ್ಬಂದಿ ನಮ್ಮನ್ನು ಅತ್ಯಂತ ಉತ್ತಮ ರೀತಿಯಲ್ಲಿ ನೋಡಿಕೊಂಡರು ನಾವಿಂದು ಬದುಕಿ ಬಂದಿದ್ದೇವೆ ಎಂಬುದೇ ಅತಿಹೆಚ್ಚ ಸಂತಸ , ಭಾರತ ಸರ್ಕಾರ , ರಾಜಭಾರ ಕಚೇರಿಗೆ ನಾವು ಋಣಿಯಾಗಿದ್ದೇವೆ ಎಂದು ತಿಳಿಸಿದರು . 

ಕೋಲಾರದ ಎಪಿಎಂಸಿ ನೌಕರ ಮುನಿರಾಜು ಅವರ ಸಹೋದರ ರಾಜ್‌ಕುಮಾರ್‌ , ಸುಕನ್ಯಾ ದಂಪತಿ ಪುತ್ರಿ ಮೋನಿಷಾಪ್ರಿಯ ಕಳೆದ ರಾತ್ರಿ ಯುದ್ಧಪೀಡಿತ ಉಕ್ರೇನ್‌ನಿಂದ ವಾಪಸ್ಸಾಗಿದ್ದು , ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ನೀಡಿದ ನೆರವಿಗೆ ಧನ್ಯವಾದ ಸಲ್ಲಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು