9:10 PM Wednesday15 - July 2026
ಬ್ರೇಕಿಂಗ್ ನ್ಯೂಸ್
ಧರ್ಮಸ್ಥಳ ಪ್ರಕರಣ: ಎಸ್ ಐಟಿಯಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:…

ಇತ್ತೀಚಿನ ಸುದ್ದಿ

Udupi | ಮಲ್ಪೆ ಕಡಲತೀರದಲ್ಲಿ ಬಲೆಗೆ ಸಿಲುಕಿದ್ದ ಆಮೆ ರಕ್ಷಣೆ

15/07/2026, 21:02

ಉಡುಪಿ(reporterkarnataka.com): ಮಲ್ಪೆ ಕಡಲತೀರದಲ್ಲಿ ಮೀನುಗಾರಿಕಾ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಪರೂಪದ ಸಮುದ್ರ ಆಮೆಯನ್ನು ಸ್ಥಳೀಯ ಮೀನುಗಾರರೊಬ್ಬರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.


ಮಲ್ಪೆಯ ಹನುಮಾನ್ ವಿಠೋಭ ಭಜನಾ ಮಂದಿರದ ಮುಂಭಾಗದ ಕಡಲತೀರದಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಬಲೆಗೆ ಸಿಕ್ಕಿಕೊಂಡಿದ್ದ ಆಮೆಯನ್ನು ಕನ್ನಿ ಮೀನುಗಾರ ಸಂಘದ ಸಕ್ರಿಯ ಸದಸ್ಯ ಹಾಗೂ ಸ್ಥಳೀಯ ನಿವಾಸಿ ಜ್ಞಾನೇಶ್ವರ್ ಕೋಟ್ಯಾನ್ ಗಮನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಅವರು ಆಮೆಯನ್ನು ಸುರಕ್ಷಿತವಾಗಿ ದಡಕ್ಕೆ ತಂದು, ಅದರ ದೇಹಕ್ಕೆ ಸುತ್ತಿಕೊಂಡಿದ್ದ ಮೀನುಗಾರಿಕಾ ಬಲೆಗಳನ್ನು ಜಾಗರೂಕತೆಯಿಂದ ಕತ್ತರಿಸಿ ತೆರವುಗೊಳಿಸಿದರು.
ಬಳಿಕ ಆಮೆಗೆ ಯಾವುದೇ ಹಾನಿಯಾಗದಂತೆ ಮತ್ತೆ ಸಮುದ್ರಕ್ಕೆ ಬಿಟ್ಟರು. ಅವರ ಸಮಯಪ್ರಜ್ಞೆ ಮತ್ತು ಪರಿಸರ ಕಾಳಜಿಯಿಂದ ಅಪರೂಪದ ಸಮುದ್ರ ಜೀವಿಯೊಂದು ಹೊಸ ಜೀವ ಪಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು