6:14 PM Wednesday14 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ಉಡುಪಿ: 3.70 ಮೌಲ್ಯದ ಕಳ್ಳತನ ಪ್ರಕರಣ ಭೇದಿಸಿದ ಉಡುಪಿ ಪೊಲೀಸರು; ಸೊತ್ತುಗಳು ವಶ, ಕಳ್ಳ ಅರೆಸ್ಟ್

23/11/2021, 18:12

ಉಡುಪಿ(reporterkarnataka.com):
ಬಾಬು ಆಚಾರ್ಯ ಅವರ ಮನೆಯಲ್ಲಿ ನ.17ರಂದು ನಡೆದ ಕಳ್ಳತನವನ್ನು ಉಡುಪಿ ಪೊಲೀಸರು ಭೇದಿಸಿದ್ದು, ಸುಕೇಶ್ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳನ ಬೆರಳುಮುದ್ರೆ ಪರಿಶೀಲಿಸಿದಾಗ ಉಡುಪಿ ನಗರ ಠಾಣಾ ವ್ಯಾಪ್ತಿಯ ಸುಕೇಶ್  ನಾಯ್ಕ ಎಂಬವನ ಬೆರಳು ಮುದ್ರೆಗೆ ಹೊಂದಾಣಿಕೆ ಆಗಿರುವ ಬಗ್ಗೆ ಮಾಹಿತಿ ಲಭಿಸಿದ್ದು ಕಾರ್ಯಪ್ರವೃತ್ತರಾದ ಪೊಲೀಸ್  ಸಿಬ್ಬಂದಿಯವರು ಆರೋಪಿ ಸುಕೇಶ್ ನಾಯ್ಕ್ ನ್ನು ನ.21ರಂದು ಬೆಳ್ಳಂಪಳ್ಳಿ  ಕ್ವಾಲಿಟಿ ವೈನ್ ಶಾಪ್  ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.

ಆರೋಪಿಯಿಂದ  ಗುಂಡಿಬೈಲು ಪಂಚಧೂಮಾವತಿ ದೈವಸ್ದಾನದ ಬಳಿ ಶ್ರೀಕರ ಕಾಮತ್ ಎಂಬವರ ಪೊದರು ಜಾಗದಲ್ಲಿ ಮಣ್ಣಿನ ಅಡಿಯಲ್ಲಿ 3,60,000/- ಮೌಲ್ಯದ ಚಿನ್ನಾಭರಣಗಳನ್ನು  ಹೂತಿಟಿದ್ದ ಎನ್ನಲಾಗಿದೆ. ಈತನ ವಿರುದ್ದ ಹಿರಿಯಡ್ಕ, ಮಣಿಪಾಲ ಉಡುಪಿ ನಗರ ಠಾಣೆ, ಬ್ರಹ್ಮಾವರ ಠಾಣೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು , ಜೈಲಿನಿಂದ ಒಂದು ತಿಂಗಳ ಹಿಂದೆ ಬಿಡುಗಡೆ ಗೊಂಡಿದ್ದ.

ಘಟನೆ ವಿವರ: ನ.17ರಂದು  ಯಾರೋ ಕಳ್ಳರು ಹಳೆ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ, ಕಪಾಟಿನಲ್ಲಿದ್ದ ಬೀಗದಿಂದ ಲಾಕರ್‌ ತೆಗೆದು ಅದರಲ್ಲಿದ್ದ ಒಟ್ಟು 90 ಗ್ರಾಂ ತೂಕದ ರೂ. 3,60,000/- ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ಸಾಮಾಗ್ರಿಗಳು ಒಟ್ಟು ರೂ. 10,000/- ಮೌಲ್ಯದ ಹಾಗೂ ದೇವರ ಡಬ್ಬದಲ್ಲಿದ್ದ ಅಂದಾಜು ರೂ. 400/- ಒಟ್ಟು ಮೌಲ್ಯ ರೂ. 3,70,400/- ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದರ ಬಗ್ಗೆ ಬಾಬು ಆಚಾರ್ಯರವರು  ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.   

ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಎನ್‌. ವಿಷ್ಣುವರ್ಧನ್ ಆದೇಶದಂತೆ, ಕುಮಾರಚಂದ್ರ (ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು),ಡಿವೈಎಫ್ ಎಸ್ ಪಿ ಸುಧಾಕರ ಸದಾನಂದ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ., ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್‌. ಆರ್‌,  ಪ್ರಸಾದ್‌ ಕುಮಾರ್‌, , ಸಿಬ್ಬಂದಿಯವರಾದ, ರಾಜೇಶ್ ,ಸತೀಶ , ಜೀವನ್ ಕುಮಾರ್ , ಲೋಕೇಶ್, ಸಂತೋಷ ರಾಥೋಡ , ಕಾರ್ತಿಕ್ , ಬಾಲಕೃಷ್ಣ, ಶಿವಕುಮಾರ್ , ಚೇತನ್‌, ಹೇಮಂತ್‌, ರವರು ಪಾಲ್ಗೋಂಡಿರುತ್ತಾರೆ. ಆರೋಪಿ ಆರೋಪಿ ಸುಕೇಶ್ ನಾಯ್ಕ ಯನ್ನು
ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿಇರುತ್ತಾನೆ.

ಇತ್ತೀಚಿನ ಸುದ್ದಿ

ಜಾಹೀರಾತು