ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ-ಹೊರನಾಡು–ಶೃಂಗೇರಿ ರಸ್ತೆಯಲ್ಲಿ ಟ್ಯಾಕ್ಟರ್ ಪಲ್ಟಿ: ಅರ್ಧ ಗಂಟೆ ಸಂಚಾರ ಸ್ಥಗಿತ
14/04/2026, 14:06
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಬಳಿ ಟ್ಯಾಕ್ಟರ್ ಪಲ್ಟಿಯಾದ ಘಟನೆ ನಡೆದಿದೆ.
ಕಳಸಾದಿಂದ ಮೂಡಿಗೆರೆಗೆ ಸಿಮೆಂಟ್ ಶೀಟ್ಗಳನ್ನು ಹೊತ್ತೊಯ್ಯುತ್ತಿದ್ದ ಟ್ಯಾಕ್ಟರ್, ದೇವನಗುಲ್ ಸಮೀಪದಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ.
ಘಟನೆಯಲ್ಲಿ ಚಾಲಕನು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಟ್ಯಾಕ್ಟರ್ ಹೆದ್ದಾರಿಗೆ ಪಲ್ಟಿಯಾದ ಪರಿಣಾಮವಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಕೊಟ್ಟಿಗೆಹಾರದಿಂದ ಹೊರನಾಡು–ಶೃಂಗೇರಿ ಸಂಪರ್ಕ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ, ಟ್ರಾಫಿಕ್ ಜಾಮ್ ಉಂಟಾಯಿತು.

ನಂತರ ಸ್ಥಳೀಯರ ಸಹಾಯದಿಂದ ಟ್ಯಾಕ್ಟರ್ ತೆರವುಗೊಳಿಸಲಾಗಿ ಸಂಚಾರ ಪುನಃ ಆರಂಭಗೊಂಡಿತು.













