ಇತ್ತೀಚಿನ ಸುದ್ದಿ
ಕತ್ತರಿ ಬಾಲದ ಕಾಜಣ, ಮಾಡುತ್ತದೆ ಕೀಟಗಳ ನಿಯಂತ್ರಣ ! ಪರಿಸರ ಸಮತೋಲನದ ಕಾವಲುಗಾರ ಈ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು ?
15/08/2026, 16:33
ಕಾಜಣ (drongo)
ಕಾಜಣ ಹೆಚ್ಚು ಆಕರ್ಷಕ ವಲ್ಲದ ಗಾಢ ಕಪ್ಪು ಬಣ್ಣದ ಹಕ್ಕಿ. ಗಾತ್ರದಲ್ಲಿ ಕಾಗೆಯನ್ನು ಹೋಲುತ್ತದೆ. ಕಾಜಣಗಳನ್ನು ಕವಲೋಡೆದ, ಕತ್ತರಿ ಆಕಾರದ ಬಾಲದಿಂದ ಸುಲಭವಾಗಿ ಗುರುತಿಸಬಹುದು. ಇವುಗಳು ಸಾಮಾನ್ಯವಾಗಿ ಕೃಷಿ ಪ್ರದೇಶಗಳಲ್ಲಿ, ಸಣ್ಣ ಕಾಡು ಪ್ರದೇಶಗಳಲ್ಲಿ ಮರದ ಕೊಂಬೆಗಳಲ್ಲಿ ಜೋಡಿಯಾಗಿ, ನೇರವಾಗಿ ಕುಳಿತು ಕೊಂಡಿರುತ್ತದೆ. ಕೆಲವು ಪ್ರಭೇದದ ಕಾಜಣಗಳಲ್ಲಿ ಕವಲೋಡೆದ ಬಾಲಗಳಲ್ಲಿ ಉದ್ದವಾದ ಅಲಂಕಾರಿಕ ಜಾಲವನ್ನು ಕಾಣಬಹುದು.(Rocket tailed dronogo)ಭೀಮರಾಜ ಪಕ್ಷಿ )ಕಾಜಣಗಳು ಹೆಚ್ಚಾಗಿ ಹರಾಡುತ್ತಿರುವ ಕೀಟಗಳನ್ನು ಹಿಡಿದು ತಿನ್ನುತ್ತದೆ. ಈ ಪಕ್ಷಿಗಳು ಧೈರ್ಯ ಶಾಲಿಗಳು ಹಾಗೂ ಅಕ್ರಮಣಕಾರಿಯಾಗಿದ್ದು, ತನಗಿಂತ ದೊಡ್ಡ ಗಾತ್ರದ ಪಕ್ಷಿಗಳನ್ನು ಬೆನ್ನಟ್ಟಿ ತನ್ನ ವಾಸ ಸ್ಥಾನದ ರಕ್ಷಣೆ ಮಾಡುತ್ತದೆ.




ಇವುಗಳು ಸಸ್ತಾನಿಗಳ ಹಾಗೂ ಇತರ ಪಕ್ಷಿಗಳ ಕರೆಗಳನ್ನು ಅನುಕರಿಸಿ ಎಚ್ಚರಿಕೆಯ ಸಂದೇಶಗಳನ್ನು ಸುಚಿಸುತ್ತದೆ. ಗಂಡು ಹೆಣ್ಣು ಪಕ್ಷಿಗಳು ಒಂದೇ ತೆರನಾಗಿದ್ದು, ಎತ್ತರವಾದ ಮರಗಳ,ಕವಲೋಡೆದ ಕೊಂಬೆಗಳ ಸಂಧಿಯಲ್ಲಿ ತಟ್ಟೆಯಾಕಾರದ ಗೂಡನ್ನು ಕಟ್ಟಿ 2 ರಿಂದ 4 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಬೆಳೆಗಳನ್ನು ನಾಶ ಮಾಡುವ ಕೀಟಗಳ ಸಂತತಿಯನ್ನು ಇವುಗಳು ನಿಯಂತ್ರಿಸುವುದರಿಂದ, ಪರಿಸರದ ಸಮಾತೋಲನತೆಯನ್ನು ಕಾಯ್ದು ಕೊಳ್ಳುವಲ್ಲಿ ಕಾಜಣಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.












