4:56 AM Monday20 - April 2026
ಬ್ರೇಕಿಂಗ್ ನ್ಯೂಸ್
ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ

ಇತ್ತೀಚಿನ ಸುದ್ದಿ

ಸುರತ್ಕಲ್ ಬೃಹತ್ ಮಾರುಕಟ್ಟೆ ಕಾಮಗಾರಿ ಪುನರಾರಂಭ: ಶಾಸಕ ಡಾ. ಭರತ್ ಶೆಟ್ಟಿ

15/07/2024, 21:17

ಸುರತ್ಕಲ್(reporterkarnataka.com): ಸುರತ್ಕಲ್ ನಲ್ಲಿ ಬಹುಕೋಟಿ ವೆಚ್ಚದ ಮಾರುಕಟ್ಟೆ ನಿರ್ಮಾಣ ಕಾಮಗಾರಿಯು ಕೊರೋನಾ ಬಳಿಕ ಮಾರುಕಟ್ಟೆಯಲ್ಲಿ ಸರಕು ದರ ಏರಿಕೆ ಹಾಗೂ ಜಿಎಸ್‌ಟಿಯನ್ನು ಟೆಂಡರ್ ನಲ್ಲಿ ತೋರಿಸದ ಹಿನ್ನಲೆಯಲ್ಲಿ ಕಾಮಗಾರಿ ಹಿನ್ನಡೆ ಕಂಡಿದ್ದು
ಸತತ ಪ್ರಯತ್ನದ ಬಳಿಕ ಇದೀಗ 64 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಡಾ. ಭರತ್ ಶೆಟ್ಟಿ ವೈ ತಿಳಿಸಿದ್ದಾರೆ.
ಕಳೆದ ಬಾರಿ ಅಂದಾಜು 16 ಕೋಟಿಯ ಕಾಮಗಾರಿ ನಡೆದಿತ್ತು.
ಬಳಿಕ ಗುತ್ತಿಗೆದಾರರು ಎಸ್ ಆರ್ ದರ ಹಾಗೂ ಜಿಎಸ್ ಟಿ ಯನ್ನು ಟೆಂಡರ್ ನಲ್ಲಿ ತೋರಿಸದ ಕಾರಣ ಭಾರಿ ನಷ್ಟವಾಗುತ್ತದೆ ಎಂದು ಕಾಮಗಾರಿ ನಡೆಸಲು ಹಿಂದೆ ಸರಿದಿದ್ದರು.
ಇದೀಗ ತಾನು ಸತತವಾಗಿ ಈ ಹಿಂದಿನ ಬಿಜೆಪಿ ಸರಕಾರವಿದ್ದಾಗ ಹಣಕಾಸು ಇಲಾಖೆ , ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದ ಮೇರೆಗೆ ಟೆಂಡರ್ ನಡೆಸುವ ಪ್ರಾಥಮಿಕ ಹೆಜ್ಜೆ ಇರಿಸಲಾಗಿತ್ತು.
ಬದಲಾದ ಸರಕಾರದಲ್ಲಿ ಈಗಿನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಲ್ಲಿ ಖುದ್ದಾಗಿ ಭೇಟಿ ನೀಡಿ ಮಾಡಿದ ಮನವಿಗೆ ಸ್ಪಂದಿಸಿದ್ದು,ಆರ್ಥಿಕ ಇಲಾಖೆಯು ಕೂಡ ಅನುಮೋದನೆ ನೀಡಿದ್ದು ಟೆಂಡರ್ ನೀಡಲಾಗಿದೆ. ಸರಕಾರವು ವಿಳಂಬ ಮಾಡದೆ
ಗುತ್ತಿಗೆದಾರರಿಗೆ ಅನುಮತಿ ಪತ್ರ ನೀಡಿದ ತಕ್ಷಣ ಕಾಮಗಾರಿ ಆರಂಭವಾಗಲಿದೆ.ಎಂದು ಭರತ್ ಶೆಟ್ಟಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು