8:21 AM Sunday10 - May 2026
ಬ್ರೇಕಿಂಗ್ ನ್ಯೂಸ್
ನಂಜನಗೂಡು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಚಿಕ್ಕರಂಗನಾಯಕ ಚಾಲನೆ ಚಿಕ್ಕಮಗಳೂರು | ಕಾಡಿನೊಳಗೂ ಕಳ್ಳರ ಕೈಚಳಕ: ಮುತ್ತೋಡಿ ಅರಣ್ಯ ವಲಯದಲ್ಲಿದ್ದ ಕ್ಯಾಮೆರಾ ಹೊತ್ತೊಯ್ದ… ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ

ಇತ್ತೀಚಿನ ಸುದ್ದಿ

ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

02/08/2025, 21:38

ಚಿಕ್ಕಮಗಳೂರು(reporterkarnataka.com): ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಎನ್.ಐ.ಎ. ಅಧಿಕಾರಿಗಳು ಕಾಫಿನಾಡ ಕಳಸದಲ್ಲೂ ಮಾಹಿತಿ ಕಲೆ ಹಾಕಿದ್ದಾರೆ.
ಕಳಸ ತಾಲೂಕಿನ ಕೋಟೆಹೊಳೆ ಹಾಗೂ ರುದ್ರಪಾದಕ್ಕೆ ಭೇಟಿ ನೀಡಿದ್ದ ಎನ್.ಐ.ಎ. ಅಧಿಕಾರಿಗಳು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರು ಆರೋಪಿತರ ಮನೆಗೂ ಭೇಟಿ ನೀಡಿದ್ದಾರೆ. ಮರ್ಡರ್ ಪ್ರಕರಣ ಸಂಬಂಧ ಕಳಸ ಸಮೀಪದ ಹೋಂ ಸ್ಟೇ ಒಂದರಲ್ಲಿ ಆರೋಪಿತರೆಲ್ಲರೂ ವಾಸ್ತವ್ಯದ ಅನುಮಾನದ ಹಿನ್ನೆಲೆ ಅಧಿಕಾರಿಗಳು ಭೇಟಿ, ಕೆಲವೊಂದು ಮಾಹಿತಿ ಕಲೆ ಹಾಕಿದ್ದಾರೆ. ಕೊಲೆ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದ ಎಂಟು ಆರೋಪಿಗಳ ಪೈಕಿ ಇಬ್ಬರು ಯುವಕರು ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದವರಾಗಿದ್ದರು. ಕಳಸ ಪಟ್ಟಣದ ರಂಜಿತ್ ಹಾಗೂ ಕೋಟೆಹೊಳೆಯ ನಾಗರಾಜ್ ಎಂಬ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಇಬ್ಬರು ಯುವಕರು ಕಳಸ ಪಟ್ಟಣದಲ್ಲಿ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದರು. ಕುಡಿತದ ಚಟಕ್ಕೆ ಒಳಗಾಗಿದ್ದ ಈ ಇಬ್ಬರು ನಿತ್ಯ ಕುಡಿಯುತ್ತಿದ್ದರು. ಸುಹಾಸ್ ಶೆಟ್ಟಿ ಕೊಲೆಗೂ ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮಂಗಳೂರು ಸೇರಿಕೊಂಡಿದ್ದರು ಎನ್ನಲಾಗಿತ್ತು.‌ ಕಾಫಿನಾಡ ಈ ಇಬ್ಬರು ಯುವಕರು ಕೊಲೆ ಪ್ರಕರಣದ ಎ2 ಆರೋಪಿಯಾಗಿದ್ದ ನಿಯಾಜ್ ಸ್ನೇಹಿತರಾಗಿದ್ದರು ಎನ್ನಲಾಗಿತ್ತು. ನಿಯಾಜ್ ನ ಸಂಬಂಧಿಕರು ಕಳಸದಲ್ಲಿರುವುದರಿಂದ ಆಗಾಗ ನಿಯಾಜ್ ಕಳಸಕ್ಕೆ ಬರ್ತಿದ್ದ. ಹಾಗಾಗಿ, ಕಳೆದ ಮೂರು ವರ್ಷಗಳಿಂದ ನಿಯಾಜ್, ರಂಜಿತ್ ಹಾಗೂ ನಾಗರಾಜ್ ಸ್ನೇಹಿತರಾಗಿದ್ದರು ಎಂದು ಹೇಳಲಾಗಿತ್ತು. ಅಲ್ಲದೇ ಇವರೆಲ್ಲರೂ ಸೇರಿಕೊಂಡು ಕೊಲೆಗೂ ಮುನ್ನ ತಿಂಗಳ ಹಿಂದೆ ಕಳಸ ಸಮೀಪದ ಲಾಡ್ಜ್ ಒಂದರಲ್ಲಿ ಪಾರ್ಟಿ ಮಾಡಿದ್ದರಂತೆ. ಈ ಪಾರ್ಟಿ ಮುಗಿಸಿ ರಂಜಿತ್ ಹಾಗೂ ನಾಗರಾಜ್ ಕಳಸದಿಂದ ಮಂಗಳೂರಿಗೆ ಹೋಗಿದ್ದರು ಎಂದು ಹೇಳಲಾಗಿತ್ತು. ಇದೀಗ ಕೊಲೆ ಪ್ರಕರಣ ಸಂಬಂಧ ಎನ್.ಐ.ಎ. ಅಧಿಕಾರಿಗಳು ತನಿಖೆ ನಡೆಸುತ್ತಿರುವುದರಿಂದ ಎನ್.ಐ.ಎ. ಅಧಿಕಾರಿಗಳ ಕಳಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು