4:37 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

5 ದಶಕಗಳ ನಂತರ ಕರಾವಳಿಗೆ ಬಂದ ಶಾರುಖ್‌ ಖಾನ್‌: ಬಾಲಿವುಡ್‌ ಬಾದಶಾಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

25/06/2026, 18:49

ಮಂಗಳೂರು(reporterkarnataka.com): ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಕರಾವಳಿ ವಲಯದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್ ಆಯೋಜಿಸಿರುವ “ಆನ್ ಇವನಿಂಗ್ ವಿತ್ ಶಾರುಖ್ ಖಾನ್” ಎಂಬ ವಿಶೇಷ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕಿಂಗ್‌ ಖಾನ್‌ ನೋಡಲು ಬಂದ ಅಭಿಮಾನಿಗಳು
ಇನ್ನು ಮಂಗಳೂರಿಗೆ ಸೂಪರ್‌ ಸ್ಟಾರ್‌ ಖಾನ್‌ ಬರುತ್ತಿರುವ ವಿಚಾರ ತಿಳಿದ ಅಪಾರ ಅಭಿಮಾನಿಗಳು ಅವರನ್ನ ನೋಡಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ತಮ್ಮ ಅಭಿಮಾನಿಗಳನ್ನ ನೋಡಿ ಕೈ ಬೀಸಿದ ಶಾರುಖ್‌, ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ.


ನಾನು ಮಂಗಳೂರಿನ ಮಗ ಎಂದಿದ್ದ ಶಾರುಖ್ ಖಾನ್
ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಖಾನ್ ಕರಾವಳಿಗೆ ಬರುತ್ತಿರುವುದು ಕೇವಲ ಒಂದು ಪ್ರಚಾರದ ಭೇಟಿಯಲ್ಲ. ಶಾರುಖ್ ಖಾನ್ ಅವರಿಗೆ ಮಂಗಳೂರು ನಗರದೊಂದಿಗೆ ಅತ್ಯಂತ ಭಾವನಾತ್ಮಕ ಮತ್ತು ಆಳವಾದ ಬಾಲ್ಯದ ಒಡನಾಟವಿದೆ. ಈ ಹಿಂದೆ ಹಲವು ಸಂದರ್ಶನಗಳಲ್ಲಿ ಸ್ವತಃ ಶಾರುಖ್ ಖಾನ್ ಅವರೇ ಈ ರಹಸ್ಯವನ್ನು ಬಿಚ್ಚಿಟ್ಟಿದ್ದು, ತಮ್ಮನ್ನು ತಾವೇ “ಮಂಗಳೂರಿನ ಮಗ” ಎಂದು ಹೆಮ್ಮೆಯಿಂದ ಕರೆದುಕೊಂಡಿದ್ದಾರೆ. ಶಾರುಖ್ ಖಾನ್ ಅವರ ತಾಯಿಯ ತಂದೆ ಅಂದರೆ ಶಾರುಖ್ ಅವರ ತಾತ ಇಫ್ತಿಕಾರ್ ಅಹಮದ್ ಅವರು 1960ರ ದಶಕದಲ್ಲಿ ಮಂಗಳೂರು ಬಂದರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅವರ ಇಡೀ ಕುಟುಂಬ ಮಂಗಳೂರಿನಲ್ಲೇ ವಾಸವಾಗಿತ್ತು.
1965ರ ನವೆಂಬರ್ 2 ರಂದು ದೆಹಲಿಯಲ್ಲಿ ಜನಿಸಿದ ಶಾರುಖ್, ಹುಟ್ಟಿದ ತಕ್ಷಣವೇ ಮಂಗಳೂರಿಗೆ ಬಂದಿದ್ದರು. ತಮ್ಮ ಬಾಲ್ಯದ ಮೊದಲ ಐದು ವರ್ಷಗಳನ್ನು ಅವರು ಕರಾವಳಿಯ ಈ ಸುಂದರ ನಗರದಲ್ಲೇ ಕಳೆದಿದ್ದರು. ಶಾರುಖ್ ಅವರ ಅಜ್ಜಿಗೆ ಗಂಡು ಮಕ್ಕಳಿಲ್ಲದ ಕಾರಣ, ಅವರೇ ಶಾರುಖ್ ಅವರನ್ನು ದತ್ತು ಪಡೆದು ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿದ್ದರು. ತಮ್ಮ ಬಾಲ್ಯದ ಬಹುಪಾಲು ಸುಂದರ ಫೋಟೋಗಳನ್ನು ಮಂಗಳೂರಿನಲ್ಲೇ ತೆಗೆಯಲಾಗಿತ್ತು ಎಂದು ಕಿಂಗ್ ಖಾನ್ ನೆನಪಿಸಿಕೊಂಡಿದ್ದಾರೆ.
5 ದಶಕಗಳ ನಂತರ ಮಂಗಳೂರಿಗೆ ಕಿಂಗ್‌ ಖಾನ್
ಮಂಗಳೂರು ಮಾತ್ರವಲ್ಲದೆ ಕರ್ನಾಟಕದ ರಾಜಧಾನಿ ಬೆಂಗಳೂರಿನೊಂದಿಗೂ ಶಾರುಖ್ ಖಾನ್‌ಗೆ ವಿಶೇಷ ನಂಟಿದೆ. ಬೆಂಗಳೂರಿನ ನಂದಿದುರ್ಗ ರಸ್ತೆ, ಜಯಮಹಲ್ ಎಕ್ಸ್‌ಟೆನ್ಶನ್ ಹಾಗೂ ಪ್ಯಾಲೇಸ್ ರಸ್ತೆಗಳ ಸುತ್ತಮುತ್ತ ತಮಗಿರುವ ಬಾಲ್ಯದ ನೆನಪುಗಳನ್ನು ಅವರು ಆಗಾಗ ಮೆಲುಕು ಹಾಕುತ್ತಿರುತ್ತಾರೆ. ಚಿತ್ರರಂಗಕ್ಕೆ ಪ್ರವೇಶಿಸಲು ಮುಂಬೈಗೆ ಕಳುಹಿಸಿಕೊಟ್ಟ ತಮ್ಮ ಜೀವನದ ಮೊದಲ ಫೋಟೋವನ್ನು ಕೂಡ ಬೆಂಗಳೂರಿನಲ್ಲೇ ತೆಗೆಸಲಾಗಿತ್ತು ಎಂಬ ಅಪರೂಪದ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ. ಇಷ್ಟೆಲ್ಲಾ ಕರ್ನಾಟಕದ ನಂಟಿದ್ದರೂ ಕನ್ನಡ ಮಾತನಾಡಲು ಏಕೆ ಬರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ನಟ, “ನಾನು ತೀರಾ ಚಿಕ್ಕ ವಯಸ್ಸಿನಲ್ಲೇ ದೆಹಲಿಗೆ ಮರಳಿದ್ದರಿಂದ ಕನ್ನಡ ಕಲಿಯುವ ಅವಕಾಶ ಸಿಗಲಿಲ್ಲ. ಆದರೆ ನನ್ನ ತಾಯಿ ಅತ್ಯಂತ ಸರಾಗವಾಗಿ ಕನ್ನಡ ಮಾತನಾಡುತ್ತಿದ್ದರು” ಎಂದು ಹೇಳಿದ್ದರು. ಐದು ದಶಕಗಳ ಬಳಿಕ ಶಾರುಖ್ ಖಾನ್ ತಮ್ಮ ಬಾಲ್ಯದ ದಿನಗಳ ನೆನಪನ್ನು ಹೊತ್ತ ಮಂಗಳೂರಿಗೆ ಮರಳಿ ಬರುತ್ತಿರುವುದು ದಕ್ಷಿಣ ಕನ್ನಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹಾಗೂ ಉತ್ಸಾಹವನ್ನು ಮೂಡಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು