2:52 AM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಸೌಜನ್ಯಕ್ಕೂ ಪ್ರಧಾನಿ ಮೋದಿ ಬಿಎಸ್ ವೈ, ನಳಿನ್ ಹೆಸರು ಹೇಳಲಿಲ್ಲ: ಕಾಂಗ್ರೆಸ್ ವ್ಯಂಗ್ಯ

02/09/2022, 23:27

ಬೆಂಗಳೂರು(reporterkarnataka.com): ಮಂಗಳೂರಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಭಾಷಣದ ಆರಂಭದಲ್ಲಿ ಮಾಜಿ ಮುಖ್ಯಮಂತ್ರಿಯವರು ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರನ್ನೇ ಪ್ರಸ್ತಾಪಿಸಿಲ್ಲ. ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಇದನ್ನು ಅಸ್ತ್ರವಾಗಿ ಬಳಸಿ ಕಟು ಟೀಕೆ ಮಾಡಿದೆ.

ಬಿ.ಎಸ್.ಯಡಿಯೂರಪ್ಪ ಅವರೀಗ ಬಿಜೆಪಿಯಲ್ಲಿ ಚಲಾವಣೆ ಇಲ್ಲದ ನಾಣ್ಯ. ಬಿಎಸ್ ವೈ ವೇದಿಕೆಯಲ್ಲಿದ್ದರೂ ಮೋದಿಯವರು ಸೌಜನ್ಯಕ್ಕೂ ಅವರ ಹೆಸರು ಹೇಳಲಿಲ್ಲ, ಇಷ್ಟು ಬೇಗ BSYBJP ಅವರು ಒಡೆದ ಮಡಕೆಯಂತಾದರೇ ಬಿಜೆಪಿಯವರಿಗೆ? ಅಡ್ವಾಣಿಯನ್ನೇ ಮುಕ್ತ ಮಾಡಿರುವಾಗ #BSYmuktaBJP ಮಾಡುವುದು ಮೋದಿಯವರಿಗೆ ಯಾವ ಲೆಕ್ಕ! ಉಂಡ ಮನೆಯ ಗಳ ಹಿರಿಯುವುದು ಬಿಜೆಪಿ ಹುಟ್ಟುಗುಣ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಪ್ರಧಾನಿ ಮೋದಿ ಭೇಟಿಯ ಬಳಿಕ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ಬೆಂಗಳೂರ್ – ಮೈಸೂರ್ ರೈಲನ್ನು ಭಾಷಣದಲ್ಲಿ ಅದ್ಭುತವಾಗಿ ಬಿಟ್ಟಿದ್ದ ನರೇಂದ್ರ ಮೋದಿ ಅವರೇ, ಮೈಸೂರು ಪ್ಯಾರಿಸ್ ಆಗ್ಲಿಲ್ಲ. ಸಬ್ ಅರ್ಬನ್ ರೈಲು ನಿಗದಿತ ಅವಧಿ ಮುಗಿಯುತ್ತಾ ಬಂದರೂ ಓಡಲಿಲ್ಲ. ಮೈಸೂರು ಹೆದ್ದಾರಿಯು ಜಲಮಾರ್ಗವಾಗಿದೆ! ರಸ್ತೆ ಗುಂಡಿಗಳು ಪ್ರಾಣ ತೆಗೆಯುತ್ತಿವೆ. ಇದಕ್ಕೆ #NimHatraIdyaUttara ? #ModiMosa ಎಂದು ಟೀಕಿಸಿದೆ.

ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ, ದಕ್ಷಿಣ ಕನ್ನಡದ ಸಂಸದ, ಹೀಗಿದ್ದೂ ವೇದಿಕೆಯಲ್ಲಿ ಪ್ರಧಾನಿ ಕಟೀಲ್ ರ ಹೆಸರು ಹೇಳದಿರುವುದು ಏಕೆ..? ಕಾರ್ಯಕರ್ತರು ಕಾರು ಅಲ್ಲಾಡಿಸಿದ ಪರಿಣಾಮವೇ? ನಳಿನ್ ವಿರೋಧಿ ಬಣದ ಅಭಿಯಾನಕ್ಕೆ ಸಿಕ್ಕ ಯಶಸ್ಸೇ.? ಸಂಸತ್ ಅಭ್ಯರ್ಥಿ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯ ಸೂಚನೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು