10:37 AM Saturday20 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಸೂತಕದ ಮನೆಯಂತಿದ್ದ ಮುರುಡೇಶ್ವರ ಕಡಲ ಕಿನಾರೆಗೆ ಮತ್ತೆ ರಂಗು: ಮೋಜು- ಮಸ್ತಿಗೆ ಜಿಲ್ಲಾಡಳಿತ ಪರ್ಮಿಷನ್

29/12/2024, 21:06

ಭಟ್ಕಳ(reporterkarnataka.com): ಮೂವರು ಶಾಲಾ ಬಾಲಕಿಯ ಇತ್ತೀಚೆಗೆ ಆಹುತಿ ಪಡೆದು ಸೂತಕದ ಮನೆಯಂತಿದ್ದ ಮುರುಡೇಶ್ವರ ಕಡಲ ಕಿನಾರೆಗೆ ಮತ್ತೆ ರಂಗು ಬಂದಿದೆ. ಜಿಲ್ಲಾಡಳಿತ ಇಲ್ಲಿ ಜಲಕ್ರೀಡೆಗೆ ನಡೆಸಲು ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ವಾಪಸ್ ಪಡೆದಿದೆ.
ಭಟ್ಕಳ ಸಮೀಪದ ಮುರುಡೇಶ್ವರ ದೇವಾಲಯ ದೇಶ- ವಿದೇಶಗಳ ಭಕ್ತರ, ಪ್ರವಾಸಿಗರ ಆಗಮನದ ತಾಣವಾಗಿದೆ. ಆಗಸದೆತ್ತರದ ಇಲ್ಲಿನ ಭಗವಾನ್ ಶಿವನ ಸುಂದರ ಮೂರ್ತಿ ವಿಶೇಷ ಆಕರ್ಷಣೆಯಾಗಿದೆ. ಇತ್ತೀಚೆಗೆ ಇಲ್ಲಿ ಪ್ರವಾಸಕ್ಕೆ ಆಗಮಿಸಿದ ಕೋಲಾರ ಜಿಲ್ಲೆಯ ಶಾಲಾ ಮಕ್ಕಳ ಪೈಕಿ ಮೂವರು ಬಾಲಕಿಯರು ಸಮುದ್ರಪಾಲಾಗಿ ಜೀವ ಕಳೆದುಕೊಂಡಿದ್ದರು. ಸುರಕ್ಷತೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯ ಬಗ್ಗೆ ಸಾರ್ವಜನಿಕರಿಂದ ಕಟು ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಮುದ್ರದಲ್ಲಿ ಜಲಕ್ರೀಡೆಗೆ ನಿರ್ಬಂಧ ವಿಧಿಸಿತ್ತು.
ಇದೀಗ ಜಿಲ್ಲಾಡಳಿತ ದುರಂತದ ನಡೆದು 19 ದಿನಗಳ ಬಳಿಕ ಕಡಲತೀರ ಪ್ರವಾಸಿಗರಿಗೆ ಮುಕ್ತವಾಗಿಸಿದೆ. ಕಡಲತೀರದಲ್ಲಿ ಅಪಾಯಕಾರಿ ವಲಯ (ಡೇಂಜರ್ ಜೋನ್) ಮತ್ತು ಸುರಕ್ಷಿತ ವಲಯ(ಸೇಫ್ ಜೋನ್) ಎಂದು ಎರಡು ವಿಭಾಗ ಮಾಡಿ ಗುರುತಿಸಲಾಗಿದೆ. ಜಿಲ್ಲಾಡಳಿತ ಗುರುತಿಸಿದ ಸೇಫ್ ಜೋನ್‌ನಲ್ಲಿ ಮಾತ್ರ ಪ್ರವಾಸಿಗರು ಈಜಾಡಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು