ಇತ್ತೀಚಿನ ಸುದ್ದಿ
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್: ಗಿಡ ನೆಡುವ, ನೀರುಣಿಸುವ ಹಾಗೂ ಸ್ವಚ್ಛತಾ ಕಾರ್ಯಕ್ರಮ
13/12/2021, 08:43
ಮಂಗಳೂರು(reporterkarnataka.com); ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ಹಾಗೂ ಮಂಗಳೂರು ಬ್ಲೂಂ ಜಂಟಿ ಆಶ್ರಯದಲ್ಲಿ ಭಾನುವಾರ ನಗರದ ಮಣ್ಣಗುಡ್ಡೆಯಿಂದ ಉರ್ವ ಕೆನರಾ ಹೈಸ್ಕೂಲ್ ವರೆಗಿನ ರಸ್ತೆ ವಿಭಾಜಕಗಳಲ್ಲಿ ಗಿಡಗಳಿಗೆ ನೀರುಣಿಸುವ, ಗಿಡಗಳನ್ನು ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬೆಳಗ್ಗೆ 7.30 ರಿಂದ 9.30 ರ ವರೆಗೆ ನಗರದ ಮಣ್ಣಗುಡ್ಡೆಯಿಂದ ಉರ್ವ ಕೆನರಾ ಹೈಸ್ಕೂಲ್ ವರೆಗಿನ ರಸ್ತೆ ವಿಭಾಜಕಗಳಲ್ಲಿ ಗಿಡಗಳಿಗೆ ನೀರುಣಿಸುವ, ಗಿಡಗಳನ್ನು ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ನ ಅಧ್ಯಕ್ಷ


ಹರಿಪ್ರಸಾದ್ ರೈ, ಸೀನಿಯರ್ ಚೇಂಬರ್ ನ ಮಾಲತಿ ಶೆಟ್ಟಿ, ಲತಾ ಕಲ್ಲಡ್ಕ, ಮಂಗಳೂರು ಬ್ಲೂಂ ನ ಲೋಕೇಶ್ ಪುತ್ರನ್, ರಾಜೀವಿ ಚಂದ್ರಶೇಖರ್, ರಾಮಚಂದ್ರ ಭಟ್, ಪರಿಸರವಾದಿ ಕೃಷ್ಣಪ್ಪ, ಲೋಕೇಶ್ ಮತ್ತಿತ್ತರರು ಭಾಗವಹಿಸಿದ್ದರು. ಗಿರಿಜಾ ಚಾರಿಟೇಬಲ್ ಟ್ರಸ್ಟ್ ನವರು ಸಹಕರಿಸಿದರು.














