ಇತ್ತೀಚಿನ ಸುದ್ದಿ
ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ ತೇರ್ಗಡೆ
21/05/2026, 18:50
ಬೆಂಗಳೂರು(reporterkarnataka.com): 2025-26ನೇ ಸಾಲಿನ ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶ ಪ್ರಕಟವಾಗಿದೆ. ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಎರಡನೇ ಬಾರಿಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತನ್ನ ಅಧಿಕೃತ ವೆಬ್ ಸೈಟ್ನಲ್ಲಿ ರಿಸಲ್ಟ್ ಪ್ರಕಟಿಸಿದೆ.
2026ರ ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಗುರುವಾರ (ಮೇ 21) ಪ್ರಕಟಿಸಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿದಂತೆ ಒಟ್ಟು 80,535 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಈ ಪೈಕಿ 36,764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
*ಫಲಿತಾಂಶದ ವಿವರ:*
ಪಿಯುಸಿ ಎರಡನೇ ಪರೀಕ್ಷೆ-2 ಪರೀಕ್ಷೆಗೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ ಒಟ್ಟು 80,535 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 36,764 ವಿದ್ಯಾರ್ಥಿಗಳು ತೇಗರ್ಡೆಯಾಗಿದ್ದಾರೆ. ಇನ್ನು ಪರೀಕ್ಷೆ ಬರೆದಿದ್ದ 43,311 ಬಾಲಕರಲ್ಲಿ 19367 ವಿದ್ಯಾರ್ಥಿಗಳು ಪಾಸಾಗಿದ್ದರೆ, 37,224 ಬಾಲಕಿಯರ ಪೈಕಿ 17,397 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಉನ್ನತ ಶ್ರೇಣಿ: 85%ಕ್ಕಿಂತ ಹೆಚ್ಚು ಅಂಕ ಪಡೆದವರು 62 ವಿದ್ಯಾರ್ಥಿಗಳು,
ಪ್ರಥಮ ದರ್ಜೆ: 60%-85% ಅಂಕ ಪಡೆದ ವಿದ್ಯಾರ್ಥಿಗಳು 8086
ದ್ವಿತೀಯ ದರ್ಜೆ : 50%-60% ಅಂಕ ಪಡೆದ ವಿದ್ಯಾರ್ಥಿಗಳು 16,940, ಇನ್ನು ಶೇಕಡಾ 50% ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು 11,676.
ಹೊಸಬರು : 80,535 ವಿದ್ಯಾರ್ಥಿಗಳ ಪೈಕಿ 36,764 ವಿದ್ಯಾರ್ಥಿಗಳು ಉತ್ತೀರ್ಣ
ಪುನರಾವರ್ತಿತ : 34,419 ವಿದ್ಯಾರ್ಥಿಗಳ ಪೈಕಿ 10,279 ವಿದ್ಯಾರ್ಥಿಗಳು ಉತ್ತೀರ್ಣ
ಖಾಸಗಿ : 5456 ವಿದ್ಯಾರ್ಥಿಗಳ fಪೈಕಿ 1562 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.












