12:16 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಸರಕಾರದಿಂದ ಇನ್ನೂ ಸಿಕ್ಕಿಲ್ಲ ವಿಶೇಷ ಪ್ಯಾಕೇಜ್: ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳುವರ್ಯಾರು?  

29/05/2021, 08:18

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ಹೊಡೆತಕ್ಕೆ ಇಡಿ ರಾಜ್ಯವೇ ತಲ್ಲಣಗೊಂಡಿದೆ. ಇಂಥ ಪರಿಸ್ಥಿತಿಯ ಖಾಸಗಿ ಶಾಲಾ ಶಿಕ್ಷಕ ಬದುಕು ಬೀದಿಗೆ ಬಂದಿದೆ. ನಾವು ಗುರುವೇ ದೇವರು ಎಂದು ನಂಬುತ್ತೇವೆ. ಅಂತಹ ಗುರುಗಳು ಕಳೆದ ಎರಡು ವರ್ಷಗಳಿಂದ ಯಾವುದೇ ಸಂಬಳವಿಲ್ಲದೆ ಕುಟುಂಬ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.

ಖಾಸಗಿ ಶಾಲೆ ಶಿಕ್ಷಕರ ಪರಿಸ್ಥಿತಿ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕಿರುವುದು ಎದ್ದುಕಾಣುತ್ತದೆ. ಜಿಲ್ಲೆ ಎಲ್ಲ ಅತಿಥಿ ಶಿಕ್ಷಕರು, ಖಾಸಗಿ ಶಾಲಾ ಶಿಕ್ಷಕರು ನೋವು ಅನುಭವಿಸುತ್ತಿದ್ದಾರೆ. ಖಾಸಗಿ ಆಡಳಿತ ಮಂಡಳಿ ಕೆಲವರಿಗೆ ಸಂಬಳ ಕೊಟ್ಟಿದ್ದಾರೆ. ಕೆಲವರಿಗೆ ಕೊಟ್ಟಿಲ್ಲ. ಯಾವುದೇ ಹಣ ನೀಡದೆ ಸಂಸ್ಥೆ  ಕೈತೊಳೆದುಕೊಂಡಿದೆ. ಸರಕಾರ ವಿಶೇಷ ಪ್ಯಾಕೇಜ್ ಮಾಡುತ್ತದೆ ಎಂದು ಭರವಸೆ ನೀಡಿ ಇಲ್ಲಿವರೆಗೂ ಯಾವುದೇ ಜಾರಿಗೊಳಿಸದೆ ಮತ್ತಷ್ಟು ಶಿಕ್ಷಣ ಕ್ಷೇತ್ರದಲ್ಲಿ ನೋವು ಉಂಟುಮಾಡಿದೆ. ಮನಸ್ಸಿಗೆ ನಿರಾಶೆ ತಂದಿದೆ.  ಉನ್ನತ ಕೋರ್ಸ್ ಮುಗಿಸಿ ಪರಿಣತಿ ಪಡೆದವರಿಗೆ ಕೂಡ ನಿರುದ್ಯೋಗ ತಪ್ಪಿಲ್ಲ. ಎರಡು ವರ್ಷ ಕೊರೊನಾ ಲಾಕ್ ಡೌನ್ ಆಗಿ ಶಾಲಾ ಕಾಲೇಜು ಸರಕಾರ ರಜೆ ಘೋಷಣೆ ಮಾಡಿರುವುದರಿಂದ ಒಂದು ದಿನದ ಆಹಾರ ಪಡೆದುಕೊಳ್ಳಲು ಸಹ ಕಣ್ಣೀರು ಹಾಕುವ ಪರಿಸ್ಥಿತಿ ಉದ್ಬವಿಸಿದೆ.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಶಾಸಕರು   ಎಲ್ಲಾ ಭರವಸೆಗಳನ್ನು ನೀಡಿ, ಮನವಿ ಪತ್ರ ಸ್ವೀಕರಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಥಳೀಯ ಪ್ರತಿನಿಧಿ ಆದರೂ ಸಹಾಯ ಮಾಡಬಹುದು ಎಂಬ ಭರವಸೆಯ ಮೇಲೆ ನಂಬಿ ಕುಂತಿರುವ ಖಾಸಗಿ ಶಿಕ್ಷಕರ ಗೋಳು ಕೇಳುವವರೇ ಇಲ್ಲವಾಗಿದೆ. ಸರಕಾರ ಎಚ್ಚೆತ್ತುಕೊಂಡು ವಿದ್ಯೆ ಕಲಿಸುವ ಗುರುಗಳಿಗೆ ವಿಶೇಷ ಪ್ಯಾಕೇಜ್ ಜಾರಿಗೊಳಿಸಿ  ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಕುರಿತು ಖಾಸಗಿ ಶಾಲಾ ಶಿಕ್ಷಕಿ ಕೆ. ಸರಸ್ವತಿ ನಾಗರಾಜ್ ಗಂಗಾಮತ ಮಾತನಾಡಿ, ಸರಕಾರ ಅತಿಥಿ ಉಪನ್ಯಾಸಕರಿಗೆ, ಖಾಸಗಿ ಶಿಕ್ಷಕರಿಗೆ ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡಬೇಕು. ಖಾಸಗಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಕಳೆದ 2 ವರ್ಷಗಳು ಕಷ್ಟಗಳು ಎದುರಿಸುವಂತಾಗಿದೆ ಎಂದು ತಮ್ಮ ನೋವನ್ನು ರಿಪೋರ್ಟರ್ ಕರ್ನಾಟಕ ಮುಂದೆ ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು