11:29 PM Friday14 - August 2026
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜೂನ್ ತಿಂಗಳ ಟಾಪರ್ ಆಗಿ ರಿಧಿ ಪಿ.ಬಂಗೇರ ಹಾಗೂ ಪ್ರತೀಕ್ಷಾ ಅನಿಲ್ ಆಯ್ಕೆ

25/07/2026, 21:51

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಟಾಪರ್ ಆಗಿ ರಿಧಿ ಪಿ.ಬಂಗೇರ ಹಾಗೂ ಪ್ರತೀಕ್ಷಾ ಅನಿಲ್ ಆಯ್ಕೆಯಾಗಿದ್ದಾರೆ.


ರಿಧಿ ಪಿ ಬಂಗೇರ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ. ಕಲಿಕೆಯ ಜೊತೆಗೆ ಭರತನಾಟ್ಯವನ್ನು ಸುಖಾದ ಭಾರ್ವೆ ಅವರಲ್ಲಿ ಕಲಿಯುತ್ತಿದ್ದು, ಜೂನಿಯರ್ ವಿಭಾಗದ ಪರೀಕ್ಷೆ ಮುಗಿಸಿ ಸೀನಿಯರ್ ವಿಭಾಗವನ್ನು ಕಲಿಯುತ್ತಿದ್ದಾಳೆ. ಕಲಾರಾಧನೆ ತಂಡದಲ್ಲಿ ಉತ್ಸಾಹಿ ಪ್ರತಿಭೆಯಾಗಿ ಮಿಂಚುತ್ತಿದ್ದಾಳೆ. ಇವಳ ಪ್ರತಿಭೆಗೆ ತಂದೆ ತಾಯಿ ಹಾಗೂ ಕಲಾ ಪೋಷಕರು ಸದಾ ಬೆನ್ನೆಲುಬಾಗಿ ಪ್ರೋತ್ಸಾಹ ನೀಡುತ್ತಿದ್ದಾರ.
ಅನಿಲ್ ಕುಮಾರ್ ಉತ್ತಮನ್, ಶೈಲಜಾ ಅವರ ಮಗಳಾದ ಪ್ರತೀಕ್ಷಾ ಅನಿಲ್, ಮುಂಡುಗೋಡ
ಬ್ಲೂಮಿಂಗ್ ಬರ್ಡ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಭರತನಾಟ್ಯ, ವೆಸ್ಟರ್ನ್ ಡಾನ್ಸ್, ಕರಾಟೆ, ಯೋಗ, ಸಂಗೀತ, ಚಿತ್ರ ಬಿಡಿಸುವುದು, ಭಜನೆ, ಕ್ರೀಡೆ ವಿವಿಧ ಕ್ಷೇತ್ರದಲ್ಲಿ ಅಪಾರ ಭರವಸೆ ಮೂಡಿಸಿರುವ ಪ್ರತಿಭೆಯಾಗಿದ್ದಾಳೆ. ತನ್ನ ಎಂಟನೇ ವಯಸ್ಸಿನಲ್ಲಿ ಭರತನಾಟ್ಯ, ಕೂಚುಪುಡಿ ಮತ್ತು ಮೋಹಿನಿ ಆಟಂ ಅಭ್ಯಾಸವನ್ನು ಶಶಿರೇಖಾ ಭೈಜು ಅವರಲ್ಲಿ ಕಲಿಯುತ್ತಿದ್ದಾಳೆ. ಮುಂಡುಗೋಡಲ್ಲಿ ನಡೆಯುವ ದೀಪೋತ್ಸವ ನೃತ್ಯಸಂಜೆ, ನವರಾತ್ರಿ ಉತ್ಸವ, ಗಣೇಶೋತ್ಸವ ರಾಮೋತ್ಸವ, ಅನ್ವಲ್ ಡೇ, ಕೇರಳ ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಮತ್ತು ಮೋರ್ಲಾ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾಳೆ. ವಾಯ್ಸ್ ಆಫ್ ಆರಾಧನಾ ತಂಡದವರು ನೆಲ್ಲಿತೀರ್ಥ ದೇವಸ್ಥಾನದಲ್ಲಿ ನಡೆಸಿದ ಭರತನಾಟ್ಯದಲ್ಲಿ ಭಾಗವಹಿಸಿ ಸಾಧನ ರತ್ನ ಪ್ರಶಸ್ತಿ ಪಡೆದಿದ್ದಾಳೆ. ನಂದಳಿಕೆ ದುರ್ಗಾ ಫ್ರೆಂಡ್ಸ್ ಕ್ಲಬ್ , ಮಂಗಳೂರು ಮಂಗಳಾದೇವಿ ದೇವಸ್ಥಾನ, ಮುಂಡುಗೋಡ ನಡೆದಿರುವ ಪತ್ರಕರ್ತರ ಸಂಘದಲ್ಲಿ, ವಿಮೆನ್ಸ್ ಡೇ ವಿನ್ನರ್ ವೇಲ್ ಕ್ಲಬ್, ನವರಾತ್ರಿಗೆ ಮುಲ್ಕಿ ಅರಮನೆಯಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾಳೆ. ವೆಸ್ಟರ್ನ್ ಡ್ಯಾನ್ಸ್ ಸಂದೀಪ್ ಕೋರಿ ಅವರ ಹತ್ತಿರ, ಕರಾಟೆ ಸುರೇಂದ್ರ ನ್ಯಾಸರ್ಗಿ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾಳೆ. ಕರ್ನಾಟಕ ಸಂಗೀತವನ್ನು ರೇಖಾ ಮರಾಠೆ ಅವರಲ್ಲಿ ಕಲಿಯುತ್ತಿದ್ದಾಳೆ. ಯೋಗ ಅಭ್ಯಾಸವನ್ನು ಶರತ್ ಮಾರ್ಗಿ ಲಡ್ಕ ಅವರಲ್ಲಿ ಆನ್ಲೈನ್ ಅಭ್ಯಾಸ ಮಾಡುತ್ತಿದ್ದಾಳೆ. ರಾಜ್ಯಪಟ್ಟದ ಯೋಗದಲ್ಲಿ ಮಹಾತ್ಮ ಗಾಂಧಿ ಟ್ಯಾಲೆಂಟ್ ಯೋಗರತ್ನ ಅವಾರ್ಡ್, ಬೆಂಗಳೂರು ಇಂಟರ್ನ್ಯಾಷನಲ್ ಟ್ಯಾಲೆಂಟ್ ಅವಾರ್ಡ್, ಸೂರ್ಯ ನಮಸ್ಕಾರ ಸಂಗಮ 2020, ಸೂರ್ಯ ನಮಸ್ಕಾರ ಸಿರಿ ಅವಾರ್ಡ್ ಬಂದಿದೆ. ಬಿ.ಕೆ. ಐಯ್ಯಂಗಾರ್ ಸ್ಮರಣಾರ್ಥ 7ನೇ ವರ್ಷದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯಶಿಪ್ 2023ರಲ್ಲಿ ಮೆರಿಟ್ ಸರ್ಟಿಫಿಕೇಟ್ 4ನೇ ಸ್ಥಾನ ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು