4:57 PM Sunday12 - April 2026
ಬ್ರೇಕಿಂಗ್ ನ್ಯೂಸ್
ಗಾಂಧಿ ಬದುಕೇ ಒಂದು ಸಂದೇಶ: ಮಸ್ಕಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಡಾ. ಕೊಡಗುಂಟಿ 3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ: ಚಂದ್ರದ್ರೋಣ ಪರ್ವತದ 2 ಸಾವಿರ… ಪ್ರಧಾನಿ‌ ಮೋದಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ರವಾನೆ: ವಿದೇಶಿ ಏಜೆನ್ಸಿಗಳ ಜತೆ ಸಂಪರ್ಕ;… ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ: ಪ್ರವಾಸಿಗರಿದ್ದ ಸ್ಟೀಮರ್ ಪಲ್ಟಿಯಾಗಿ 10 ಮಂದಿ… ಚಾಮರಾಜನಗರ; ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ…

ಇತ್ತೀಚಿನ ಸುದ್ದಿ

ನಂಜನಗೂಡು: ರಸ್ತೆ ದುರಸ್ತಿಗಾಗಿ ಗ್ರಾಮಸ್ಥರ ಜಾಥಾ; ಪಿಡಬ್ಲ್ಯುಡಿ ಇಲಾಖೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ

01/08/2024, 21:29

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಗುಂಡಿಯಲ್ಲಿ ರಸ್ತೆಯೋ, ರಸ್ತೆಯಲ್ಲಿ ಗುಂಡಿಯೋ ಎಂಬಂತೆ ಹಳ್ಳ ಗುಂಡಿ ಬಿದ್ದು ಕಿತ್ತು ಹೋಗಿರುವ ದೇವರಸನಹಳ್ಳಿ ಮುಖ್ಯರಸ್ತೆಯನ್ನು ಕೂಡಲೇ ದುರಸ್ತಿಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪಾದಯಾತ್ರೆ ನಡೆಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಮೂಲಕ ನಂಜನಗೂಡಿನಲ್ಲಿ ಪ್ರತಿಭಟನೆ ನಡೆಸಿದರು.


ಪಟ್ಟಣದ ಹಳ್ಳದ ಕೇರಿಯಿಂದ ಪ್ರತಿಭಟನಾ ಜಾಥಾ ಹೊರಟ ಆ ಭಾಗದ ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿ ನಾಮಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಾಗಿದರು
ದೇಣಿಗೆಯ ಡಬ್ಬ ಹಿಡಿದು ಸಾರ್ವಜನಿಕರು ರಸ್ತೆ ದುರಸ್ತಿಗೆ ಹಣ ಸಹಾಯ ಮಾಡಿ ಎಂದು ಸರ್ಕಾರದ ವಿರುದ್ಧ ಅಣುಕು ಪ್ರದರ್ಶನ ಸಹ ಮಾಡಿದರು
ದೇವರಸನಹಳ್ಳಿ, ಹೊಸೂರು, ಉಪ್ಪಿನ ಹಳ್ಳಿ
ಸಿಂಗಾರಿಪುರ , ಶ್ರೀನಗರ ಹಾಗೂ ಮಾಡ್ರಳ್ಳಿ ಗ್ರಾಮಸ್ಥರು ಆ ಭಾಗದ ಆಟೋ ಚಾಲಕರು ಜಾಥಾ ನಡೆಸಿ ಬಳಿಕ ಲೋಕೋಪಯೋಗಿ ಇಲಾಖೆ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಸರ್ಕಾರ ಹಾಗೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಗ್ರಾಮದ ಮುಖಂಡ ಮಹದೇವ್ ಹಾಗೂ ದೇವರಾಜ್ ಮಾತನಾಡಿ, ಹಲವಾರು ವರ್ಷಗಳಿಂದ ಯಾವುದೇ ಸರ್ಕಾರಗಳು ಹಾಗೂ ಶಾಸಕರು ಬಂದರೂ ಈ ರಸ್ತೆಯನ್ನು ದುರಸ್ತಿ ಪಡಿಸದೆ ಇರುವುದರಿಂದ ರಸ್ತೆಯಲ್ಲಿ ಹಳ್ಳ ಕೊಳ್ಳಗಳು ಗುಂಡಿಗಳು ಬಿದ್ದು ತಿರುಗಾಡುವುದಕ್ಕೆ ಯೋಗ್ಯವಾಗಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ, ವಯೋವೃದ್ದರಿಗೆ, ಗರ್ಭಿಣಿ ಬಾಣಂತಿಯರಿಗೆ ತಿರುಗಾಡಲು ತೊಂದರೆಯಾಗಿದೆ. ಅಲ್ಲದೆ ಹಲವರು ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುತ್ತಾರೆ. ಈಗಾಗಲೇ ನೂತನ ಶಾಸಕರಾದಿಯಾಗಿ ಸಿಎಂ ಸಿದ್ದರಾಮಯ್ಯನವರೆಗೂ ಮನವಿ ನೀಡಿ ಸಾಕಾಗಿದೆ. ಹಾಗಾಗಿ ಇನ್ನು 40 ದಿನಗಳ ಒಳಗಾಗಿ ಈ ರಸ್ತೆಯನ್ನು ದುರಸ್ತಿ ಪಡಿಸದೆ ಹೋದಲ್ಲಿ ನಂಜನಗೂಡು ಬಂದ್ ಮಾಡಿ ಪ್ರತಿನಿತ್ಯ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗ ನಿರಂತರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆಯ ಬಗ್ಗೆ ತಿಳಿಸಿದರು.
ನಂತರ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ರಸ್ತೆ ದುರಸ್ತಿಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟೇಶ್ ಸದಸ್ಯರುಗಳಾದ ಗೋವರ್ಧನ್, ಮಂಜುನಾಥ್ , ಸ್ವಾಮಿ ಗೌಡ, ಮಾಡ್ರಳ್ಳಿ ಮಲ್ಲೇಶ್, ಕೃಷ್ಣ, ಉಪ್ಪಿನಳ್ಳಿ ಮಹದೇವ್, ಸಿಂಗಾರಿಪುರ ಸುಂದರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು