ಇತ್ತೀಚಿನ ಸುದ್ದಿ
ಇದು ರಾಷ್ಟ್ರ ಕಂಡ ಭೀಕರ ದುರಂತ: ಭೂಕುಸಿತ ಕುರಿತು ವಯನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
01/08/2024, 21:32

ವಯನಾಡು(reporterkarnataka.com):ಇದು ವಯನಾಡು, ಕೇರಳ ಮತ್ತು ರಾಷ್ಟ್ರಕ್ಕೆ ಭೀಕರ ದುರಂತ. ನಾವು ಪರಿಸ್ಥಿತಿಯನ್ನು ನಿರ್ಣಯಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಇಂದು ಮಹಾ ದುರಂತ ಕಂಡ ವಯನಾಡಿಗೆ ಭೇಟಿ ನೀಡಿದ ಅವರು, ಮಾಧ್ಯಮ ಜತೆ ಮಾತನಾಡಿ, ಎಷ್ಟೋ ಮಂದಿ ಕುಟುಂಬ ಸದಸ್ಯರನ್ನು, ಮನೆ- ಮಠವನ್ನು ಕಳೆದುಕೊಂಡಿದ್ದಾರೆ ಎಂಬುದು ನೋವಿನ ಸಂಗತಿ ಎಂದರು.
ನಾವು ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಬದುಕುಳಿದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ.
ಅವರಲ್ಲಿ ಹಲವರು ಸ್ಥಳಾಂತರಗೊಳ್ಳಲು ಬಯಸುತ್ತಾರೆ. ಇಲ್ಲಿ ಮಾಡಬೇಕಾದ್ದು ಬಹಳಷ್ಟಿದೆ. ವೈದ್ಯರು, ನರ್ಸ್‌ಗಳು, ಆಡಳಿತ ಮತ್ತು ಸ್ವಯಂಸೇವಕರು ಸೇರಿದಂತೆ ಭಾಗವಹಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ನುಡಿದರು.