12:02 PM Saturday25 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ಎಂಸಿಸಿ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ: 111 ವರ್ಷಗಳ ಸಂಭ್ರಮದ ಸಾರ್ಥಕ ಸೇವೆ

09/05/2023, 18:42

ಮಂಗಳೂರು(reporterkarnataka.com): ಕರಾವಳಿ ಕರ್ನಾಟಕದ ಪ್ರಥಮ ಅರ್ಬಲ್ ಕೋ- ಆಪರೇಟಿವ್ ಬ್ಯಾಂಕ್ ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಲಿಮಿಟೆಡ್ ನ ಸಂಸ್ಥಾಪಕರ ದಿನಾಚರಣೆಯನ್ನು ಮೇ 7ರಂದು ಬ್ಯಾಂಕ್ ನ ಆಡಳಿತ ಕಚೇರಿ ಆವರಣದಲ್ಲಿ 111 ವರ್ಷಗಳ ಸಮರ್ಪಿತ ಸೇವೆಯನ್ನು ಪೂರ್ಣಗೊಳಿಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಧರ್ಮಗುರು ಫಾ. ಬೊನವೆಂಚರ್ ನಜರೆತ್ ಅವರು ಪವಿತ್ರ ಪೂಜೆಯನ್ನು ನೆರವೇರಿಸಿದರು. ಅವರು ದೂರದೃಷ್ಟಿಯ ಸಂಸ್ಥಾಪಕ ಪಿ.ಎಫ್. ಎಕ್ಸ್ ಸಲ್ದಾನಾ ಅವರು ಸಮಾಜದ ಅನುಕೂಲಕ್ಕಾಗಿ ಶ್ರೇಷ್ಠ ಸಂಸ್ಥೆಯನ್ನು ಪ್ರಾರಂಭಿಸುವ ಉದಾತ್ತ ಕಾರ್ಯವನ್ನು ಸ್ಮರಿಸಿ, ದಿನದ ಮಹತ್ವವನ್ನು ವಿವರಿಸಿದರು. ಕಳೆದ 111 ವರ್ಷಗಳಿಂದ ಬ್ಯಾಂಕ್ ನಿಂದ ಸಮಾಜಕ್ಕೆ ಉತ್ತಮ ಕೆಲಸವಾಗಿದೆ. ಮುಂದೆಯೂ ಬ್ಯಾಂಕ್ ಅಭಿವೃದ್ಧಿಗೆ ಆಡಳಿ ಮಂಡಳಿ ಮತ್ತು ಸಿಬ್ಬಂದಿಗಳು ದೂರದೃಷ್ಟಿಯುಳ್ಳವರಾಗಿದ್ದು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಂಗಳೂರಿನ ಪ್ರಾವಿಟ್ ಫುಡ್ ಪ್ರಾಡಕ್ಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ, ಜನರಲ್ ಮೆನೇಜರ್ ಸುನಿಲ್ ಮಿನೇಜಸ್ ಮತ್ತು ನಿರ್ದೇಶಕರು ವೇದಿಕೆಯಲ್ಲಿದ್ದರು. ಅನಿಲ್ ಲೋಬೊ ಅವರು ಪ್ರಾಸ್ತಾವಿಕವಾಗಿ ಗಣ್ಯರು, ಅತಿಥಿಗಳು, ಆಹ್ವಾನಿತರು ಮತ್ತು ಸಿಬ್ಬಂದಿಗಳನ್ನು ಸ್ವಾಗತಿಸಿ, 2018ರಲ್ಲಿ ಬ್ಯಾಂಕ್ ನ ಆಡಳಿತವನ್ನು ವಹಿಸಿಕೊಂಡ ಪ್ರಸ್ತುತ ಆಡಳಿತ ಮಂಡಳಿಯು ಈ ಮಹಾನ್ ಸಂಸ್ಥೆಯ ದಾರ್ಶನಿಕ ಸಂಸ್ಥಾಪಕರಾದ ಪಿ.ಎಫ್.ಎಕ್ಸ್ ಸಲ್ದಾನ್ಹಾ ಅವರನ್ನು ಗೌರವಿಸಲು, 2022ರಿಂದ ಸಂಸ್ಥಾಪಕರ ದಿನವನ್ನು ಆಚರಿಸಲು ಪ್ರಾರಂಭಿಸಿದೆ. ಇದರಿಂದ ದಾರ್ಶನಿಕ ಸಂಸ್ಥಾಪಕರ ಮಹತ್ತರ ಕಾರ್ಯಗಳು- ನಿರ್ದೇಶಕರು, ಸದಸ್ಯರು ಮತ್ತು ಸಿಬ್ಬಂದಿಯ ಮನಸ್ಸಿನಲ್ಲಿ ಉಳಿಯುತ್ತದೆ. ಬ್ಯಾಂಕ್ ಕಳೆದ ವರ್ಷದಲ್ಲಿ ಗ್ರಾಹಕರ ಸಭೆ, ಮಹಿಳಾ ದಿನಾಚರಣೆ, ಶತಮಾನೋತ್ಸವದ ನಂತರದ ದಶಮಾನೋತ್ಸವ, ಎನ್ ಆರ್ ಐ ಸಭೆ ಇತ್ಯಾದಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ಬ್ಯಾಂಕಿನ ಗ್ರಾಹಕರು ಮತ್ತು ಷೇರುದಾರರಲ್ಲಿ ಅಭಿಮಾನ ಮೂಡುವಂತೆ ಮಾಡುತ್ತದೆ. ಬ್ಯಾಂಕ್ ಸೊಸೈಟಿಯ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಗ್ರಾಹಕರು, ಷೇರುದಾರರ ವಿಶ್ವಾಸ ಗಳಿಸುವ ಪ್ರಬಲ ಹಣಕಾಸು ಸಂಸ್ಥೆಯಾಗಿ ಉಳಿದುಕೊಂಡಿದ್ದು, ಕಳೆದ 5 ವರ್ಷಗಳಿಂದ ಬ್ಯಾಂಕ್ ನ ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ವಿನ್ಸೆಂಟ್ ಕುಟಿನ್ಹಾ ಅವರು ಕಳೆದ ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿ, ಬ್ಯಾಂಕ್ ತನ್ನ ಕಾರ್ಯಕ್ಷೇತ್ರ ವನ್ನು ಎರಡು ಜಿಲ್ಲೆಗಳಿಂದ 7 ಜಿಲ್ಲೆಗಳಿಗೆ ವಿಸ್ತರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಬ್ಯಾಂಕಿನ ಅಭಿವೃದ್ಧಿಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಒಗ್ಗೂಡಿ ಶ್ರಮಿಸುವಂತೆ ಕೋರಿ, ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಿಂದ ಸ್ಥಾಪಕರ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮೇ ತಿಂಗಳಲ್ಲಿ ಹುಟ್ಡುಹಬ್ಬ ಆಚರಿಸಿಕೊಂಡವರನ್ನು ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸನ್ಮಾನಿಸಲಾಯಿತು.
ನಿರ್ದಶಕರುಗಳಾದ ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೆರೊ, ರೋಶನ್ ಡಿಸೋಜ, ಎಲ್ ರಾಯ್ ಕ್ರಾಸ್ಟೊ, ಡಾ. ಫ್ರೀಡಾ ಡಿಸೋಜ, ಸುಶಾಂತ್ ಸಲ್ದಾನ್ಹಾ, ಅಲ್ವಿನ್ ಪಿ. ಮೊಂತೆರೊ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಸ್, ಡಾ. ಜೆರಾಲ್ಡ್ ಪಿಂಟೋ ಅವರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೇಜಸ್ ವಂದಿಸಿದರು. ಉಳ್ಳಾಲ ಶಾಖೆಯ ಕಿರಿಯ ಸಹಾಯಕಿ ಶೈನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು