8:03 PM Wednesday26 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ ಜತೆ ರೋಮ್ಯಾನ್ಸ್

01/05/2026, 16:47

ಬೆಂಗಳೂರು(reporterkarnataka.com): ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲಿನ ಕರ್ಮಕಾಂಡಕ್ಕೆ ಬ್ರೇಕ್​ ಬೀಳುವ ಲಕ್ಷಣವೇ ಕಾಣ್ತಿಲ್ಲ. ಹಲವು ಶಿಸ್ತು ಕ್ರಮಗಳನ್ನು ಕೈಗೊಂಡ್ರೂ ಕೈದಿಗಳ ಆಟಾಟೋಪ ಹೆಚ್ಚುತ್ತಲೇ ಇದೆ. ಇದೀಗ ಜೈಲಿನಲ್ಲಿರೀ ಕೈದಿಯೊಬ್ಬ ಸೆಲ್​ನಲ್ಲಿ ಕುಳಿತು ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿರೋ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಈ ವಿಡಿಯೋ ತುಣುಕು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

*ಜೈಲಿನಲ್ಲೇ ಪತ್ನಿಗೆ ವಿಡಿಯೋ ಕಾಲ್:*
ಪರಪ್ಪನ ಅಗ್ರಹಾರದಲ್ಲಿ ಮತ್ತೆ ಕೈದಿಗಳ ಮೊಬೈಲ್ ಬಳಕೆ ಆರೋಪ ಕೇಳಿ ಬಂದಿದೆ. ವಿಚಾರಣಾಧೀನ ಖೈದಿಯಾಗಿದ್ದ ಅಕ್ಬರ್ ಎಂಬಾತ ಜೈಲಿನಲ್ಲಿ ಕುಳಿತುಕೊಂಡೇ ಪತ್ನಿಗೆ ವಿಡಿಯೋ ಕಾಲ್ ಮಾಡಿರೋದು ಬೆಳಕಿಗೆ ಬಂದಿದೆ.

*ಅಕ್ಬರ್​​ ಎಂಬಾತನಿಂದ ಮೊಬೈಲ್ ಬಳಕೆ:*
ವಿಚಾರಣಾಧೀನ ಕೈದಿಯಾಗಿದ್ದ ಅಕ್ಬರ್ ಎಂಬಾತನಿಂದ ಕದ್ದು-ಮುಚ್ಚಿ ಸೆಲ್​​ನಲ್ಲಿ ಮೊಬೈಲ್​ ಇಟ್ಟುಕೊಂಡು ಬಳಕೆ ಮಾಡ್ತಿದ್ದ ಎನ್ನುವ ಆರೋಪವಿದೆ. ಸದ್ಯ ಈತ ಜೈಲಿನಿಂದ ಬಿಡುಗಡೆಯಾಗಿದ್ದು, ಇದೀಗ ವಿಡಿಯೋ ವೈರಲ್ ಆಗ್ತಿದೆ.

*ಇನ್ಸ್ಟಾದಲ್ಲಿ ಹೆಂಡ್ತಿಯಿಂದ ವಿಡಿಯೋ ಶೇರ್:*
ಜೈಲಿನ ಒಳಭಾಗದಲ್ಲಿ ಕುಳಿತು ಪತ್ನಿಗೆ ವೀಡಿಯೋ ಕಾಲ್ ಮಾಡಿರೋ ವಿಡಿಯೋ ಈಗ ವೈರಲ್ ಆಗ್ತಿದೆ. ವಿಡಿಯೋ ಕಾಲ್ ಮಾಡಿರುವುದನ್ನ ಸ್ಕ್ರೀನ್ ರೆಕಾರ್ಡ್ ಮಾಡಿ ಅದನ್ನ ಆಕೆಯ ಪತ್ನಿಯೇ ಇನ್ಸ್ಟಾದಲ್ಲಿ‌ ಪೋಸ್ಟ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಆತ ಏನೋ ದೊಡ್ಡ ಸಾಧನೆ ಮಾಡಿದ್ದಾನೆ ಅನ್ನೋ ಹಾಗೇ ಜೈಲಿಂದ ರಿಲೀಸ್ ಆಗಿರುವ ವಿಡಿಯೋವನ್ನ ಕೂಡ ಪತ್ನಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

*ಜೈಲಿಂದ ರಿಲೀಸ್ ಆಗಿರೋ ಅಕ್ಬರ್:*
ಏಪ್ರಿಲ್ 28ರಂದು ಅಕ್ಬರ್ ಜೈಲಿನಿಂದ ಬಿಡುಗಡೆಯಾಗಿದ್ದು, ಆತ ರಿಲೀಸ್ ಆದ ವಿಡಿಯೋವನ್ನೂ ಪತ್ನಿ ಹಂಚಿಕೊಂಡಿದ್ದಳು. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಆಕೆ ಇನ್‌ಸ್ಟಾದಿಂದ ವಿಡಿಯೋ ಡಿಲೀಟ್ ಮಾಡಿದ್ದಾಳೆ.

*ಕೈದಿಗಳಲ್ಲಿ ಕೈಯಲ್ಲಿ ಮೊಬೈಲ್​ ಹೊಸದೇನು ಅಲ್ಲ:*
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಕೈಯಲ್ಲಿ ಮೊಬೈಲ್ ಇರುವ ವಿಡಿಯೋ ವೈರಲ್ ಆಗಿತ್ತು. ಶಂಕಿತ ಉಗ್ರನ ಕೈಯಲ್ಲಿ ಮೊಬೈಲ್ ಹೇಗೆ ಬಂತು ಎನ್ನುವ ಸಂಬಂಧ ಎನ್​ಐಎ ತನಿಖೆ ನಡೆಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಹಾಗೂ ಉಗ್ರರಿಗೂ ರಾಜಾತಿಥ್ಯ ನೀಡಲಾಗ್ತಿದೆ ಎನ್ನುವ ಆರೋಪ ಕೇಳಿ ಬರ್ತಾನೆ ಇದೆ. ಜೈಲಿನ ಕರ್ಮಕಾಂಡಕ್ಕೆ ಬ್ರೇಕ್​ ಬೀಳುವ ಲಕ್ಷಣವೇ ಕಾಣ್ತಿಲ್ಲ. ಹಲವು ಶಿಸ್ತು ಕ್ರಮಗಳನ್ನು ಕೈಗೊಂಡ್ರೂ ಕೈದಿಗಳ ಅಟ್ಟಹಾಸ ಹೆಚ್ಚುತ್ತಲೇ ಇದೆ. ಜೈಲಿನಲ್ಲಿ ರಾಜಾತಿಥ್ಯದ ಬಗ್ಗೆ ಕುರಿತ ನಾನಾ ವಿಡಿಯೋ ಹರಿದಾಡಿತ್ತು. ಬಳಿಕ ಅಲರ್ಟ್​ ಆದ ಜೈಲಾಧಿಕಾರಿಗಳು ಸೆಲ್​​ಗಳಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು